• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ನಾವು ಯಾವುದೇ ಪಕ್ಷದ ಬಿ ಟೀಮ್ ಅಲ್ಲ : BSP ನಾಯಕಿ ಮಾಯಾವತಿ

Any Mind by Any Mind
February 26, 2022
in ಇದೀಗ
0
ನಾವು ಯಾವುದೇ ಪಕ್ಷದ ಬಿ ಟೀಮ್ ಅಲ್ಲ : BSP ನಾಯಕಿ ಮಾಯಾವತಿ
Share on WhatsAppShare on FacebookShare on Telegram

ಆಡಳಿತಾರೂಢ ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯತೆಯ ಬಗ್ಗೆ ಊಹಾಪೋಹಗಳನ್ನು ತಳ್ಳಿಹಾಕಿದ BSP ನಾಯಕಿ ಮಾಯಾವತಿ (Mayawati ), ಬಹುಜನ ಸಮಾಜ ಪಕ್ಷ (BSP ) ಯಾವುದೇ ಪಕ್ಷದ ಬಿ ಟೀಮ್ ಅಲ್ಲ, ಬಿಜೆಪಿಯೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಲಿದ್ದಾರೆ. ಈ ಊಹಾಪೋಹಗಳಿಂದ ನಮ್ಮ ಬೆಂಬಲಿಗರನ್ನು ದಾರಿತಪ್ಪಿಸುವ ಪ್ರಯತ್ನ ಎಂದು ಕಿಡಿಕಾರಿದ್ದಾರೆ.

ADVERTISEMENT

ಉತ್ತರ ಪ್ರದೇಶ ಚುನಾವಣೆಯಲ್ಲಿ (UP Polls) BSP ಇನ್ನೂ ಪ್ರಸ್ತುತವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit shah) ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಾಯಾವತಿ ಅವರು, ಸತ್ಯವನ್ನು ಒಪ್ಪಿಕೊಳ್ಳುವ ದೊಡ್ಡತನವನ್ನು ಅಮಿತ್ ಶಾ ತೋರಿದ್ದಾರೆ. ಬಿಎಸ್‌ಪಿ ಇತರ ಸಮುದಾಯಗಳ ಮತಗಳನ್ನೂ ಪಡೆಯಲಿದೆ ಎಂದು ಹೇಳಿದ್ದಾರೆ.

ಬಿಎಸ್ಪಿ–ಬಿಜೆಪಿ (BSP – BJP) ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುತ್ತವೆ ಎಂದು ವಿರೋಧ ಪಕ್ಷಗಳು ಈ ಎರಡೂ ಹೇಳಿಕೆಗಳ ನಂತರ ಆರೋಪಿಸಿದ್ದವು. ಸಮಾಜವಾದಿ ಪಕ್ಷವು (Samajawadi Party), ‘ಬಿಎಸ್ಪಿಯು ಬಿಜೆಪಿಯ ಬಿ ಟೀಂ’ ಎಂದು ಆರೋಪಿಸಿತ್ತು. ಈ ಆರೋಪಗಳಿಗೆ ಮಾಯಾವತಿ ಕಾರವಾಗಿ ಪ್ರತಿಕ್ರಿಯೆ ನೀಡಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಬಿಜೆಪಿಯ ಬಿ ಟೀಂ ಆಗಿದ್ದೇ ನಿಜವಾದರೆ, ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಜೊತೆ ಸಮಾಜವಾದಿ ಪಕ್ಷವು ಮೈತ್ರಿ ಮಾಡಿಕೊಂಡಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಸತ್ಯವೆಂದರೆ ಬಿಎಸ್‌ಪಿ ರಾಷ್ಟ್ರೀಯ ಮಟ್ಟದ ಪಕ್ಷವೇ ಹೊರತು “ಯಾವುದೇ ಪಕ್ಷದ ಎ ಅಥವಾ ಬಿ ತಂಡ” ಅಲ್ಲ ಎಂದು ಬಿಎಸ್‌ಪಿ ಮುಖ್ಯಸ್ಥರು ಹೇಳಿದ್ದಾರೆ.

‘ಅತ್ಯಾಚಾರ, ಹಲ್ಲೆಗೆ ಗುರಿಯಾದ ದಲಿತರ ಮನೆಗೆ ಮಾಯಾವತಿ ಭೇಟಿ ನೀಡಿಲ್ಲ ಎಂದು ಈ ಮಾಧ್ಯಮಗಳು ಕೇಳುತ್ತಿವೆ. ಪ್ರಿಯಾಂಕಾ ಗಾಂಧಿಯಂತೆ (Priyanka gandhi ) ಸಂತ್ರಸ್ತರ ಮನೆಗೆ ಹೋಗಿ, ನಾಟಕವಾಡಲು ನಾನು ಯಾವುದೇ ಪಕ್ಷದ ಉಸ್ತುವಾರಿ ಅಥವಾ ಪ್ರಧಾನ ಕಾರ್ಯದರ್ಶಿ ಅಲ್ಲ.

ಕಾಂಗ್ರೆಸ್ನ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಇರುವಂತೆ, ನಾನು ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷೆ. ಸಂತ್ರಸ್ತರ ಮನೆಗೆ ಹೋಗಿ ಭೇಟಿ ನೀಡಲು, ನೆರವು ನೀಡಲು ನಮ್ಮ ಪಕ್ಷದಲ್ಲಿ ಪದಾಧಿಕಾರಿಗಳಿದ್ದಾರೆ. ಅವರು ಆ ಕೆಲಸ ಮಾಡುತ್ತಾರೆ’ ಎಂದು ಅವರು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

1995, 1997 ಮತ್ತು 2002ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಮಾಯಾವತಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

Tags: Amit ShahBJPBSPBSP – BJPCongress PartyCovid 19MayawatiPriyanka GandhiSamajawadi PartySonia GandhiUP PollsUttar Pradeshಉತ್ತರ ಪ್ರದೇಶ ಚುನಾವಣೆಕರೋನಾಕೋವಿಡ್-19ನರೇಂದ್ರ ಮೋದಿಬಿ ಟೀಮ್ಬಿಜೆಪಿಮಾಯಾವತಿ
Previous Post

NSE ಹಗರಣ ರೋಚಕ ತಿರುವು: ತನ್ನ ನೇಮಕಾತಿಗೆ ತಾನೇ ಶಿಫಾರಸು ಮಾಡಿದ ‘ನಿಗೂಢ ಯೋಗಿ’!

Next Post

ಉಕ್ರೇನ್ನಲ್ಲಿ ಸಿಲುಕಿರುವ ಪುತ್ರಿ ಸಂಪರ್ಕಕ್ಕೆ ಸಿಗುತ್ತಿಲ್ಲ; ಬೇಸರ ತೋಡಿಕೊಂಡ CRPF ಯೋಧ

Related Posts

Helicopter with 6 people on board crashes near Joshimath in Uttarakhand: Video goes viral | WATCH VIDEO
Top Story

BREAKING : ಉತ್ತರಾಖಂಡದ ಜೋಶಿಮಠದ ಬಳಿ 6 ಜನರಿದ್ದ ಹೆಲಿಕಾಪ್ಟರ್ ಪತನ | WATCH VIDEO

by Shivakumar
October 30, 2026
0

ಚಮೋಲಿ :  ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣದ ಸಮೀಪ ಶುಕ್ರವಾರ ಆರು ಮಂದಿ ಪ್ರಯಾಣಿಕರಿದ್ದ ಹೆಲಿಕಾಪ್ಟರ್ (Helicopter) ಪತನಗೊಂಡಿದೆ. ಟ್ರಾನ್ಸ್ ಭಾರತ್ (Trans Bharat) ಸಂಸ್ಥೆಗೆ...

Read moreDetails
GOOD NEWS: A bumper Diwali gift for Central Government employees: Cabinet approves 3% hike in Dearness Allowance

GOOD NEWS : ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಗಿಫ್ಟ್ : ತುಟ್ಟಿಭತ್ಯೆ ಶೇ. 3ರಷ್ಟು ಹೆಚ್ಚಳಕ್ಕೆ ಸಂಪುಟ ಅನುಮೋದನೆ

October 28, 2026
ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!

ಏಕತೆ, ಸೌಹಾರ್ದತೆಯ ಸಂಕೇತ ಬ್ಯಾಟರಾಯನಪುರ ದಸರಾ : ತಮ್ಮೇಶ್‌ ಗೌಡ ನಾಯಕತ್ವಕ್ಕೆ ಕ್ಷೇತ್ರದ ಜನರ ಬಹು ಪರಾಕ್..!

October 26, 2026
ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌ : ಗೂಂಡಾಗಿರಿ ಮಟ್ಟ ಹಾಕ್ತೀವಿ ; ಮಹಾ ಸಿಎಂ,ಡಿಸಿಎಂ ಶಪಥ..!

ಟೈಗರ್‌ ಶ್ರಾಫ್‌ ಮೇಲೆ ಅಟ್ಯಾಕ್‌ : ಗೂಂಡಾಗಿರಿ ಮಟ್ಟ ಹಾಕ್ತೀವಿ ; ಮಹಾ ಸಿಎಂ,ಡಿಸಿಎಂ ಶಪಥ..!

October 19, 2026
“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”

“ಭಕ್ತಿಯ ಬೇರು, ಕೃಷಿಯ ತಳಹದಿ, ಪರಂಪರೆಯ ಶಕ್ತಿಯೇ ಕಂಬಳದ ವೈಶಿಷ್ಟ್ಯ”

October 19, 2026
Next Post
ಉಕ್ರೇನ್ನಲ್ಲಿ ಸಿಲುಕಿರುವ ಪುತ್ರಿ ಸಂಪರ್ಕಕ್ಕೆ ಸಿಗುತ್ತಿಲ್ಲ; ಬೇಸರ ತೋಡಿಕೊಂಡ CRPF ಯೋಧ

ಉಕ್ರೇನ್ನಲ್ಲಿ ಸಿಲುಕಿರುವ ಪುತ್ರಿ ಸಂಪರ್ಕಕ್ಕೆ ಸಿಗುತ್ತಿಲ್ಲ; ಬೇಸರ ತೋಡಿಕೊಂಡ CRPF ಯೋಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada