
ಮುಡಾ ಪ್ರಕರಣದಲ್ಲಿ (Muda sam) ಸಿಎಂ ಸಿದ್ದರಾಮಯ್ಯಗೆ (cm siddaramaiah) ಸದ್ಯ ಒಂದು ವಾರ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಇಂದು ಸುದೀರ್ಘವಾದ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನ ಮತ್ತೆ ಮುಮದಿನ ವಾರಕ್ಕೆ ಮುಂದೂಡಿಕೆ ಮಾಡಿದೆ.

ಇಂದು ನ್ಯಾಯಾಲದಲ್ಲಿ ಸ್ವಾರಸ್ಯಕರ ವಾದ ಮಂಡನೆಯಾಗಿದ್ದು, ಮುಡಾ ಹಗರಣದಲ್ಲಿ ಸಿಎಂ ಪಾತ್ರ ಏನು ಎಂಬ ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸುವ ವಾದ ಮಂಡಿಸಿದ ಸ್ನೇಹಮಹಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ (k g raghavan), ಹಗರಣಕ್ಕೂ ಅರ್ಜಿದಾರರಾದ ಸಿಎಂಗೂ ನೇರ ಸಂಬಂಧವಿದೆ ಅಂತ ವಾದ ಮಂಡಿಸಿದ್ರು.
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ (Prosecution) ಅನುಮತಿ ನೀಡಿದ್ದ ರಾಜ್ಯಪಾಲರ ಆದೇಶ ವಜಾಕ್ಕೆ ಕೋರಿದ್ದ ಮನವಿ ಅರ್ಜಿಯ ವಿಚಾರಣೆಯನ್ನ ಮುಂದಿನ ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ. ಈ ಮೂಲಕ ಸಿದ್ದರಾಮಯ್ಯಗೆ ಸದ್ಯ ಒಂದು ವಾರ ರಿಲೀಫ್ ಸಿಕ್ಕಂತಾಗಿದೆ.





