2022ರ ಕೇಂದ್ರ ಬಜೆಟ್ ಅಧಿವೇಶನವನ್ನು ನಡೆಸಲು 79 ಘಂಟಗಳ ಕಾಲಾವಕಾಶವಿದೆ ಎಂದು ರಾಜ್ಯಸಭಾ ಕರ್ಯದರ್ಶಿ ತಿಳಿಸಿದ್ದಾರೆ.
ಇಲ್ಲಿದೆ ಪ್ರಮುಖ 10 ಅಂಶಗಳು
1)ಕೋವಿಡ್-19 ಸಾಂಕ್ರಾಮಿಕದಿಂದಾಗಿ ಉಭಯ ಸದನಗಳು ಒಂದು ಘಂಟೆ ಮುಂಚಿತವಾಗಿ ಮುಗಿಸಲಾಗುತ್ತದೆ. ಇದರಿಂದಾಗಿ 27 ಕಲಾಪಗಳು ಮುಂದೂಡಲ್ಪಡುತ್ತದೆ.
2) ಅಧಿವೇಶನದ ಮೊದಲ ಭಾಗವು ಪ್ರಮುಖ ವ್ಯವಹಾರವಾಗಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಾಗಿರುತ್ತದೆ ಮತ್ತು ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸುವುದಾಗಿರುತ್ತದೆ.
3) ಕಲಾಪದ ಮೊದಲನೇ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
4) ಎರಡನೇ ದಿನ 2022-23 ಸಾಲಿನ ಬಜೆಟ್ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
5) ಬಜೆಟ್ ಅಧಿವೇಶನದ ಮೊದಲ ಭಾಗವು ಜನವರಿ 31ರಿಂದ ಫೆಬ್ರವರಿ 11ರವೆರೆಗೆ ನಡೆದರೆ. ಎರಡನೇ ಭಾಗವು ಮಾರ್ಚ್ 14ರಿಂದ ಏಪ್ರಿಲ್ 8ರ ನಡುವೆ ನಡೆಸಲಾಗುವುದು.

6) ರಾಜ್ಯಸಭೆಯಲ್ಲಿ ಶೂನ್ಯ ಸಮಯವನ್ನು ದಿನಕ್ಕೆ 60 ನಿಮಿಷಗಳವರೆಗೆ ಕಡಿತಗೊಳಿಸಿದೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆ ಬಗ್ಗೆ ಚರ್ಚಿಸಲು 13 ಘಂಟೆ 30 ನಿಮಿಷಗಳ ಕಾಲಾವಕಾಶವನ್ನು ನೀಡಲಾಗಿದೆ.
7) ಸೋಮವಾರದಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನವು 2020ರಲ್ಲಿ ಸಾಂಕ್ರಾಮಿಕ ಬಂದ ನಂತರ ನಡೆಯುತ್ತಿರುವ ಆರನೇ ಅಧಿವೇಶನ
8) ಈ ಭಾರಿಯ ಬಜೆಟ್ ಅಧಿವೇಶನದ ಕಾರ್ಯಸೂಚಿಯನ್ನು ಚರ್ಚಿಸಲು ರಾಜ್ಯಸಭೆಯ ಅಧ್ಯಕ್ಷ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರು ವರ್ಚುವಲ್ ಸಭೆಯನ್ನು ಆಯೋಜಿಸಿದ್ದಾರೆ.
9) 2020ರಲ್ಲಿ ನಡೆದ ಬಜೆಟ್ ಅಧಿವೇಶನವನ್ನು ಎಂಟು ದಿನಗಳಿಗೆ ಮೊಟಕುಗೊಳಿಸಲಾಯಿತು. 252ನೇ ಅಧಿವೇಸನವನ್ನು ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಉಭಯ ಸದನಗಳನ್ನು ಎಂಟು ದಿನಗಳವರೆಗೆ ನಡೆಸಲಾಯಿತು.
10) ಇದೇ ಕಾರಣಕ್ಕಾಗಿ 2021ರಲ್ಲಿ ನಡೆದ ಬಜೆಟ್ ಅಧಿವೇಶನವನ್ನು 10 ದಿನಗಳಿಗೆ ಮೊಟಕುಗೊಳಿಸಲಾಯಿತು.






