ಹೆಚ್ ಡಿ ಕುಮಾರಸ್ವಾಮಿ (HD Kumaraswamy) ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ (channapattana bi-election) ಟಿಕೆಟ್ ಯಾರಿಗೆ ಎಂಬ ವಿಚಾರವಾಗಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರಗೆ (by Vijayendra) ಅಶ್ವಥ್ ನಾರಾಯಣ್ ನೇತೃತ್ವದ ಸಮಿತಿ ಬಿಜೆಪಿ ಹೈಕಮ್ಯಾಂಡ್‌ಗೆ ವರದಿ ನೀಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇದೇ ವಿಚಾರವಾಗಿ ಜುಲೈ 11 ರಂದು ಬಿಜೆಪಿಯ ಪ್ರಮುಖ ಮುಖಂಡರ ಜೊತೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (Ashwath narayan) ನೇತೃತ್ವದ ಸಮಿತಿ ಸಭೆ ನಡೆಸಿತ್ತು.ಈ ವೇಳೆ ಚನ್ನಪಟ್ಟಣದಿಂದ ಸಿ.ಪಿ ಯೋಗೇಶ್ವರ್ (CP Yogeshwar) ಗೆ ಟಿಕೆಟ್ ನೀಡುವುದೇ ಸೂಕ್ತ ಸಿಪಿವೈ ಗೆ ಟಿಕೆಟ್ ನೀಡಿದ್ರೆ ಬಿಜೆಪಿಗೆ ಗೆಲುವು ಖಚಿತ ಅನ್ನೋ ಅಭಿಪ್ರಾಯ ಸಂಗ್ರಹವಾಗಿದೆ ಅಂತ ಹೇಳಲಾಗುತ್ತಿದೆ.

ಆದ್ರೆ ಇದಕ್ಕೆ ಜೆಡಿಎಸ್ (Jds) ನಾಯಕರು ಒಪ್ಪುತ್ತಾರ ಎಂಬ ಪ್ರಶ್ನೆ ಎದುರಾಗಿದೆ. ಕುಮಾರಸ್ವಾಮಿ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಿಖಿಲ್‌ರನ್ನ (Nikhil kumaraswamy)|ನಿಲ್ಲಿಸಿ ಗೆಲ್ಲಿಸಿಕೊಳ್ಳಬೇಕು ಎಂಬುದು ಜೆಡಿಎಸ್ ನಾಯಕರ ಪ್ಲಾನ್ ಆಗಿದ್ದು, ಸಿಪಿವೈರನ್ನ ಅಭ್ಯರ್ಥಿಯಾಗಿ ಜೆಡಿಎಸ್ ಕಾರ್ಯಕರ್ತರು ಒಪ್ಪಿಕೊಳ್ತಾರಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.