ರಾಜ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಪಕ್ಷದ ನಾಯಕರು ಈಗಾಗಲೇ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗೂ ತಿರುಗಿ ಭರ್ಜರಿ ಮತಬೇಟೆ ನಡೆಸುತ್ತಿದ್ದಾರೆ. ಹಾಸನ ನಗರದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡ ಅಬ್ಬರದ ಪ್ರಚಾರ ಪ್ರಾರಂಭಿಸಿದ್ದು, ನಗರದ ಬೀರನಹಳ್ಳಿ, ಹೊಯ್ಸಳ ನಗರ, ಕೆ.ಆರ್.ಪುರಂನಲ್ಲಿ ಕ್ಯಾಂಪೆನ್ ಮಾಡ್ತಿದ್ದಾರೆ.

ಪ್ರಚಾರದ ವೇಳೆ ಮಾತ್ನಾಡಿದ ಅವರು, ಹೆಚ್ಡಿ ದೇವೇಗೌಡರಿಗೆ ಪ್ರೀತಂಗೌಡ ಅಗೌರವ ತೋರಿದ್ದಾರೆ ಎಂಬ ಭವಾನಿ ರೇವಣ್ಣ ಹೇಳಿಕೆಗೆ ಟಕ್ಕರ್ ಕೊಟ್ಟಿದ್ದಾರೆ. ʻದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಹೆಚ್.ಡಿ.ದೇವೇಗೌಡ ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು. ಹಾಸನ ಕ್ಷೇತ್ರದಲ್ಲಿ ಗೆಲ್ಲಿಸಬೇಕು ಎಂಬುದು ಕಾರ್ಯಕರ್ತರ ಆಸೆ ಆಗಿತ್ತು. ಆದ್ರೆ ಅವರ ಸ್ವಾರ್ಥಕ್ಕೆ ಹೆಚ್.ಡಿ.ದೇವೇಗೌಡರನ್ನು ತುಮಕೂರಿಗೆ ಕಳಿಸಿದರು. ಇದು ಅವರ ಕುಟುಂಬದಲ್ಲೇ ವ್ಯಕ್ತವಾಗಿರುವ ಮಾತು ಅಂತ ಶಾಸಕ ಪ್ರೀತಂಗೌಡ ಟಾಂಗ್ ಕೊಟ್ಟರು.