ರಾತ್ರಿ ನಿದ್ದೆ ಬಂದ ಮೇಲೆ ನಾವು ಯಾವ ಭಂಗಿಯಲ್ಲಿ ಅಥವಾ ಹೇಗೆ ಮಲಗಿರುತ್ತೇವೆ ಎಂಬ ಪರಿಜ್ಞಾನ ಯಾರಿಗೂ ಕೂಡ ಇರುವುದಿಲ್ಲ ಆದರೆ ಕೆಲವೊಬ್ಬರಿಗೆ ಬಲಗಡೆ ತಿರುಗಿ ಮಲಗಿದರೆ ಮಾತ್ರ ನಿದ್ದೆ ಬರುವುದು ಅಥವಾ ಎಡಗಡೆ ಮಲಗಿದರೆ ನಿದ್ದೆ ಬರುತ್ತೆ, ಬೆನ್ನು ಮೇಲೆ ಮಾಡಿ ಮಲಗುವುದರಿಂದ ನಿದ್ದೆ ಸ್ಯಾಟಿಸ್ಫ್ಯಾಕ್ಷನ್ ಆಗುತ್ತೆ ಅಂತ ಹೇಳುವವರು ಇದ್ದಾರೆ.. ಒಂದೊಂದು ಬಂಗಿಯಲ್ಲಿ ಮಲಗುವುದರಿಂದ ಆರೋಗ್ಯಕ್ಕೆ ಲಾಭ ಮತ್ತು ನಷ್ಟ ಎರಡೂ ಇದೆ..ಹಾಗಿದ್ರೆ ಎಡಗಡೆ ಮಾಲ್ಗುವುದರಿಂದ ಆರೋಗ್ಯದಲ್ಲಿ ಏನೆಲ್ಲ ಬೆನಿಫಿಟ್ಸ್ ಇದೆ ನೋಡಣ.

ರಕ್ತದ ಹರಿವು
ರಾತ್ರಿ ಮಲಗುವಾಗ ಎಡಗಡೆ ತಿರುಗಿ ಮಲಗುವುದರಿಂದ ಒಂದಿಷ್ಟು ಆರೋಗ್ಯ ಲಾಭಗಳು ಕೂಡ ಇದೆ ಅದರಲ್ಲಿ ಪ್ರಮುಖವಾಗಿ ರಕ್ತದ ಹರಿವನ್ನ ಹೆಚ್ಚು ಮಾಡುತ್ತದೆ.ಹೃದಯ, ಮೆದುಳು ಮತ್ತು ಇತರ ಪ್ರಮುಖ ಅಂಗಗಳಿಗೆ ಬ್ಲಡ್ ಫ್ಲೋ ಹೆಚ್ಚಿನ ಮಟ್ಟದಲ್ಲಿ ಆಗುತ್ತದೆ.
ಊತ ಕಡಿಮೆಯಾಗುತ್ತದೆ
ಗ್ರಾವಿಟಿಯಿಂದಾಗಿ ಕಾಲುಗಳಲ್ಲಿ ಮತ್ತು ಹಿಮ್ಮಡಿಯಲ್ಲಿ ಊತವಾಗಿದ್ದರೆ ತಕ್ಷಣಕ್ಕೆ ಕಡಿಮೆಯಾಗುತ್ತದೆ.
ಕಿಡ್ನಿ ಆರೋಗ್ಯಕ್ಕೆ ಉತ್ತಮ
ಎಡಗಡೆ ತಿರುಗಿ ಮಲಗುವುದರಿಂದ ಕಿಡ್ನಿಯಲ್ಲಿ ಫಿಲ್ಟರ್ ಸಿಸ್ಟಮ್ ಆಕ್ಟಿವ್ ಆಗಿರುತ್ತದೆ.ವೇಸ್ಟ್ ತೆಗೆದು ಹಾಕಲು ಸಹಾಯಕಾರಿ.

ಹೃದಯದ ಆರೋಗ್ಯ
ಎಡಭಾಗದಲ್ಲಿ ಮಲಗುವುದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.ಸುಧಾರಿತ ರಕ್ತಪರಿಚಲನೆ,ಪ್ರಮುಖ ಅಂಗಗಳಿಗೆ ವರ್ಧಿತ ರಕ್ತದ ಹರಿವು.ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಎಡಭಾಗದಲ್ಲಿ ಮಲಗುವುದು ಹೃದಯದ ಕಾರ್ಯವನ್ನು ಬೆಂಬಲಿಸುತ್ತದೆ.