ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ನಾನು ನಿಮ್ಮ ಜನ ಸೇವಕನಾಗಿ ಬಂದಿದ್ದೇನೆ ಎಂದು ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು. ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜನರ ನಂಬಿಕೆ ವಿಶ್ವಾಸ ಉಳಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದೇನೆ. ಯಾವುದೇ ಸಮಯದಲ್ಲಾದರೂ ಸರಿ ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸಿದ್ಧನಿದ್ದೇನೆ ಎಂದರು. ಶಾಸಕನಾದ ಮೇಲೆ ಈ ಭಾಗದ ರೈತರು ಜನರ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ ನಿಮಗಾಗಿ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿರುವೆ. ಅಭಿವೃದ್ಧಿಗೆ ಹಿನ್ನೆಡೆಯೂ ಆಗಲ್ಲ ಕುಂಠಿತವೂ ಆಗಲ್ಲ. ನನ್ನ ಅಧಿಕಾರಾವಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುವೆ.ಈಗಾಗಲೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರೆದು ಗ್ರಾಮಪಂಚಾಯಿತಿ ಮಟ್ಟದಲ್ಲಿ ಯಾವುದೇ ಕಾರಣಕ್ಕೂ ಮೂಲ ಸೌಕರ್ಯ ಕೊರತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿ ವರ್ಗಕ್ಕೆ ಹೇಳಿರುವೆ ಎಂದರು.
ಜನರ ಸಮಸ್ಯೆಗಳಿಗೆ ಅದಕ್ಕೆ ಸ್ದಳದಲ್ಲೇ ಪರಿಹರಿಸುತ್ತಾ ಬಂದಿರುವೆ ಮುಂದೆಯೂ ಸ್ಪಂದಿಸುವೆ ಇನ್ನೂ ಅಧಿಕಾರಿಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿರುವೆ. ಈ ಕ್ಷೇತ್ರದಲ್ಲಿ ಉತ್ತಮ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದರು. ಮನ್ನಾಏಖೇಳ್ಳಿ ಗ್ರಾಮದಲ್ಲಿ ಸುಮಾರು 42 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಎರಡು ಓಣಿಯಲ್ಲಿ ಚಾಲನೆ ನೀಡಿದ್ದೇನೆ ಮತ್ತು ಮನ್ನಾಏಖೇಳ್ಳಿ ಗ್ರಾಮದಲ್ಲಿರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯಲ್ಲಿ ಸುಮಾರು 32 ಲಕ್ಷ ರೂ ವೆಚ್ಚದ ಎರಡು ಕೊಠಡಿ ನಿರ್ಮಾಣ ಕಾಮಗಾರಿ ಚಾಲನೆ ನೀಡಿ ಕಟ್ಟಡ ಕಾಮಗಾರಿ ಉತ್ತಮವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಾಜಕುಮಾರ, ಪಿಡಿಒ ಭಾಗ್ಯಜ್ಯೋತಿ, ಮುಖಂಡರಾದ ರಾಜು ಪಾಂಚಾಳ, ಸಂತೋಷ್ ಹಳ್ಳಿಖೇಡ, ಸಂಗ್ರಾಮ ಬಿರಾದಾರ, ಜರೇಪ್ಪ ಹಂದಿಕೇರಿ, ಮೋಹನ ತೆಳಕೆರಿ, ಆಬೇದ ಅಲಿ, ಬಸವ ನಿಂಗದಳ್ಳಿಕರ್, ಜಗನ್ನಾಥ ಆರ್ಯಾ, ರಘುನಾಥ ರಾಯಗೊಂಡ, ಖಧೀರ್, ಯೂಸುಫ್ ಅಲಿ ಜಮಾದರ ಶಾಲೆಯ ಮುಖ್ಯ ಶಿಕ್ಷಕರು,ಶಿಕ್ಷಕರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.