• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Darshan Thoogudeepa: ‘ಮತ್ತೆ ಖುಷಿಯ ದಿನ ಬರಲಿ’–ದರ್ಶನ್‌ ಹುಟ್ಟುಹಬ್ಬಕ್ಕೆ ಸೆಲೆಬ್ರೆಟಿಗಳ ವಿಶೇಷ ವಿಶ್‌

ಪ್ರತಿಧ್ವನಿ by ಪ್ರತಿಧ್ವನಿ
February 16, 2026
in Top Story, ಕರ್ನಾಟಕ, ಸಿನಿಮಾ
0
Darshan Thoogudeepa: ‘ಮತ್ತೆ ಖುಷಿಯ ದಿನ ಬರಲಿ’–ದರ್ಶನ್‌ ಹುಟ್ಟುಹಬ್ಬಕ್ಕೆ ಸೆಲೆಬ್ರೆಟಿಗಳ ವಿಶೇಷ ವಿಶ್‌
Share on WhatsAppShare on FacebookShare on Telegram

ಇಂದು ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್‌, ನಟ ದರ್ಶನ್‌ ತೂಗುದೀಪ(Darshan Thoogudeepa) ಹುಟ್ಟುಹಬ್ಬ. ಪ್ರತಿ ಬಾರಿಯೂ ಹಬ್ಬದಂತೆ ಅದ್ದೂರಿಯಾಗಿರುತ್ತಿದ್ದ ಈ ದಿನ ಕಳೆದೆರಡು ವರ್ಷಗಳಂದ ಬರೀ ಮೌನ.

ADVERTISEMENT
CM Siddaramaiah on DCM DK Shivakumar  ಟಗರು ಜೊತೆ ಬಂಡೆ ಐದು ವರ್ಷ ನಿಲ್ಲುತ್ತೆ  ! #pratidhvani

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧಿತರಾಗಿದ್ದು, ಈ ಬಾರಿ ಜನ್ಮದಿನವನ್ನು ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಅತ್ತ ಜೈಲಿನಲ್ಲಿ ದರ್ಶನ್‌ ತುಂಬಾನೇ ಕಷ್ಟಪಡುತ್ತಿದ್ದರೆ, ಇತ್ತ ಅಭಿಮಾನಿಗಳು ತಮ್ಮ ಮೆಚ್ಚಿನ ದಿನದಂದು ದಾಸನನ್ನು ಕಾಣಲಾಗದೇ ಸಂಕಟ ಪಡುತ್ತಿದ್ದಾರೆ.

ದರ್ಶನ್‌ ಅವರನ್ನು ಭೇಟಿಯಾಗಿ ಶುಭಾಶಯ ತಿಳಿಸಲು ಸಾಧ್ಯವಾಗದ ಕೊರಗು ಒಂದೆಡೆಯಾದರೆ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್​​ಗೆ ಅಭಿಮಾನಿಗಳು ಹಾಗೂ ಅವರನ್ನು ಇಷ್ಟಪಡುವ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.


ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪ್ರೀತಿಯಿಂದ ಪತಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ. ‘ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ನಟಿ ನಟಿ ರಕ್ಷಿತಾ ಪ್ರೇಮ್‌ ದರ್ಶನ್‌ ಹುಟ್ಟುಹಬ್ಬಕ್ಕೆ ಭಾವುಕರಾಗಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ. ನನ್ನ ಪ್ರೀತಿ ಪಾತ್ರನಿಗೆ ಜನ್ಮದಿನದ ಶುಭಾಶಯ. ನಾನು ನಿನ್ನನ್ನು ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನೀನು ಮತ್ತೆ ಖುಷಿಯಾಗಿ ಇರೋದನ್ನು ನೋಡುವಂತಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.


ಇನ್ನು ನಟ ಶರಣ್‌ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಜೊತೆಗಿನ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸರ್. ಆದಷ್ಟು ಬೇಗ ಎಲ್ಲವೂ ಸರಿ ಹೋಗಿ ನಿಮ್ಮನ್ನು ಬೆಳ್ಳಿತೆರೆಯ ಮೇಲೆ ನೋಡಬಯಸುವ ನಿಮ್ಮ ಎಲ್ಲಾ ಅಭಿಮಾನಿಗಳ್ಳಲ್ಲಿ ನಾನೂ ಒಬ್ಬ. ಆ ಭಗವಂತನ ಅನುಗ್ರಹ ಸಂಪೂರ್ಣವಾಗಿ ನಿಮ್ಮ ಮೇಲಿರಲಿ ಸರ್ ಎಂದು ಬರೆದುಕೊಂಡಿದ್ದಾರೆ. ಹಾಗೂ ನಟ ನಿನಾಸಂ ಸತೀಶ್‌ ಹುಟ್ಟುಹಬ್ಬದ ಶುಭಾಶಯಗಳು ಸರ್ ಎಂದು ಶುಭಾಶಯ ಕೋರಿದ್ದಾರೆ.

ಇನ್ನು ದರ್ಶನ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ನಟ ಧನ್ವೀರ್ ಗೌಡ ತಮ್ಮ ಮೆಚ್ಚಿನ ಅಣ್ಣನಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಹಳೆಯ ವಿಡಿಯೋ ಶೇರ್‌ ಮಾಡಿ ವಿಶ್‌ ಮಾಡಿದ್ದಾರೆ.

Tags: Actor Darshanactor darshan arrestedDarshanDarshan BirthadyDarshan Thoogadeepadhanveer gowdaRakshitha PremsandalwoodVijayalakshmi darshan
Previous Post

ಬೆಂಗಳೂರು ಕಮಿಷನರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ: ಯಾಮಾರಿದ್ರೆ ಅಷ್ಟೇ ಕಥೆ..!

Next Post

HAYAGRRIVA ACTION TEASER: ದರ್ಶನ್‌ ಹುಟ್ಟುಹಬ್ಬದ ಸ್ಪೆಷಲ್‌: ಧನ್ವೀರ್ ‘ಹಯಗ್ರೀವ’ ಆಕ್ಷನ್ ಟೀಸರ್‌ ರಿಲೀಸ್‌

Related Posts

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!
Top Story

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

by ಪ್ರತಿಧ್ವನಿ
April 11, 2026
0

ಅಹಮದಾಬಾದ್‌ನ ಚಾಂದ್‌ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

April 11, 2026
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
Next Post
HAYAGRRIVA ACTION TEASER: ದರ್ಶನ್‌ ಹುಟ್ಟುಹಬ್ಬದ ಸ್ಪೆಷಲ್‌: ಧನ್ವೀರ್ ‘ಹಯಗ್ರೀವ’ ಆಕ್ಷನ್ ಟೀಸರ್‌ ರಿಲೀಸ್‌

HAYAGRRIVA ACTION TEASER: ದರ್ಶನ್‌ ಹುಟ್ಟುಹಬ್ಬದ ಸ್ಪೆಷಲ್‌: ಧನ್ವೀರ್ 'ಹಯಗ್ರೀವ' ಆಕ್ಷನ್ ಟೀಸರ್‌ ರಿಲೀಸ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada