ಪ್ರತಿಯೊಬ್ಬರು ಕೂಡ ತಮ್ಮ ಮುಖ,ತ್ವಚೆ,ಕೂದಲು ಬಣ್ಣ ಹೀಗೆ ಪ್ರತಿಯೊಂದರ ಬಗ್ಗೆ ಆರೈಕೆ ಮಾಡುತ್ತಾರೆ. ಆದ್ರೆ ಪಾದಗಳ ಬಗ್ಗೆ ಹೆಚ್ಚು ಕಾಳಜಿವಹಿಸುವುದಿಲ್ಲ..ದೇಹದ ಎಲ್ಲ ಭಾಗವೂ ಕೂಡ ಮುಖ್ಯ..ಹಾಗೆ ಪಾದದ ಆರೈಕೆಯನ್ನು ಕೂಡ ಮಾಡ್ಬೇಕು.ಹಾಗಿದ್ರೆ ನಿಮ್ಮ ಪಾದ ಸುಂದರವಾಗಿ ಕಾಣ್ಬೇಕು ಅಂದ್ರೆ ಹೀಗೆ ಮಾಡಿ.

ಕಾಲನ್ನು ನೆನಸಿ
ವಾರಕ್ಕೆ ಒಮ್ಮೆ ಅಥವ ಎರಡು ಭಾರಿ ಎಪ್ಸಮ್ ಉಪ್ಪು, ಅಡಿಗೆ ಸೋಡಾ ಅಥವಾ ಸಾರಭೂತ ತೈಲಗಳನ್ನು ಬೆರೆಸಿದ ಬೆಚ್ಚಗಿನ ನೀರಿನಲ್ಲಿ ನಿಮ್ಮ ಪಾದಗಳನ್ನು ನೆನೆಸಿ.ಹೀಗೆ ಮಾಡುವುದರಿಂದ ಕಾಲುಗಳು ಸ್ವಚವಾಗುವುದು ಮಾತ್ರವಲ್ಲದೆ ಒಡೆಯುವುದಿಲ್ಲ.

ಸಕ್ಕರೆ ಸ್ಕ್ರಬ್
ಮುಖಕ್ಕೆ ಹೇಗೆ ಸ್ಕ್ರಬ್ ಬಳಸುತ್ತಿವೊ ಅದೇ ರೀತಿ ಪದಗಳನ್ನು ಕೂಡ ಸ್ಕ್ರಬ್ ಮಾಡುವುದು ಉತ್ತಮ..ಸಲೂನ್ ಗಳಲ್ಲಿ ದುಬಾರಿ ಖರ್ಚು ಇರುವುದರಿಂದ ನೀವು ನೈಸರ್ಗಿಕ ಎಕ್ಸ್‌ಫೋಲಿಯೇಟಿಂಗ್ ಸ್ಕ್ರಬ್ ಅನ್ನು ಮಾಡಬಹುದು. ಆಲಿವ್ ಎಣ್ಣೆ ಮತ್ತು ನಿಂಬೆ ರಸದೊಂದಿಗೆ ಸಕ್ಕರೆಯನ್ನು ಮಿಶ್ರಣ ಮಾಡಿ.ನಂತರ ಅದನ್ನು ನಿಮ್ಮ ಪಾದಗಳಿಗೆ ಬಳಸಿ.ಇದರಿಂದ ಡೆಡ್ ಸ್ಕಿನ್ ರಿಮೂವ್ ಆಗುತ್ತದೆ.

ಮಾಯಿಶ್ಚರೈಸ್
ಪ್ರತಿದಿನ ಬೆಳಿಗ್ಗೆ ಎದ್ದಾಗ ನಿಮ್ಮ ಮುಖವನ್ನು ಹೇಗೆ ಮಾಯಿಶ್ಚರೈಸ್ ಮಾಡುತ್ತಿರೋ ಅದೇ ರೀತಿ ಪಾದಗಳನ್ನು ಕೂಡ ಮಾಯಿಶ್ಚರೈಸ್ ಮಾಡುವುದು ಉತ್ತಮ. ಹಾಗೂ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆಯನ್ನು ನಿಮ್ಮ ಪಾದಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಂತರ ಸಾಕ್ಸ್ ಧರಿಸಿ ಮಲಗುವುದರಿಂದ ಪಾದಗಳು ಮಾಯಿಶ್ಚರೈಸ್ ಆಗುತ್ತದೆ. ಚಳಿಗಾಲದಲ್ಲಿ ಇದನ್ನು ತಪ್ಪದೆ ಪಾಲಿಸಿ











