• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ರಾಜಕೀಯ

ಕೋಲಾರದಲ್ಲಿ ನಿಲ್ಲದ ಹೈಡ್ರಾಮಾ..? ಚಿಕ್ಕಪೆದ್ದಣ್ಣಗೆ ಟಿಕೆಟ್​ ವಿರೋಧಿಸಿ ರಾಜೀನಾಮೆ ನಾಟಕ..

ಪ್ರತಿಧ್ವನಿ by ಪ್ರತಿಧ್ವನಿ
March 27, 2024
in ರಾಜಕೀಯ
0
ಕೋಲಾರದಲ್ಲಿ ನಿಲ್ಲದ ಹೈಡ್ರಾಮಾ..? ಚಿಕ್ಕಪೆದ್ದಣ್ಣಗೆ ಟಿಕೆಟ್​ ವಿರೋಧಿಸಿ ರಾಜೀನಾಮೆ ನಾಟಕ..
Share on WhatsAppShare on FacebookShare on Telegram

ADVERTISEMENT

ಕೋಲಾರ ಲೋಕಸಭಾ ಚುನಾವಣಾ ಟಿಕೆಟ್​ ವಿಚಾರದಲ್ಲಿ ಕಾಂಗ್ರೆಸ್​ ನಾಯಕರ ಜಂಗೀಕುಸ್ತಿ ಚುನಾವಣೆ ಮುಕ್ತಾಯವಾದರೂ ನಿಲ್ಲುವ ಲಕ್ಷಣ ಕಾಣಿಸ್ತಿಲ್ಲ. ಸಚಿವ ಕೆ.ಹೆಚ್​ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್​ ಕನ್ಫರ್ಮ್​ ಆಗುತ್ತಿದ್ದಂತೆ ಕೋಲಾರ ಜಿಲ್ಲೆಯ ಮೂವರು ಶಾಸಕರು ಹಾಗು ಇಬ್ಬರು ಪರಿಷತ್​ ಸದಸ್ಯರು ರಾಜೀನಾಮೆ ಪ್ರಹಸನಕ್ಕೆ ಮುಂದಾಗಿದ್ದಾರೆ. ವಿಧಾನಸಭಾ ಸ್ಪೀಕರ್​ ಹಾಗು ವಿಧಾನಪರಿಷತ್​ ಸಭಾಪತಿಗೆ ರಾಜೀನಾಮೆ ಪತ್ರ ನೀಡುವ ನಿರ್ಧಾರ ಮಾಡಿದ್ದಾರೆ.

ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್​ ನಿರ್ಧಾರಕ್ಕೆ ಬಿಡೋಣ, ಹೈಕಮಾಂಡ್​ ಯಾರಿಗೆ ಟಿಕೆಟ್​​ ಕೊಡುತ್ತದೆ ಅವರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಗೆಲ್ಲಿಸಿಕೊಂಡು ಬರೋಣ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದರು. ರಮೇಶ್​ ಕುಮಾರ್​ ಹಾಗು ಕೆ.ಹೆಚ್​ ಮುನಿಯಪ್ಪರನ್ನು ಮುಖಾಮುಖಿ ಕೂರಿಸಿಕೊಂಡು ನಡೆಸಿದ ಸಂಧಾನ ಸಭೆಯಲ್ಲಿ ಒಂದು ಸಾಲಿನ ಅಜೆಂಡಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದರು. ಆದರೆ ಹೈಕಮಾಂಡ್​ ಆಯ್ಕೆ ಚಿಕ್ಕಪೆದ್ದಣ್ಣ ಅನ್ನೋದು ಖಚಿತ ಆಗುತ್ತಿದ್ದಂತೆ ರಮೇಶ್​ ಕುಮಾರ್​ ಬಣದ ನಾಯಕರು ಹೈಡ್ರಾಮಾ ಶುರು ಮಾಡಿದ್ದಾರೆ.

ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಪರಿಷತ್​ ಸದ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ಸೇರಿ ಐವರು ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರು. ಮಾಧ್ಯಮಗಳ ಜೊತೆಗೆ ಮಾತನಾಡಿರುವ ಮಾಲೂರು ಶಾಸಕ ಕೆ.ವೈ ನಂಜೇಗೌಡ, ಇಂದು ಕೋಲಾರ ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಹಾಗು ಇಬ್ಬರು MLC ರಾಜಿನಾಮೆ ನೀಡುತ್ತೇವೆ. ಕೆ.ಹೆಚ್ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಸ್ಪೀಕರ್ ಕಚೇರಿ ಹಾಗು ಸಂಜೆ ವೇಳೆಗೆ ಮಂಗಳೂರಿಗೆ ತೆರಳಿ ಸ್ಪೀಕರ್ ಖಾದರ್​ಗೆ ರಾಜೀನಾಮೆ ಪತ್ರ ನೀಡುತ್ತೇವೆ ಎಂದಿದ್ದಾರೆ.

ಕೋಲಾರ ಕಾಂಗ್ರೆಸ್ ಟಿಕೆಟ್ ಕಗ್ಗಂಟು ವಿಚಾರದ ಬಗ್ಗೆ ಮಾತನಾಡಿರುವ ಸಚಿವ ಕೆ ಎಚ್ ಮುನಿಯಪ್ಪ, ಇವತ್ತು ಸಾಯಂಕಾಲ ಟಿಕೆಟ್​ ಕ್ಲಿಯರ್ ಆಗಬಹುದು. ರಮೇಶ್ ಕುಮಾರ್ ಆದಿಯಾಗಿ ಎಲ್ಲರ ಜೊತೆಗೆ ಚರ್ಚೆ ಮಾಡಿದ್ದೇವೆ. ಕೊತ್ತೂರು ಮಂಜುನಾಥ್, ನಂಜೇಗೌಡ, ಅನಿಲ್ ಕುಮಾರ್ ಸೇರಿ ಎಲ್ಲರ ಜೊತೆಗೂ ಚರ್ಚೆ ಆಗಿದೆ. ನಾನು ಕೋಲಾರದಲ್ಲಿ ಏಳು ಬಾರಿ ಗೆದ್ದಿದ್ದೇನೆ, ಅನುಭವ ಇದೆ. ಎಲ್ಲರಿಗೂ ಮನವಿ ಮಾಡಿದ್ದೇನೆ ಅವಕಾಶ ಮಾಡಿಕೊಡಿ ಅಂತ. ಆಶಾಭಾವನೆ ಇದೆ ಟಿಕೆಟ್ ಆಗಬಹುದು ಅಂತ. ಕೋಲಾರ ಚಿಕ್ಕಬಳ್ಳಾಪುರ ತಡವಾದರೂ ಕೂಡ ಒಗ್ಗಟ್ಟಾಗಿದ್ದೇವೆ. ಕೆಲ ಶಾಸಕರ ರಾಜೀನಾಮೆ ನೀಡುತ್ತೇವೆ ಎಂಬ ಬೆದರಿಕೆ ವಿಚಾರದ ಬಗ್ಗೆ ಮಾತನಾಡಿ, ಅಭ್ಯರ್ಥಿ ಯಾರಾಗಬೇಕು ಎಂಬುದು ರಮೇಶ್ ಕುಮಾರ್ ಹಾಗೂ ಸಚಿವರ ಉಪಸ್ಥಿತಿಯಲ್ಲೇ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ ಅಂದಿದ್ದೇವೆ. ಇದಕ್ಕೆ ಮುಂದಾಳತ್ವ ರಮೇಶ್ ಕುಮಾರ್ ಅವರು ಎನ್ನುವ ಮೂಲಕ ಟಿಕೆಟ್​ ನಮಗೆ ಸಿಗುತ್ತೆ, ಗೆಲ್ಲುತ್ತೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೃಷ್ಣಮಣಿ

Tags: BJPCongress PartyK Y NanjegowdaK. R. Ramesh KumarKothur G. Manjunathಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಕೋಲಾರದಿಂದ ಮಲ್ಲೇಶ್ ಬಾಬು ಸ್ಪರ್ಧೆ ಖಚಿತ ! ಜೆಡಿಎಸ್ 3 ಕ್ಷೇತ್ರಗಳ ಅಭ್ಯರ್ಥಿಗಳು ಫೈನಲ್ !

Next Post

ಬೇಸಿಗೆಯಲ್ಲಿ ವಿದ್ಯುತ್‌ ಬರ ಇಲ್ಲ, ಸಮರ್ಪಕ ಪೂರೈಕೆಗೆ ಸಜ್ಜು: ಇಂಧನ ಸಚಿವ ಜಾರ್ಜ್‌

Related Posts

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
0

ಹೌದು ಕಾಮ್ರೇಡ್‌, “ ಮನಕೊಂದು ಮಾತ ಹೇಳದೆ ಹೋದೆಯಾ ಹಂಸ,,, “ ಎಂಬ ಕವಿತೆಯಲ್ಲಿ ಹೇಳಿರುವಂತೆ ನೀವು ಏಕಾಏಕಿ ನಿರ್ಗಮಿಸಿಬಿಟ್ಟಿರಿ. ಹೇಳದೆ ಕೇಳದೆ ಎಂದು ಖಂಡಿತವಾಗಿಯೂ ಆರೋಪಿಸುವುದಿಲ್ಲ...

Read moreDetails
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

February 2, 2026
ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

February 2, 2026
ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

ಸರ್ಕಾರಿ ನೌಕರರಿಗೆ ಸಂಬಳವಿಲ್ಲ: ಕಾರಣ ಇಲ್ಲಿದೆ!

February 2, 2026
ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

ಸಾಮಾಜಿಕ ಜಾಲತಾಣದಲ್ಲಿ  ಜಮಾತೆ ಇಸ್ಲಾಮಿ ಮುಖ್ಯಸ್ಥರ ಪೋಸ್ಟ್: ಬಾಂಗ್ಲಾದೇಶದಲ್ಲಿ ಆಕ್ರೋಶ! ಆಗಿದ್ದಾದರೂ ಏನು ?

February 1, 2026
Next Post
ಬೇಸಿಗೆಯಲ್ಲಿ ವಿದ್ಯುತ್‌ ಬರ ಇಲ್ಲ, ಸಮರ್ಪಕ ಪೂರೈಕೆಗೆ ಸಜ್ಜು: ಇಂಧನ ಸಚಿವ ಜಾರ್ಜ್‌

ಬೇಸಿಗೆಯಲ್ಲಿ ವಿದ್ಯುತ್‌ ಬರ ಇಲ್ಲ, ಸಮರ್ಪಕ ಪೂರೈಕೆಗೆ ಸಜ್ಜು: ಇಂಧನ ಸಚಿವ ಜಾರ್ಜ್‌

Please login to join discussion

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು
Top Story

ವಿದ್ಯಾರ್ಥಿ-ಯುವ ಸಮೂಹ ಆದ್ಯತೆ-ಬಾಧ್ಯತೆಗಳು-ಭಾಗ-3

by ಪ್ರತಿಧ್ವನಿ
February 2, 2026
ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?
Top Story

ಏನಿದು ಯುಜಿಸಿ-2026? ಮೋದಿ ಬೆಂಬಲಿಗ ವರ್ಗವೇ ಬೀದಿಗೆ ಬರಲು ಕಾರಣವೇನು?

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

February 2, 2026
ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

ಪಾಕ್‌ಗೆ ಮುಂದೈತೆ ಮಾರಿಹಬ್ಬ : ಐಸಿಸಿಯಿಂದ ಮುಟ್ಟಿ ನೋಡಿಕೊಳ್ಳುವ ನಿರ್ಧಾರ..?

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!