ತನ್ನದೇ ಆದ ಉದ್ಯಮ ಆರಂಭಿಸಿ ಮನೆಗೆ ಆಧಾರ ಆಗಬೇಕು, ಲಕ್ಷ ಲಕ್ಷ ಹಣ ಸಂಪಾದನೆ ಮಾಡಬೇಕು ಎಂಬ ಅಭಿಲಾಷೆ ಯಾರಿಗೆ ತಾನೇ ಇರೋದಿಲ್ಲ. ಆದರೆ ಮನೆಯ ಜವಾಬ್ದಾರಿಯ ಕಾರಣಗಳಿಂದಾಗಿ ಅನೇಕ ಮಹಿಳೆಯರಿಗೆ ಇಂತಹದ್ದೊಂದು ಆಸೆ ಇದ್ದರೂ ಸಹ ಅದನ್ನು ಸಾಕಾರ ಮಾಡಿಕೊಳ್ಳಲು ಆಗೋದಿಲ್ಲ. ಆದರೆ ದಿನದಿಂದ ದಿನಕ್ಕೆ ದುನಿಯಾ ದುಬಾರಿಯಾಗುತ್ತಿರೋ ಹಿನ್ನೆಲೆಯಲ್ಲಿ ಗಂಡ – ಹೆಂಡತಿ ಇಬ್ಬರೂ ದುಡಿಯದೇ ಬೇರೆ ದಾರಿಯಿಲ್ಲ ಎಂಬಂತಾಗಿದೆ.
ಹಾಗಾದರೆ ಹೆಣ್ಣು ಮಕ್ಕಳು ಅತ್ಯಂತ ಕಡಿಮೆ ಬಂಡವಾಳದಲ್ಲಿ, ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುವಂತಹ ಕೆಲವು ಬ್ಯುಸಿನೆಸ್ ಐಡಿಯಾಸ್ ಇಲ್ಲಿದೆ ನೋಡಿ.
ಹೋಂ ಕ್ಯಾಂಟೀನ್ : ಈಗಾಗಲೇ ಅನೇಕ ಮಹಿಳೆಯರು ಈ ಉದ್ಯಮದ ಮೂಲಕ ಲಾಭ ಗಳಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಬ್ಯಾಚುಲರ್ಗಳು ಹಾಗೂ ಕಚೇರಿಗೆ ಪ್ರಯಾಣಿಸುವವರು ಹೆಚ್ಚು .



ಇಂತವರಿಗೆ ಅಡುಗೆ ಮಾಡಿಕೊಳ್ಳೋಕೆ ಟೈಂ ಆಗಲಿ ತಾಳ್ಮೆ ಆಗಲಿ ಇರೋದಿಲ್ಲ. ಹೀಗಾಗಿ ಮಹಿಳೆಯರು ಮನೆಯಲ್ಲಿ ಕ್ಯಾಂಟೀನ್ ಆರಂಭಿಸಿ ಫುಡ್ ಡೆಲಿವರಿ ಮಾಡಿಸುವ ಮೂಲಕ ಲಾಭ ಗಳಿಸಬಹುದು. ಮೇಕಪ್ ಆರ್ಟಿಸ್ಟ್ : ಮಹಿಳೆಯರಿಗೆ ಹೇಳಿ ಮಾಡಿಸಿದ ಮತ್ತೊಂದು ಬ್ಯುಸಿನೆಸ್ ಎಂದರೆ ಮೇಕಪ್ ಆರ್ಟಿಸ್ಟ್ ಕೆಲಸ. ಈಗಂತೂ ಮದುವೆ ಸೇರಿದಂತೆ ಇನ್ನಿತರ ಶುಭ ಕಾರ್ಯಗಳಿಗೆ ಮೇಕಪ್ ಆರ್ಟಿಸ್ಟ್ಗಳನ್ನೇ ಕರೆಯಿಸುತ್ತಾರೆ. ಹಾಗಂತ ನೀವು ಬ್ಯೂಟಿ ಪಾರ್ಲರ್ ಹೊಂದಿರಬೇಕು ಎಂದೇನಿಲ್ಲ. ಮೇಕಪ್ ಆರ್ಟಿಸ್ಟ್ ಕೋರ್ಸ್ ಪೂರ್ಣಗೊಳಿಸಿ ಬಳಿಕ ಮೇಕಪ್ ಆರ್ಡರ್ಗಳನ್ನು ಪಡೆಯಬಹುದು.
ಫ್ಯಾಶನ್ ಡಿಸೈನಿಂಗ್ : ಟೈಲರಿಂಗ್ ಕೆಲಸಕ್ಕೆ ಎಂದಿಗೂ ಡಿಮ್ಯಾಂಡ್ ಇದ್ದೇ ಇದೆ. ಹೀಗಾಗಿ ನೀವು ಫ್ಯಾಶನ್ ಡಿಸೈನಿಂಗ್ ಬ್ಯುಸಿನೆಸ್ ಆರಂಭಿಸಿ ಕೂಡ ಒಳ್ಳೆಯ ಲಾಭ ಪಡೆಯಬಹುದು.