ಕೇಂದ್ರದ ಮಾಜಿ ವಿತ್ತ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು, ತಮಗೂ ಪ್ರಧಾನಿಯಾಗುವ ಅವಕಾಶವಿತ್ತು ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ. ಕೇಂದ್ರದ ಬಂಡವಾಳಶಾಹಿ ಪರ ಆಡಳಿತ ವ್ಯವಸ್ಥೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.
“ನಾನು ರೂ. 700 ಕೋಟಿಯನ್ನು ಜಮಾವಣೆ ಮಾಡಿದಿದ್ದಲ್ಲಿ, ನನಗೂ ಪ್ರಧಾನಿಯಾಗುವ ಅವಕಾಶವಿತ್ತು. ಅಧಿಕಾರದಲ್ಲಿದ್ದುಕೊಂಡು ದೇಶದ ಎರಡು, ಮೂರು ಕಂಪೆನಿಗಳ ಪರವಾಗಿ ಅವರಿಗೆ ಉಪಯೋಗವಾಗುವಂತೆ ನೋಡಿಕೊಳ್ಳುತ್ತಿದ್ದರೆ, ನಾನೂ ಪ್ರಧಾನಿಯಾಗಿರುತ್ತಿದೆ. ಆದರೆ, ನನ್ನಿಂದ ಅದನ್ನು ಮಾಡಲಾಗಲಿಲ್ಲ. ನನ್ನ ಹಾಗೆಯೇ ಹಲವರಿಗೂ ಇದನ್ನು ಮಾಡಲಾಗಲಿಲ್ಲ,” ಎಂದು ಅವರು ಹೇಳಿದ್ದಾರೆ.
ಇವರ ಟ್ವೀಟ್ ನೇರವಾಗಿ ಕೇಂದ್ರ ಸರ್ಕಾರದ ಬಂಡವಾಳ ಶಾಹಿ ಆಡಳಿತ ವ್ಯವಸ್ಥೆಯನ್ನು ವಿರೋಧಿಸುತ್ತಿದೆ. ಬಿಜೆಪಿ ಸರ್ಕಾರದ ಕೆಲವು ನಡೆಗಳಿಂದ ಬೇಸತ್ತು 2018ರಲ್ಲಿ ಯಶವಂತ್ ಸಿನ್ಹಾ ಅವರು ಬಿಜೆಪಿಯನ್ನು ತೊರೆದಿದ್ದರು.