ರಾಜ್ಯದಲ್ಲಿ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಹೇಗೆ ಮತ ಹಾಕೋದು ಎಂಬ ಚಿಂತೆ ಶುರುವಾಗಿದೆ. ಆದರೆ ವಿದೇಶದಲ್ಲಿರುವ ಭಾರತೀಯರು ಮತ ಚಲಾಯಿಸೋಕೆ ಬಯಸಿದಲ್ಲಿ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.

ಎನ್ಆರ್ಐ ಮತದಾರರು ನೋಂದಣಿ ಹೇಗೆ..?
ಮತದಾರರು ಪಾಸ್ಪೋರ್ಟ್ನಲ್ಲಿ ನಮೂದಿಸಿದ ಹೆಸರಿನಂತೆ ಎನ್ಆರ್ಐ ಅಡಿಯಲ್ಲಿ ತಮ್ಮ ಕ್ಷೇತ್ರದಲ್ಲಿ ನೋಂದಣಿ ಅಧಿಕಾರಿಗೆ ನಿಗದಿತ ನಮೂನೆ 6 ಎನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕು.
ಪಾಸ್ಪೋರ್ಟ್ ಸೈಜ್ನ ಫೊಟೋ ಹಾಗೂ ಭಾರತೀಯ ವಿಳಾಸ ಹೊಂದಿರುವ ಪಾಸ್ಪೋರ್ಟ್ ಪುಟಗಳ ಸ್ವಯಂ ದೃಢೀಕರಿಸಿದ ಫೋಟೋ ಕಾಪಿ ಹಾಗೂ ವೀಸಾ ಅನುಮೋದನೆ ಪಾಸ್ಪೋರ್ಟ್ನ್ನು ಅರ್ಜಿಯ ಜೊತೆ ಸಲ್ಲಿಸಬೇಕು.
ಈ ದಾಖಲೆಗಳನ್ನು ವೈಯಕ್ತಿಕ ಸಲ್ಲಿಕೆ ಮಾಡಬಹುದು ಅಥವಾ ಕಚೇರಿಗೆ ನೀವು ಪೋಸ್ಟ್ ಮಾಡಬಹುದು. ಇಲ್ಲವೇ ರಾಜ್ಯ ಮುಖ್ಯ ಚುನಾವಣಾಧಿಕಾರಿ ವೈಬ್ಸೈಟ್ನಲ್ಲಿ ಸಲ್ಲಿಕೆ ಮಾಡಬಹುದು.
ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿದ ಬಳಿಕ ಎನ್ಆರ್ಐ ಅರ್ಜಿ ಬಗ್ಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುತ್ತದೆ.