ಮಹಾತ್ಮ ಗಾಂಧಿಯವರ 74ನೇ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ, “ಹಿಂದುತ್ವವಾದಿಗಳು” ರಾಷ್ಟ್ರಪಿತ ಇನ್ನಿಲ್ಲ ಎಂದು ಭಾವಿಸುತ್ತಾರೆ ಆದರೆ ಅವರು ಜೀವಂತವಾಗಿದ್ದಾರೆ, ಅಲ್ಲಿ ಸತ್ಯವಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಹಿಂದುತ್ವವಾದಿ’ಯೊಬ್ಬ ಗಾಂಧೀಜಿಗೆ ಗುಂಡು ಹಾರಿಸಿದ್ದಾನೆ. ಗಾಂಧೀಜಿ ಇನ್ನಿಲ್ಲ ಎಂದು ಎಲ್ಲಾ ಹಿಂದುತ್ವವಾದಿಗಳು ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಟ್ವೀಟ್ ಮಾಡಿ ‘ಫಾರೆವರ್ ಗಾಂಧಿ’ ಎಂಬ ಹ್ಯಾಶ್‌ಟ್ಯಾಗ್ ಬಳಸಿದ್ದಾರೆ.
ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರಾಗಿದ್ದ ‘ರಾಷ್ಟ್ರಪಿತ’ ಮಹಾತ್ಮ ಗಾಂಧೀಜಿಯವರು (ಅಕ್ಟೋಬರ್ 2, 1869 – ಜನವರಿ 30, 1948) ಅವರು ನಮ್ಮನ್ನಗಲಿ 74 ವರ್ಷಗಳೇ ಸಂದಿವೆ. ಅಹಿಂಸೆ ಹಾಗೂ ಅಸಹಕಾರ ಚಳುವಳಿ ಮೂಲಕ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ ಅವರನ್ನು 1948 ಜನವರಿ 30ರಂದು ನಾಥೂರಾಂ ಗೋಡ್ಸೆ ಗುಂಡಿಕ್ಕಿ ಕೊಂದರು. ರಾಷ್ಟ್ರಪಿತರನ್ನು ಕೊಂದ ಈ ದಿನವನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ.
ತಮ್ಮ ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಅವರು, ಮಹಾತ್ಮ ಗಾಂಧಿಯವರ ಉಲ್ಲೇಖವನ್ನು ಸಹ ಹಂಚಿಕೊಂಡಿದ್ದಾರೆ: “ನಾನು ಹತಾಶೆಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೀತಿಯ ಮಾರ್ಗವು ಯಾವಾಗಲೂ ಗೆದ್ದಿದೆ ಎಂದು ನಾನು ನೆನಪಿಸಿಕೊಳ್ಳುತ್ತೇನೆ. ಕ್ರೂರರು ಮತ್ತು ಕೊಲೆಗಾರರು ಸ್ವಲ್ಪ ಸಮಯದವರೆಗೆ ಕಾಣಿಸಬಹುದು. ಆದರೆ ಕಡೆಯಲ್ಲ ಅವರು ಸೋಲುತ್ತಾರೆ ಕೆಲಗೆ ಬಿದ್ದೇ ಬೀಳುತ್ತಾರೆ, ಸತ್ಯಕ್ಕೆ ಜಯವಾಗುತ್ತದೆ.” ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿ, ಅಹಿಂಸಾ (ಅಹಿಂಸೆ) ಕುರಿತು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, “ನಾವು ರಾಷ್ಟ್ರಪಿತರಿಗೆ ಅವರ ಪುಣ್ಯತಿಥಿಯಂದು ನಮ್ಮ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತೇವೆ. ಈ ದಿನವನ್ನು ಹುತಾತ್ಮರ ದಿನವಾಗಿಯೂ ಆಚರಿಸಲಾಗುತ್ತದೆ, ನಾವು ಎಲ್ಲಾ ವೀರ ಪುರುಷ ಮತ್ತು ಮಹಿಳೆಯರಿಗೆ ನಮಸ್ಕರಿಸುತ್ತೇವೆ. ” “ನಮ್ಮ ಪ್ರೀತಿಯ ಬಾಪು ಅವರು ಈ ಕಠಿಣ ಸಮಯದಲ್ಲಿ ನಮ್ಮನ್ನು ಮುನ್ನಡೆಸಲು ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ದಬ್ಬಾಳಿಕೆ, ನಿರಾಸಕ್ತಿ, ಅನ್ಯಾಯ ಮತ್ತು ಸುಳ್ಳಿನ ವಿರುದ್ಧ ನಿರ್ಭಯವಾಗಿ ಮತ್ತು ಪಟ್ಟುಬಿಡದೆ ಹೋರಾಡುವ ಅವರ ಸಮೃದ್ಧ ಮಾರ್ಗಗಳು ಇದ್ದೇ ಇರುತ್ತವೆ” ಎಂದು ಕಾಂಗ್ರೆಸ್ ಹೇಳಿದೆ.










