ವಿ ಸೋಮಣ್ಣ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ ಸಚಿವ ಹೆಚ್.ಸಿ. ಮಹದೇವಪ್ಪ, ನಾನು ಲೋಕಸಭೆ ಟಿಕೆಟ್ ಕೊಡುವುದಾದರೆ ಸೋಮಣ್ಣಗೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ವಿ.ಸೋಮಣ್ಣ ಮತ್ತು ನಾನು ಹುಣಸೂರಿನಿಂದ ಬರುವಾಗ ಹಳ್ಳಿ ಮೆನೆ ಹೋಟೆಲ್ ನಲ್ಲಿ ಭೇಟಿ ಆಗಿದ್ದೆವು. ಇಬ್ಬರೂ ಭೇಟಿಯಾದಾಗ ಮಾತನಾಡದೇ ಇರೋಕೆ ಆಗುತ್ತ, ಮಾತನಾಡಿದ್ದೇವೆ. ನಾನು ಲೋಕಸಭೆ ಟಿಕೆಟ್ ಕೊಡುವುದಾದರೆ ಸೋಮಣ್ಣಗೆ ಕೊಡುತ್ತೇನೆ. ಅದು ನನ್ನೊಬ್ಬನ ತೀರ್ಮಾನ ಅಲ್ಲ. ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಎಂದು ಸಚಿವ ಡಾ.ಮಹದೇವಪ್ಪ ಹೇಳಿಕೆ.
![](https://pratidhvani.com/wp-content/uploads/2023/11/prajavani_2023-05_97f492cc-781a-499e-acc8-425cf2eefa90_file7nsw3ss0lnbjpydpdvz.jpeg)
ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗ ಸುನಿಳ್ ಬೋಸ್ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಅವರು, ಚಾಮರಾಜ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಸುನೀಲ್ ಬೋಸ್ ಕೂಡ ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡುತ್ತಾರೆ. ಪಕ್ಷಕ್ಕೆ ಕೆಲಸ ಮಾಡಿದವರು ಸ್ಪರ್ಧೆ ಮಾಡಬೇಕು. ಸುನೀಲ್ ಬೋಸ್ ನನ್ನ ಮಗ ಅಂತ ಹೇಳುತ್ತಿಲ್ಲ ಕೆಲಸ ಮಾಡಿದ್ದಾರೆ. ಪಕ್ಷ ಆಯ್ಕೆ ಮಾಡಿದರೇ ಸುನೀಲ್ ಬೋಸ್ ಆಕಾಂಕ್ಷಿ ಎಂದರು.