ಕಾಂಗ್ರೆಸ್ ನಾಯಕ ಚಿದಂಬರಂ ಹಾಗು ಅವರ ಪುತ್ರ ಕಾರ್ತಿ ಚಿದಂಬರಂಗೆ ಸೇರಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ದಾಳಿಗಳ ಕುರಿತಾಗಿ ಪ್ರಕರಣವನ್ನ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಚಿದಂಬರಂ ಪುತ್ರ ಕಾರ್ತಿ ವಿರುದ್ದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿವೆ.
ಈ ಕುರಿತು ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಕಾರ್ತಿ, ಎಷ್ಟು ಭಾರೀ ಸಿಬಿಐ ದಾಳಿ ಮಾಡಿದೆ ಎಂದು ನನಗೆ ತಿಳಿದಿಲ್ಲ ಇದು ದೊಡ್ಡ ದಾಖಲೆಯಾಗಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.