• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸಿನಿಮಾ

ಕೊನೆಯ ಉಸಿರಿಗಾಗಿ ಜೀವದ ಓಟ!; ದಿಲೀಪ್ ರಾಜ್ ಉಳಿಸಿಕೊಳ್ಳಲು ಪತ್ನಿ ನಡೆಸಿದ ಕಣ್ಣೀರಿನ ಹೋರಾಟ ಹೀಗಿತ್ತು!

ಪ್ರತಿಧ್ವನಿ by ಪ್ರತಿಧ್ವನಿ
May 14, 2026
in ಸಿನಿಮಾ
0
ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?
Share on WhatsAppShare on FacebookShare on Telegram

ಬೆಂಗಳೂರು:

ADVERTISEMENT

ಜನಪ್ರಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಮೇ 13ರ ಮುಂಜಾನೆ ಹೃದಯಾಘಾತದಿಂದ ಅವರು ನಿಧನರಾಗಿದ್ದು, ಆ ಕೊನೆಯ ಕ್ಷಣಗಳಲ್ಲಿ ಪತ್ನಿ ಶ್ರೀವಿದ್ಯಾ ನಡೆಸಿದ ಹೋರಾಟ ಇದೀಗ ಎಲ್ಲರ ಕಣ್ಣಲ್ಲೂ ನೀರು ತರಿಸುತ್ತಿದೆ.ದಿಲೀಪ್ ರಾಜ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ ಆಟೋ ಚಾಲಕ ದೇವೇಂದ್ರ ನಾಯ್ಡು ಆ ಕ್ಷಣಗಳನ್ನು ಭಾವುಕರಾಗಿ ವಿವರಿಸಿದ್ದಾರೆ.

“ಬೆಳಿಗ್ಗೆ ಸುಮಾರು 6.10ರ ವೇಳೆಗೆ ದಿಲೀಪ್ ಅವರ ಪತ್ನಿ ಶ್ರೀವಿದ್ಯಾ ಆತಂಕದಿಂದ ಕರೆ ಮಾಡಿದರು. ಕೂಡಲೇ ಅವರ ಮನೆಗೆ ಹೋದೆ. ನಾನು ಮತ್ತು ಮನೆಯ ಭದ್ರತಾ ಸಿಬ್ಬಂದಿ ಸೇರಿ ದಿಲೀಪ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡೆವು. ಆ ಸಮಯದಲ್ಲಿ ಅವರಿಗೆ ಸಿಪಿಆರ್ ಕೂಡ ಮಾಡಿದ್ದೆವು. ಸ್ವಲ್ಪ ಉಸಿರಾಟ ಇತ್ತು. ಆದರೆ ರಾಜರಾಜೇಶ್ವರಿ ನಗರದ ಆರ್ಚ್ ಹತ್ತಿರ ಬರುತ್ತಿದ್ದಂತೆ ಅವರು ದೊಡ್ಡ ಉಸಿರು ಬಿಟ್ಟರು” ಎಂದು ದೇವೇಂದ್ರ ನಾಯ್ಡು ತಿಳಿಸಿದ್ದಾರೆ.

ದಿಲೀಪ್ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಮೊದಲು ಜಯದೇವ ಆಸ್ಪತ್ರೆಗೆ ಹೋಗುವ ಬಗ್ಗೆ ಚರ್ಚೆಯಾಗಿತ್ತು. ಆದರೆ ಸಮಯ ವ್ಯರ್ಥವಾಗಬಹುದು ಎಂಬ ಕಾರಣಕ್ಕೆ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನಲಾಗಿದೆ.“ಮೊದಲು ಹೋದ ಆಸ್ಪತ್ರೆಯಲ್ಲಿ ವೈದ್ಯರೇ ಇರಲಿಲ್ಲ. ಸಿಬ್ಬಂದಿ ಕೇವಲ ಬಿಪಿ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದರು. ನಂತರ ಕೆಆರ್ ಆಸ್ಪತ್ರೆಗೆ ಕರೆದೊಯ್ದಾಗ ಇಸಿಜಿಯಲ್ಲಿ ಯಾವುದೇ ಸ್ಪಂದನೆ ಕಾಣಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಸಿಗದಿದ್ದರಿಂದ ಕೊನೆಗೆ ಕಾರಿನಲ್ಲಿ ಸಾಗರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿ ದಿಲೀಪ್ ರಾಜ್ ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

“ಈ ಸುದ್ದಿ ಕೇಳುತ್ತಿದ್ದಂತೆಯೇ ಪತ್ನಿ ಶ್ರೀವಿದ್ಯಾ ಜೋರಾಗಿ ಅತ್ತರು. ಎಲ್ಲಾ ದೇವರಿಗೂ ಬೇಡಿಕೊಂಡು ಹೇಗಾದರೂ ಉಳಿಸಿಕೊಡಿ ಎಂದು ಕಣ್ಣೀರಿಟ್ಟರು. ಆದರೆ ವಿಧಿಯ ಮುಂದೆ ಎಲ್ಲರೂ ಅಸಹಾಯಕರಾದರು” ಎಂದು ದೇವೇಂದ್ರ ನಾಯ್ಡು ಕಣ್ಣೀರಿನೊಂದಿಗೆ ನೆನಪಿಸಿಕೊಂಡಿದ್ದಾರೆ. ದಿಲೀಪ್ ರಾಜ್ ಅವರು ಕನ್ನಡ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದರು. ‘ಹಿಟ್ಲರ್ ಕಲ್ಯಾಣ’, ‘ಕೃಷ್ಣ ರುಕ್ಕು’ ಸೇರಿದಂತೆ ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

Tags: #bengaluru#DileepRaj#DileepRajDeath#EmotionalMoment#FilmIndustry#HitlerKalyana#KannadaNews#KannadaSerials#KrishnaRukku#sandalwood#Srividyabreakingnewsheartattackkannadaactorkannadacinemapratidavani
Previous Post

ಹೊಸ ಕೇರಳ ನಾಯಕ ವಿ.ಡಿ. ಸತೀಶನ್; ಎಷ್ಟು  ಆಸ್ತಿ ಹೊಂದಿದ್ದಾರೆ ಗೊತ್ತೆ ?

Next Post

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

Related Posts

ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?
Top Story

ನಿರೂಪಣಾ ಪಯಣಕ್ಕೆ ಅನುಪಮಾ ಗೌಡ ವಿದಾಯ;ಕಾರಣವೇನು?

by ಪ್ರತಿಧ್ವನಿ
August 18, 2026
0

ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಹಾಗೂ ನಟಿ ಅನುಪಮಾ ಗೌಡ ತಮ್ಮ ಎಂಟು ವರ್ಷಗಳ ನಿರೂಪಣಾ ಪಯಣಕ್ಕೆ ವಿದಾಯ ಹೇಳಿದ್ದಾರೆ. 2026ರ ಮೇ 5ರಂದು ತಮ್ಮ ಆ್ಯಂಕರಿಂಗ್...

Read moreDetails
‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

‘ಟಾಕ್ಸಿಕ್’ : ಆಗಸ್ಟ್‌ 21ರಿಂದ ಮುಂಗಡ ಬುಕ್ಕಿಂಗ್‌ ಶುರು

August 18, 2026
ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

ಆರೋಪಿ ಪವಿತ್ರಾ ಗೌಡಗೆ ಜ್ವರ; ವಿಚಾರಣೆಗೆ ಗೈರು

August 18, 2026
ಮರಣದಂಡನೆ ಪದ್ಧತಿಯೇ ಇರಲಿ: ಸುಪ್ರೀಂ ತೀರ್ಮಾನ

ಮರಣದಂಡನೆ ಪದ್ಧತಿಯೇ ಇರಲಿ: ಸುಪ್ರೀಂ ತೀರ್ಮಾನ

August 18, 2026
ಸಂದೇಶ್ ಕಂಬೈನ್ಸ್‌ನಿಂದ ಎರಡು ಹೊಸ ಸಿನಿಮಾಗಳ ಘೋಷಣೆ: ತಂದೆಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ

ಸಂದೇಶ್ ಕಂಬೈನ್ಸ್‌ನಿಂದ ಎರಡು ಹೊಸ ಸಿನಿಮಾಗಳ ಘೋಷಣೆ: ತಂದೆಯ ಹುಟ್ಟುಹಬ್ಬಕ್ಕೆ ದುಬಾರಿ ಉಡುಗೊರೆ

August 17, 2026
Next Post
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು; ಸಿಬಿಐ ಬಲೆಗೆ ಮತ್ತಷ್ಟು ಆರೋಪಿಗಳು

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada