ಜಾಗತಿಕ ಸಂತೋಷದ ವರದಿ ಪ್ರಕಟಣೆಯಾಗಿದೆ.ಪ್ರಪಂಚದ 143 ದೇಶಗಳ ಪರಿಗಣಿಸಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.GALLUP Poll ಎಂಬ ಸಂಸ್ಥೆ ಈ ವರದಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತಾ ಬಂದಿದೆ.
6 ಅಂಶಗಳ ಮಾನ ದಂಡದ ಮೇಲೆ ಈ ವರದಿಯನ್ನು ಸಿದ್ದಪಡಿಸಲಾಗಿದ್ದು, ಎಲ್ಲಾ ವಯೋಮಾನದವರನ್ನು ಗಮನದಲ್ಲಿಟ್ಟುಕೊಂಡು.. ಈ ವರದಿ ಸಿದ್ಧಪಡಿಸಲಾಗಿದೆ.
ಪ್ರಮುಖ ಕಾರಣಗಳು ಏನು ಅಂತ ನೋಡೋದಾದ್ರೆ,
- ಪ್ರತಿಯೊಬ್ಬ ನ GDP ಯನ್ನು ಪರಿಗಣಿಸಿದ್ದಾರೆ.. 2 . ಆ ದೇಶದ ಜನರ ಸರಾಸರಿ ವಯಸ್ಸು
- ಉದಾರತೆ. ( ಜನರು ಹೇಗೆ ದಾನ ಮಾಡ್ತಾರೆ, ಕಂಪನಿಗಳು ತಮ್ಮ ದೇಶದ ಜನತೆಗೆ ಎಷ್ಟು ಪ್ರಮಾಣದಲ್ಲಿ ದಾನ ಕಾರ್ಯ ಈ ಹಿನ್ನೆಲೆ, ಸಾಮಾನ್ಯ ಜನ ಹೇಗೆದಾನ ಮಾಡ್ತಾರೆ ಎಂಬ ಅಂಶ ಪರಿಗಣಿಸಿರುವಂತಹದ್ದು
4 ಸಾಮಾಜಿಕ ಬೆಂಬಲ
ಈ ದೇಶದ ಸರ್ಕಾರಗಳು ಅಂಗವಿಕಲರಿಗೆ, ತುಳಿತಕ್ಕೆ ಒಳಗಾದವರಿಗೆ, ನಿರ್ಗತಿಕರಿಗೆ ಯಾವ ರೀತಿ ಸಹಾಯ ಮಾಡುತ್ತಿದೆ
- ಸ್ವಾತಂತ್ರ್ಯ
ದೇಶದಲ್ಲಿ ವಾಸಿಸುವವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಅವರ ಇಚ್ಛೆಯನ್ನು ಪೂರೈಸಿಕೊಳ್ಳುವಲ್ಲಿ ಸರ್ಕಾರದ ಪಾತ್ರ ಏನು ಎಂಬುಸರ ಮೇಲೆ ಅಳೆದಿದ್ದಾರೆ - ಭ್ರಷ್ಟಾಚಾರ
ಜನರು ಭ್ರಷ್ಟಾಚಾರ ದಿಂದ ನರಳುತ್ತಿದ್ದಾರಾ.. ಕಚೇರಿ ಯಿಂದ ಕಚೇರಿ ಅಲೆಯುವ ಸ್ಥಿತಿಇದೆಯಾ.. ಜನರು ಮಾನಸಿಕವಾಗಿ ನರಳುತ್ತಿದ್ದಾರಾ ಇದರಿಂದ ತೊಂದರೆ ಎಷ್ಟು ಎಂಬುದರ ಅಂಕಿ ಅಂಶ ತೆಗೆದುಕೊಂಡಿದ್ದಾರೆ..
ಈ 6 ಅಂಶಗಳನ್ನು ದೇಶದ ಜನರಲ್ಲಿ ಕೇಳಿ ಪಡೆದ ಅಂಕಿ ಅಂಶದ ಮೇಲೆ ಈ ಖುಷಿ ಸೂಚ್ಯಂಕ ವನ್ನು ನಿರ್ಧಾರ ಮಾಡಲಾಗಿದೆ…
ಹೀಗೆ ಮಾಡಿದಾಗ ನಮ್ಮ ದೇಶ 126 ನೇ ಸ್ಥಾನ ವನ್ನು ಪಡೆದುಕೊಂಡಿದೆ.. ಈಗ ನೀವೇ ಊಹಿಸಬೇಕು ವಿಶ್ವ ಗುರು ಎಂದು ಕರೆಸಿಕೊಳ್ಳುವ ದೇಶದ ಜನತೆ ಎಷ್ಟರ ಮಟ್ಟಿಗೆ ಖುಷಿ ಇಂದ ಇದ್ದಾರೆ ಎಂದು ಅರ್ಥ ಆಗುತ್ತೆ.






