ಕೆಲವರಿಗೆ ಉಪ್ಪಿನಕಾಯಿ ಇಲ್ಲದೆ ಇದ್ರೆ ಊಟ ಸೇರಲ್ವಂತೆ. ಅದರಲ್ಲೂ ಕೂಡ ಮೊಸರನ್ನ ,ಚಿತ್ರಾನ್ನವನ್ನು ತಿನ್ನಬೇಕಾದರೆ ಉಪ್ಪಿನಕಾಯಿ ಕಂಪಲ್ಸರಿ ಇರ್ಲೇಬೇಕು. ಉಪ್ಪಿನಕಾಯಿ ಇದ್ರೆ ಮಾತ್ರ ರುಚಿ ಹೆಚ್ಚಾಗುತ್ತೆ. ಅದರಲ್ಲು ಮಾವಿನಕಾಯಿ ಉಪ್ಪಿನಕಾಯಿ, ನಿಂಬೆ ಉಪ್ಪಿನಕಾಯಿ ಹೀಗೆ ಸೀಸನ್ಗೆ ತಕ್ಕಂತೆ ಒಂದೊಂದು ಪದಾರ್ಥಗಳಿಂದ ಉಪ್ಪಿನಕಾಯಿಯನ್ನು ತಯಾರಿಸುತ್ತಾರೆ.ಉಪ್ಪು , ಹುಳಿ , ಕಾರ ಆಹಾ ನೆನೆಸಿಕೊಂಡ್ರೆ ಬಾಯಲ್ಲಿ ನೀರು ಬರುತ್ತದೆ.. ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು..ಆದ್ರೆ ಅತಿಯಾಗ್ಬಾರ್ದು ಅಷ್ಟೆ.. ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಉಪ್ಪಿನಕಾಯಿಯಲ್ಲಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು..

ಇಮ್ಯೂನಿಟಿ ಪವರ್:
ಉಪ್ಪಿನಕಾಯಿ ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ರಕ್ತದ ಸಕ್ಕರೆಯನ್ನು ನಿರ್ವಹಿಸುತ್ತದೆ:
ಉಪ್ಪಿನಕಾಯಿಯಲ್ಲಿರುವಂತಹ ವಿನೆಗರ್ ಬ್ಲಡ್ ಶುಗರ್ ಲೆವೆಲ್ ನ ಮ್ಯಾನೇಜ್ ಮಾಡುತ್ತದೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ತುಂಬಾನೆ ಸಹಾಯಕಾರಿ.

ಚರ್ಮದ ಆರೋಗ್ಯ:
ಉಪ್ಪಿನಕಾಯಿಯಲ್ಲಿರುವಂತಹ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳು ಚರ್ಮವನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಆರೋಗ್ಯಕರ ವಯಸ್ಸನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಜೀರ್ಣಕಾರಿ ಆರೋಗ್ಯ:
ಊಟದ ಜೊತೆ ಉಪ್ಪಿನಕಾಯಿ ತಿನ್ನುವುದರಿಂದ..ಅದರಲ್ಲಿರುವ ಪ್ರೋಬಯಾಟಿಕ್‌ಗಳು ಮತ್ತು ಆಮ್ಲೀಯತೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆ ಉಬ್ಬುವಿಕೆಯ,ಅಜೀರ್ಣ ,ವಾಕರಿಕೆ ಲಕ್ಷಣಗಳನ್ನು ನಿವಾರಿಸುತ್ತದೆ.