ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಮುಡಾ ಪ್ರಕರಣದಲ್ಲಿ (MUDA scam) ಸದ್ಯ ಸಿಎಂ ಸಿದ್ದರಾಮಯ್ಯಗೆ (Cm siddaramiah) ಟೆನ್ನನ್ ಹೆಚ್ಚಾಗಿದ್ದು, ಈ ಸಂಕಷ್ಟದಿದಂದ ತಮ್ಮನ್ನ ಪಾರು ಮಾಡುವಂತೆ ಸಿಎಂ ಸಿದ್ದರಾಮಯ್ಯ ಕಲಿಯುಗದ ಕಾಮಧೇನು ಮಂತ್ರಾಲಯದ (Mantralaya) ಗುರು ರಾಯರ ಮೊರೆ ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯಾಗಿದೆ.
ಶನಿವಾರದಂದು ರಾಜ್ಯಪಾಲರು ಸಿಎಂ ವಿರುದ್ಧ ಆರೋಪದ ಸಂಬಂಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟ ಹಿನ್ನಲೆ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ (Guru raghavendra swamy) ಸನ್ನಿಧಿಗೆ ಭೇಟಿ ಕೊಟ್ಟರೆ, ಇಷ್ಟಾರ್ಥ ಸಿದ್ದಿಯಾಗುತ್ತದೆ, ರಾಯರನ್ನ ನಂಬಿ ಕೆಟ್ಟವರಿಲ್ಲ ಎಂಬ ಪ್ರತೀತಿ ಇರುವ ಹಿನ್ನಲೆ ರಾಯರ ಬಳಿ ಸಿದ್ದು ಮೊರೆಯಿಡಲಿದ್ದಾರೆ.
ಹೀಗಾಗಿ ಸಹಜವಾಗಿ ದೇವಸ್ಥಾನಗಳ ಹೆಚ್ಚು ಮುಖ ಮಾಡದ ಸಿಎಂ ಸಿದ್ದು, ಸದಾ ಮೌಡ್ಯತೆ ವಿರೋಧಿಸುವ ಸಿದ್ದರಾಮಯ್ಯ, ಈಗ ಸಂಕಷ್ಟ ಬಂದಾಗ ವೆಂಕಟರಮಣ ಎಂಬಂತೆ ರಾಯರ ಮೊರೆ ಹೋಗ್ತಿದ್ದಾರಾ ಎಂಬ ಚರ್ಚೆ ಶುರುವಾಗಿದೆ. ಕಳೆದ ವಾರ ಮೈಸೂರಿನ ಜನಾಂದೋಲನ ಸಮಾವೇಶದ ನಂತರ ಕೂಡ ಸಿಎಂ ಚಾಮುಂಡೇಶ್ವರಿಯ (Chamundeshwari) ಮೊರೆ ಹೋಗಿದ್ದರು.