ಆರೋಪಿ ದರ್ಶನ್ (Actor darshan) ಜೈಲಿನಲ್ಲಿ ಬಿಂದಾಸಾಗಿರುವ ಪೋಟೋಗಳು, ವಿಲ್ಸನ್ ಗಾರ್ಡನ್ ನಾಗನ (Wilson garden naga) ಜೊತೆ ಕೂತು ಕಾಫಿ ಕುಡಿಯುತ್ತಾ, ಸಿಗರೇಟ್ ಸೇದುತ್ತಿರುವ ವೈರಲ್ ಹಿನ್ನಲೆ, ಜೈಲಲ್ಲಿ ವಿಲ್ಸನ್ ಗಾರ್ಡನ್ ನಾಗ ಕೆರಳಿ ಕೆಂಡವಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಹೀಗಾಗಿ ಈ ಫೋಟೋ ಜೈಲಿಂದ ಲೀಕ್ ಮಾಡಿದ ರೌಡಿ ವೇಲುಗೆ ವಿಲ್ಸನ್ ಗಾರ್ಡನ್ ನಾಗ ರಾತ್ರಿ ಹಿಗ್ಗಾಮುಗ್ಗಾ ಥಳಿಳಿಸಿದ್ದಾನೆ ಎಂದು ಹೇಳಲಾಗಿದೆ.ಈ ಪೋಟೊಗಳನ್ನ ವೈರಲ್ ಮಾಡಿರೋದು ನೀನೆ ಎಂದು ನಾಗ ವೇಲು ಮೇಲೆ ಹಲ್ಲೆ ನಡೆಸಿದ್ದಾನೆ.
ಸಿದ್ದಾಪುರ ಮಹೇಶನ ಕೊಲೆ ಕೇಸಲ್ಲಿ ಜೈಲು ಸೇರಿದ್ದ ವೇಲು, ಈಗ ವಿಲ್ಸನ್ ಗಾರ್ಡನ್ ನಾಗನ ಕೋಪಕ್ಕೆ ಗುರಿಯಾಗಿದ್ದಾನೆ. ವಿಲ್ಸನ್ ಗಾರ್ಡನ್ ನಾಗ ಸೇರಿ ಒಟ್ಟು ಹತ್ತು ಜನರಿಂದ ವೇಲು ಮೇಲೆ ಹಲ್ಲೆ ತೀವ್ರ ಹಲ್ಲೆ ನಡೆದಿದೆ.