• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, August 6, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೆಲುವಣ್ಣ ಇನ್ಮುಂದೆ ದೇವೇಗೌಡರ ಮನೆ ಸುದ್ದಿ ಮಾತಾಡಿದ್ರೆ ನಾಲಿಗೆ ಕಟ್‌ ಮಾಡ್ತೀವಿ..! : ಸುರೇಶ್‌ ಗೌಡ ವಾರ್ನಿಂಗ್..

ಚಲುವರಾಯಸ್ವಾಮಿ ದೇವೇಗೌಡ್ರು ಮನೆಯಲ್ಲಿ ಯಾರ ಸಾವನ್ನು ಬಯಸ್ತಿದ್ದಾರೆ? : ಸುರೇಶ್‌ ಗೌಡ ಪ್ರಶ್ನೆ..

ಪ್ರತಿಧ್ವನಿ by ಪ್ರತಿಧ್ವನಿ
June 1, 2026
in Top Story, ಇದೀಗ, ಕರ್ನಾಟಕ, ರಾಜಕೀಯ
0
ಚೆಲುವಣ್ಣ ಇನ್ಮುಂದೆ ದೇವೇಗೌಡರ ಮನೆ ಸುದ್ದಿ ಮಾತಾಡಿದ್ರೆ ನಾಲಿಗೆ ಕಟ್‌ ಮಾಡ್ತೀವಿ..! : ಸುರೇಶ್‌ ಗೌಡ ವಾರ್ನಿಂಗ್..
Share on WhatsAppShare on FacebookShare on Telegram

ಮಂಡ್ಯ : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿ ಬಿಟ್ಟರೆ ನಾಲಿಗೆ ಕತ್ತರಿಸ್ತೇವೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿಗೆ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ.

ADVERTISEMENT
Ex MLA Suresh Gowda | HD Devegowda, HD Kumaraswamy ಬಗ್ಗೆ ನಾಲಿಗೆ ಹರಿಬಿಟ್ರೆ ಕತ್ತರಿಸ್ತೇವೆ #pratidhvani

ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನ ಆಯ್ಕೆ ಮಾಡಿದ್ದಾರೆ. 5 ವರ್ಷ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕುಂಠಿತದ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಡಿಕೆ ಶಿವಕುಮಾರ್ ಸಿಎಂ ಆಗಿದ್ದಾರೆ. ಕೆಲವು ಕಿಡಿಗೇಡಿಗಳು ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಬಂದಿದೆ ಎಂದು ಹೇಳಿದ್ದಾರೆ. ಸಾವಿನ ಸಂದರ್ಭದಲ್ಲಿ ಮಾತ್ರ ಸೂತಕ ಬರುತ್ತದೆ. ಚೆಲುವರಾಯಸ್ವಾಮಿ ಯಾರ ಸಾವನ್ನು ಬಯಸ್ತಿದ್ದಾರೆ? ಚೆಲುವರಾಯಸ್ವಾಮಿ ಅವರೇ ನಮಗೆ ಶಾಸಕರು.
ಚಲುವರಾಯಸ್ವಾಮಿ ಗೆ ಯಾವ ರೀತಿ ಬುದ್ದಿ ಹೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ನ್ಯಾಯವಾದಿ ಮೇಲೆ ಖಾಕಿ ದೌರ್ಜನ್ಯ : ಅಥಣಿ ಪಿಎಸ್‌ಐ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು..

ದೇವೇಗೌಡ್ರು ಇತಿಹಾಸ ನಿಮಗೆ ಏನು ಗೊತ್ತು? ಎಸ್. ಎಂ. ಕೃಷ್ಣ ಅವರನ್ನು ಸಿಎಂ ಮಾಡಿದ್ದು ಯಾರು? ಈಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ದೇವೇಗೌಡರಿಗೆ ಹೊಟ್ಟೆ ಉರಿನಾ? ಜೆಡಿಎಸ್ ಜೊತೆ ಎನ್‌ಡಿಎ ಸರ್ಕಾರ ಇದೆ.
ಕಾಂಗ್ರೆಸ್ ಪಕ್ಷದಿಂದ ಯಾರೇ ಸಿಎಂ ಆದರೂ ನಾವು ವಿರೋಧ ಪಕ್ಷದ ಕೆಲಸವನ್ನೇ ಮಾಡುತ್ತೇವೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ಕನ್ನಡನಾಡಿನಲ್ಲಿ ಪ್ರಧಾನಿಯಾದ ಒಬ್ಬ ಕನ್ನಡಿಗ ದೇವೇಗೌಡರು, ಇಂತವರ ಕುಟುಂಬದ ಬಗ್ಗೆ ಕೇಡು ಬಯಸಿ ಕೇರಳಕ್ಕೆ ಮಾಟ-ಮಂತ್ರ ಮಾಡಿಸೋಕೆ ಹೋಗಿದ್ರಾ? ಚೆಲುವರಾಯಸ್ವಾಮಿ ಅಧಿಕಾರ -ಹಣ ಮದ, ದುರಹಂಕಾರದಿಂದ ಬಹಳ ತಪ್ಪು ಮಾಡುತ್ತಿದ್ದಾರೆ. ಅಧಿಕಾರ ಶಾಶ್ವತ ಅಲ್ಲ, ಚುನಾವಣೆಯಲ್ಲಿ ಜನರು ಬುದ್ದಿ ಕಲಿಸುತ್ತಾರೆ ಎಂದು ಸುರೇಶ್‌ ಗೌಡ ವಾಗ್ದಾಳಿ ನಡೆಸಿದ್ದಾರೆ.

ಚೆಲುವರಾಯಸ್ವಾಮಿ ದೇವೇಗೌಡರ ಬಗ್ಗೆ ಮಾತನಾಡಿ ದೊಡ್ಡ ಲೀಡರ್ ಆಗ್ತಿನಿ ಎನ್ನುವ ಭ್ರಮೆಯಲ್ಲಿದ್ದಾರೆ. ಇನ್ನು ಮುಂದೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿ ಬಿಟ್ಟರೆ ನಾಲಿಗೆಯನ್ನು ಎಲ್ಲೆಲ್ಲಿ ಅಲ್ಲಲ್ಲಿ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಿನ್ನ ಬಳಿ ಅಧಿಕಾರ ಇರಬಹುದು, ಆದರೆ ನಮ್ಮ ಹತ್ತಿರ ಜನಶಕ್ತಿ ಇದೆ. ಚೆಲುವರಾಯಸ್ವಾಮಿ ಗೆ ಯಾರ ಮನೆಯಲ್ಲಿ ಸಾಯ್ತಾರೆ ಎನ್ನುವ ಮುನ್ಸೂಚನೆ ಗೊತ್ತಾಗುತ್ತದೆ. ಇವರೆಲ್ಲ ಮಾಟ ಮಂತ್ರ ಮಾಡಿಸುವುದರಲ್ಲಿ ಎತ್ತಿದ ಕೈ. ಆದರೆ ನನ್ನ ಜೀವನದಲ್ಲಿ ಅಡ್ಜಸಟ್ಮೆಂಟ್ ರಾಜಕೀಯ ಇಲ್ಲ. ಕಾಂಗ್ರೆಸ್ ಸರ್ಕಾರ ಈ ರಾಜ್ಯದ ಲೂಟಿ ಮಾಡುತ್ತಿದೆ. ದೇವೇಗೌಡರ ಮನೆಗೆ ಏನೋ ಮಾಡಿಸಿದ್ದಾರೆ. ನನಗೂ ಮಾಟ ಮಂತ್ರ ಮಾಡಿಸಿದ್ದಾರೆ, ಆದರೆ ನಾನು ನಂಬಲ್ಲ. ಆದರೆ ನಾವು ನಮ್ಮ ಶತ್ರುಗಳಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಸುರೇಶ್‌ ಗೌಡ ಚೆಲುವರಾಯಸ್ವಾಮಿ ವಿರುದ್ಧ ಗುಡುಗಿದ್ದಾರೆ.

Tags: Congress Governmentcongress karnatakaDK Shivakumarex mla suresh gowdaH D DevegowdaH D KumaraswamyJDS KarnatakaKarnataka PoliticsMandya PoliticsN Chaluvaraya Swamy
Previous Post

‘ನಾನು ಅಲ್ಲ, ಕಾಂಗ್ರೆಸ್ ಕಾರ್ಯಕರ್ತನೇ ಸಿಎಂ’ : ಡಿಕೆ ಶಿವಕುಮಾರ್ ಭಾವನಾತ್ಮಕ ಮಾತು ಏನು ?

Next Post

ಸಿದ್ದರಾಮಯ್ಯ ಹೈಕಮಾಂಡ್‌ಗೆ ನೀಡಿರುವ ಸಂಭಾವ್ಯ ಪಟ್ಟಿಯಲ್ಲಿ ಯಾರಿಗೆಲ್ಲ ಮಂತ್ರಿಗಿರಿ.?

Related Posts

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ
Top Story

ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ: ಹಿರೇಬಾಗೇವಾಡಿಯಲ್ಲಿ ಪಂಜಿನ ಮೆರವಣಿಗೆ, ರಸ್ತೆ ತಡೆ ಪ್ರತಿಭಟನೆ

by ಪ್ರತಿಧ್ವನಿ
August 6, 2026
0

ಬೆಳಗಾವಿ: ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಬುಧವಾರ ಸಂಜೆ...

Read moreDetails
‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

‘ನಿಮ್ಮ ಮನೆ, ದೇವಾಲಯದಂತೆ ಈ ಸರ್ಕಾರವನ್ನೂ ಕಾಪಾಡಿ’; ಅರ್ಚಕರಿಗೆ ಸಿಎಂ ಡಿಕೆ ಶಿವಕುಮಾರ್ ಕರೆ

August 6, 2026
ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

ಬರ ಎದುರಿಸಲು ಹೀಗೆ ಸಜ್ಜಾಗಿ: ರೈತರು ಮತ್ತು ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ

August 6, 2026
ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

ಮಹಿಳೆಯರ ಆರೋಗ್ಯಕ್ಕೆ ರಾಜ್ಯ ಸರ್ಕಾರದ ಹೊಸ ಹೆಜ್ಜೆ: ‘ಋತುತಾರೆ’ ಯೋಜನೆಗೆ ಚಾಲನೆ

August 5, 2026
ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

ನೂತನ ಸಚಿವರು, ಶಾಸಕರಿಗೆ ಕೊಠಡಿ ಹಂಚಿಕೆ: ಯಾರು ಯಾವ ರೂಮ್ ಪಡೆದರು? ಇಲ್ಲಿದೆ ಸಂಪೂರ್ಣ ಪಟ್ಟಿ

August 5, 2026
Next Post
ಸಿದ್ದರಾಮಯ್ಯ ಹೈಕಮಾಂಡ್‌ಗೆ ನೀಡಿರುವ ಸಂಭಾವ್ಯ ಪಟ್ಟಿಯಲ್ಲಿ ಯಾರಿಗೆಲ್ಲ ಮಂತ್ರಿಗಿರಿ.?

ಸಿದ್ದರಾಮಯ್ಯ ಹೈಕಮಾಂಡ್‌ಗೆ ನೀಡಿರುವ ಸಂಭಾವ್ಯ ಪಟ್ಟಿಯಲ್ಲಿ ಯಾರಿಗೆಲ್ಲ ಮಂತ್ರಿಗಿರಿ.?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada