ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ತನಿಖಾಧಿಕಾರುಗಳು ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, 3991 ಪುಟಗಳ ಬೃಹತ್ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿದೆ. ಈ ಚಾರ್ಜ್‌ಶೀಲ್‌ನಲ್ಲಿರುವ ಅಂಶಗಳ ಕುರಿತು ದೃಷ್ಯ ಸುದ್ದಿ ಮಾಧ್ಯಮಗಳು ಎಳೆ ಎಳೆಯಾಗಿ ವರದಿ ಬಿತ್ತರಿಸಲು ಮುಂದಾಗಿದ್ದು.
ಆದ್ರೆ ಇದೀಗ ಚಾರ್ಜ್ ಶೀಟ್‌ನಲ್ಲಿನ ಮಾಹಿತಿಗಳನ್ನ ಬಹಿರಂಗಗೊಳಿಸದಂತೆ ಹೈಕೋರ್ಟ್ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಿದೆ.
ಈ ರೀತಿ ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಯನ್ನ ಸುದ್ದಿಯ ರೂಪದಲ್ಲಿ ಪ್ರಸಾರ ಮಾಡುವುದು ಅಥವಾ ಪ್ರಚಾರ ಮಾಡುವುದು ಸಮಂಜಸಲ್ಲ. ಹೀಗಾಗಿ ಈ ಬಗ್ಗೆ ನ್ಯಾಯಾಲಯ ಈ ವರದಿಗಳನ್ನ ಬಿತ್ತರಿಸದಂತೆ ಮಾಧ್ಯಮಗಳಿಗೆ ತಡೆಯಾಜ್ಞೆ ನೀಡಬೇಕು ಎಂದು ದರ್ಶನ್ ಪರ ವಕೀಳ ಹೈಕೋರ್ಟ್ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ವಾರ್ಜ್ ಶೀಟ್ ನಲ್ಲಿನ ಅಂಶಗಳನ್ನು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಸೂಚನೆ ನೀಡಿದೆ.