• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, September 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು..

ಇಂಗ್ಲೆಂಡ್‌ಗೆ ಟಕ್ಕರ್‌ ನೀಡುವ ನಿಟ್ಟಿನಲ್ಲಿ ಇಟಲಿ ತಂಡವೂ ಪ್ರಯತ್ನ ಪಟ್ಟಿತು, ಆದರೆ ಅದು ಕೈಗೂಡಲಿಲ್ಲ...

ಪ್ರತಿಧ್ವನಿ by ಪ್ರತಿಧ್ವನಿ
February 16, 2026
in Top Story, ಇದೀಗ, ಕ್ರೀಡೆ, ದೇಶ, ವಿದೇಶ
0
ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು..
Share on WhatsAppShare on FacebookShare on Telegram

ಕೋಲ್ಕತ್ತಾ : ಟಿ20 ವಿಶ್ವಕಪ್‌ ಪಂದ್ಯದಲ್ಲಿ ಇಟಲಿ ವಿರುದ್ಧ 24 ರನ್‌ಗಳ ಪ್ರಯಾಸದ ಗೆಲುವನ್ನು ದಾಖಲಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ತನ್ನ ಆಸೆಯನ್ನು ಇನ್ನಷ್ಟು ಜೀವಂತವಾಗಿರಿಸಿಕೊಂಡಿದೆ. ಭರವಸೆಯ ಆಟಗಾರ ವಿಲ್ ಜಾಕ್ಸ್‌ ಅರ್ಧಶತಕ ಹಾಗೂ ಜೆಮಿ ಓವರ್‌ಟನ್‌ ಅವರ ಬಿಗುವಿನ ದಾಳಿಯ ನೆರವಿನಿಂದ ಇಂಗ್ಲೆಂಡ್‌ ತಂಡ ಟಿ20 ವಿಶ್ವಕಪ್‌ನ ಲೀಗ್‌ನಲ್ಲಿ ಗೆಲ್ಲುವಂತಾಗಿದೆ.

ADVERTISEMENT
Darshan Fans : ದರ್ಶನ್​​​ ಫ್ಯಾನ್​​​​ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಪೊಲೀಸರು #pratidhvani

ಟಾಸ್‌ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ಆರಂಭದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಸ್ಫೋಟಕ ಬ್ಯಾಟರ್‌ ಜೋಸ್ ಬಟ್ಲರ್‌ 3 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆರಂಭಿಕ ಆಟಗಾರ ಫಿಲ್ ಸಾಲ್ಟ್‌ 28 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಜಾಕಬ್ ಬೆಥೆಲ್ 23 ರನ್‌ ಸಿಡಿಸಿ ಔಟ್ ಆದರು.

ಇದನ್ನೂ ಓದಿ : Darshan Thoogudeepa: ‘ಮತ್ತೆ ಖುಷಿಯ ದಿನ ಬರಲಿ’–ದರ್ಶನ್‌ ಹುಟ್ಟುಹಬ್ಬಕ್ಕೆ ಸೆಲೆಬ್ರೆಟಿಗಳ ವಿಶೇಷ ವಿಶ್‌

ಇನ್ನೂ ಈ ಹಿಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಟ್ಯಾಮ್ ಬಾಟಮ್‌ 30 ರನ್‌ ಗಳಿಸಿದರು. ನಾಯಕ ಹ್ಯಾರಿ ಬ್ರೂಕ್‌ 14 ರನ್‌ ಬಾರಿಸಿ ನಿರಾಸೆ ಮೂಡಿಸಿದರು. ಆಲ್‌ರೌಂಡರ್ ಸ್ಯಾಮ್‌ ಕರನ್‌ 25 ರನ್‌ ಪಡೆದರೂ ಕೂಡ ದೊಡ್ಡ ಇನಿಂಗ್ಸ್‌ಗೆ ಎಳೆಯಲಿಲ್ಲ. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಲ್ ಜಾಕ್ಸ್‌ ಅಮೋಘ ಬ್ಯಾಟಿಂಗ್ ಮಾಡಿದರು. ಇವರು 240ರ ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಕಲೆ ಹಾಕಿ, ಜಾಕ್ಸ್‌ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 53 ರನ್‌ ಬಾರಿಸಿದರು. ಇವರು ಕ್ಲಾಸ್ ಆಟದ ನೆರವಿನಿಂದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 ರನ್‌ ಸೇರಿಸಿತು.

ಅಲ್ಲದೆ ಇಂಗ್ಲೆಂಡ್‌ಗೆ ಟಕ್ಕರ್‌ ನೀಡುವ ನಿಟ್ಟಿನಲ್ಲಿ ಇಟಲಿ ತಂಡವೂ ಪ್ರಯತ್ನ ಪಟ್ಟಿದೆ, ಆದರೆ ಅದು ಕೈಗೂಡಲಿಲ್ಲ. ಇಂಗ್ಲೆಂಡ್‌ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಇಟಲಿ ತಂಡದ ಆರಂಭಿಕ ಆಟಗಾರ ಜಸ್ಟಿನ್ ಮೊಸ್ಕಾ ಒಳ್ಳೆಯ ಆಟವಾಡಿದರು.

ನಾಲ್ಕನೇ ವಿಕೆಟ್‌ಗೆ ಬೆನ್ ಮಾನೆಂಟಿ ಜೊತೆಯಾಟದಲ್ಲಿ 48 ಎಸೆತಗಳಲ್ಲಿ 92 ರನ್‌ ಬಾರಿಸಿದರು. ಬೆನ್ ಮಾನೆಂಟಿ 4 ಬೌಂಡರಿ, 5 ಸಿಕ್ಸರ್‌ ನೆರವಿನಿಂದ 60 ರನ್‌ ಬಾರಿಸಿ ಇಂಗ್ಲೆಂಡ್ ಬಲಿಷ್ಠ ಬೌಲಿಂಗ್ ಪಡೆಗೆ ಸವಾಲು ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಗ್ರಾಂಟ್ ಸ್ಟೀವರ್ಟ್ 45 ರನ್ ಗಳಿಸಿ ಸೋಲಿನ ಅಂತರವನ್ನು ಇಳಿಕೆ ಮಾಡಿದರು. ಆದರೆ ಕೊನೆಯ ಹಂತದಲ್ಲಿ ಇಟಲಿ 178 ರನ್‌ಗಳಿಗೆ ಸಂಪೂರ್ಣ ಹೀನಾಯವಾಗಿ ಪತನಗೊಂಡಿತು. ಹೀಗಾಗಿ ಈ ಪ್ರಯಾಸದ ಗೆಲುವಿನ ಮೂಲಕ ಇಂಗ್ಲೆಂಡ್ ಆಡಿದ 4 ಪಂದ್ಯಗಳಲ್ಲಿ 3 ಜಯ, 1 ಸೋಲು ಕಂಡಿದ್ದು, 6 ಅಂಕವನ್ನು ಕಲೆ ಹಾಕಿದ್ದು, ಮುಂದಿನ ಹಂತಕ್ಕೆ ಒಂದು ಕಾಲು ಇಟ್ಟಿದೆ.

Tags: BattingBowlingCricket Newsengland cricket teamICC t20 World cupinternational newsItaly Cricket teamjos buttlerkannada newskarnataka newsPratidhvaniSam Karansports newsT20 World Cup2026Will JacksWorld Cup Match
Previous Post

“ಧರ್ಮದ ಹಾದಿಯಲ್ಲಿ ನಡೆದವರನ್ನು ಸೋಲಿಸಲು ಬಂದ ಯಾವ ದುಷ್ಟ ಶಕ್ತಿಗಳೂ ಇತಿಹಾಸದಲ್ಲಿ ಉಳಿದಿಲ್ಲ”

Next Post

Ravichandran:ದರ್ಶನ್ ಬಿಡುಗಡೆಯ ಬಗ್ಗೆ  ಭವಿಷ್ಯ ನುಡಿದ ರವಿಚಂದ್ರನ್ ಹೇಳಿದ್ದೇನು?

Related Posts

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ
Top Story

ಬಿಸ್ಕತ್, ಕೂಲ್‌ಡ್ರಿಂಕ್ಸ್‌ ಪ್ಯಾಕೆಟ್‌ಗಳಲ್ಲಿ ಇನ್ಮುಂದೆ ಕೆಂಪು ಎಚ್ಚರಿಕೆ ಲೇಬಲ್? FSSAI ಮಹತ್ವದ ಪ್ರಸ್ತಾವನೆ

by ಪ್ರತಿಧ್ವನಿ
August 31, 2026
0

ಪ್ಯಾಕೆಟ್ ಆಹಾರ ಪದಾರ್ಥಗಳಲ್ಲಿ ಸಕ್ಕರೆ, ಉಪ್ಪು ಅಥವಾ ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿದ್ದರೆ, ಗ್ರಾಹಕರಿಗೆ ಸುಲಭವಾಗಿ ತಿಳಿಯುವಂತೆ ಪ್ಯಾಕೆಟ್‌ನ ಮುಂಭಾಗದಲ್ಲೇ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸುವ...

Read moreDetails
ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

ಬಿಗ್‌ಬಾಸ್ ಕನ್ನಡ ಸೀಸನ್‌ 13ಕ್ಕೆ ಸಂಕಷ್ಟ? ಸೆ.6ರ ಗ್ರ್ಯಾಂಡ್‌ ಓಪನಿಂಗ್‌ ಬಗ್ಗೆ ಹೆಚ್ಚಿದ ಅನುಮಾನ

August 31, 2026
ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

ಸರ್ಕಾರಿ ಕಟ್ಟಡಗಳ ಸೌರೀಕರಣಕ್ಕೆ ಆದ್ಯತೆ: ಎಸಿಎಸ್ ಗೌರವ್ ಗುಪ್ತ

August 31, 2026
ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

ಗೃಹಜ್ಯೋತಿ ಯೋಜನೆ ಪರಿಷ್ಕರಣೆ ಸರ್ವೆ ಗಡುವು ವಿಸ್ತರಣೆ: ಇಲ್ಲಿದೆ ಮಹತ್ವದ ಮಾಹಿತಿ

August 31, 2026
ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

ನಮ್ಮ ವಿರುದ್ಧ ಅಲ್ಲ..ಬಿಜೆಪಿ ವಿರುದ್ಧ ಕುಮಾರಸ್ವಾಮಿ ಹೋರಾಟ: ಸಿಎಂ ಡಿ.ಕೆ ಶಿವಕುಮಾರ್

August 31, 2026
Next Post
Ravichandran:ದರ್ಶನ್ ಬಿಡುಗಡೆಯ ಬಗ್ಗೆ  ಭವಿಷ್ಯ ನುಡಿದ ರವಿಚಂದ್ರನ್ ಹೇಳಿದ್ದೇನು?

Ravichandran:ದರ್ಶನ್ ಬಿಡುಗಡೆಯ ಬಗ್ಗೆ  ಭವಿಷ್ಯ ನುಡಿದ ರವಿಚಂದ್ರನ್ ಹೇಳಿದ್ದೇನು?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada