ಚಳಿಗಾಲದಲ್ಲಿ ಶೀತ ನೆಗಡಿ ಕೆಮ್ಮು ಅನ್ನುವಂತದ್ದು ತುಂಬಾನೇ ಕಾಮನ್ ದೊಡ್ಡವರಿಗಾಗಲಿ ಚಿಕ್ಕವರಿಗಾಗಲಿ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ. ಮುಖ್ಯವಾಗಿ ನಮ್ಮ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಹಾಗಾಗಿ ಮಕ್ಕಳ ಇಮ್ಮ್ಯೂನಿಟಿಯನ್ನ ಬೂಸ್ಟ್ ಮಾಡೋದಕ್ಕೆ ವಿಂಟರ್ ಸಂದರ್ಭದಲ್ಲಿ ಈ ಜ್ಯೂಸ್ಗಳನ್ನ ತಪ್ಪದೇ ನೀಡಿ.

ದ್ರಾಕ್ಷಿ ಹಣ್ಣಿನ ಜ್ಯೂಸ್
ದ್ರಾಕ್ಷಿ ಹಣ್ಣಿನ ಜ್ಯೂಸನ್ನ ನೀಡುವುದರಿಂದ ಮಕ್ಕಳ ಇಮುನಿಟಿ ಸಿಸ್ಟಮ್ ಬೂಸ್ಟ್ ಆಗುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ.

ದಾಳಿಂಬೆ ಜ್ಯೂಸ್
ವಾರಕ್ಕೆ ಒಮ್ಮೆ ದಾಳಿಂಬೆ ಹಣ್ಣಿನ ಜ್ಯೂಸನ್ನು ಕುಡಿಯುವುದರಿಂದ, ಆಂಟಿಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ದೇಹದಲ್ಲಿ ಆಗುವ ಇನ್ಫೆಕ್ಷನ್ಗಳನ್ನ ಕಡಿಮೆ ಮಾಡುತ್ತದೆ.
ಆಪಲ್ ಜ್ಯೂಸ್
ಆಪಲ್ ಜ್ಯೂಸಿನಲ್ಲಿ ಫೈಬರ್ ಅಂಶ ಹಾಗೂ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಿರುತ್ತದೆ ಇದು ಇಮ್ಯೂನಿಟಿ ಸಿಸ್ಟಮ್ ನ ಸಪೋರ್ಟ್ ಮಾಡುವುದರ ಜೊತೆಗೆ ಡೈಜೇಶನ್ ಕೂಡ ಅದ್ಭುತವಾಗಿ ಆಗುತ್ತದೆ.

ಶುಂಠಿ ಜ್ಯೂಸ್
ಶುಂಠಿ ಜ್ಯೂಸನ್ನ ಸೇವಿಸುವುದರಿಂದ ಆರೋಗ್ಯದಲ್ಲಿ ಆಗುವ ಇನ್ಫೆಕ್ಷನ್ಗಳನ್ನ ದೂರ ಮಾಡುತ್ತದೆ. ಹಾಗೂ ಇದರಲ್ಲಿ ಆಂಟಿ ಇಂಪ್ಲಾಮೆಟರಿ ಅಂಶ ಕೂಡ ಹೆಚ್ಚಿರುತ್ತದೆ ಶೀತ, ನೆಗಡಿ ,ಕೆಮ್ಮಿನಂತಹ ಕಾಯಿಲೆಯಿಂದ ದೂರವಿರುತ್ತದೆ.