• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕ್ರೀಡೆ

ಆರ್ ಸಿಬಿಗೆ ಸುಲಭ ತುತ್ತಾದ ಹೈದರಾಬಾದ್; ವಿರೋಚಿತ ಸೋಲಿನ ಸೇಡು ತೀರಿಸಿಕೊಂಡ ಬೆಂಗಳೂರು ಹುಡುಗರು!

ಪ್ರತಿಧ್ವನಿ by ಪ್ರತಿಧ್ವನಿ
April 25, 2024
in ಕ್ರೀಡೆ
0
ಆರ್ ಸಿಬಿಗೆ ಸುಲಭ ತುತ್ತಾದ ಹೈದರಾಬಾದ್; ವಿರೋಚಿತ ಸೋಲಿನ ಸೇಡು ತೀರಿಸಿಕೊಂಡ ಬೆಂಗಳೂರು ಹುಡುಗರು!
Share on WhatsAppShare on FacebookShare on Telegram

ಹೈದರಾಬಾದ್‌: ಸನ್ ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರು ತಂಡಕ್ಕೆ ಸುಲಭ ತುತ್ತಾಯಿತು. 35 ರನ್ ಗಳಿಂದ ಅಮೋಘ ಜಯ ಸಾಧಿಸಿ, ಹಿಂದಿನ ಪಂದ್ಯದ ಸೇಡನ್ನು ಆರ್ ಸಿಬಿ ತೀರಿಸಿಕೊಂಡಿದೆ.

ADVERTISEMENT

ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಈ ಮೂಲಕ ಬೆಂಗಳೂರು ತಂಡ ತಕ್ಕ ಉತ್ತರ ನೀಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 206 ರನ್‌ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 8 ವಿಕೆಟ್‌ ಕಳೆದುಕೊಂಡು ಕೇವಲ 171 ರನ್‌ ಗಳಿಸಿತು. ಈ ಮೂಲಕ ಬರೋಬ್ಬರಿ 35 ರನ್ ಗಳಿಂದ ಬೆಂಗಳೂರು ತಂಡ ಗೆಲುವು ಸಾಧಿಸುವ ಮೂಲಕ ತವರಿನಲ್ಲಿ ಅನುಭವಿಸಿದ್ದ ವಿರೋಚಿತ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಹೈದರಾಬಾದ್ ಯಾವುದೇ ರೀತಿಯಲ್ಲಿ ಇಂದು ಬೆಂಗಳೂರಿಗೆ ಸವಾಲು ಒಡ್ಡಲಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲಿಯೂ ಇಂದು ವಿಫಲವಾಯಿತು. 5 ಓವರ್‌ಗಳಲ್ಲಿ 56 ರನ್‌ ಗಳಿಸಿದ್ದ ಹೈದರಾಬಾದ್ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಯಾವೊಬ್ಬ ಆಟಗಾರ ಕೂಡ ಆರ್ ಸಿಬಿ ಎದುರು ಮಿಂಚಲು ಆಗಲಿಲ್ಲ. ಪರಿಣಾಮ ಹೈದರಾಬಾದ್ ಸೋಲು ಕಾಣುವಂತಾಯಿತು.

ಹೈದರಾಬಾದ್‌ ಪರ ಅಭಿಷೇಕ್‌ ಶರ್ಮಾ 31, ನಾಯಕ ಪ್ಯಾಟ್‌ ಕಮ್ಮಿನ್ಸ್‌ 31, ನಿತೀಶ್‌ ಕುಮಾರ್‌ ರೆಡ್ಡಿ 13, ಟ್ರಾವಿಸ್‌ ಹೆಡ್‌ 1, ಹೆನ್ರಿಕ್‌ ಕ್ಲಾಸೆನ್‌, ಏಡನ್‌ ಮಾರ್ಕ್ರಮ್‌ ತಲಾ 7, ಅಬ್ದುಲ್‌ ಸಮದ್‌ 10, ಭುವನೇಶ್ವರ್‌ ಕುಮಾರ್‌ 13, ಶಹಬಾಜ್‌ ಅಹ್ಮದ್‌ 40, ಜಯದೇವ್‌ ಉನಡ್ಕಟ್‌ 8 ರನ್‌ ಗಳಿಸಿ ಔಟ್ ಆದರು. ಆರ್‌ಸಿಬಿ ಪರ ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ವಿರಾಟ್‌ ಕೊಹ್ಲಿ ಸ್ಪೋಟಕ ಆರಂಭ ನೀಡಿದರೂ. ಆದರೆ, ಕೊಹ್ಲಿ ನನಂತರ ನಿಧಾನಗತಿ ಆಟವಾಡಿದರು. ಡುಪ್ಲೆಸಿಸ್‌ 12 ಎಸೆತಗಳಲ್ಲಿ 25 ರನ್‌ ಗಳಿಸಿದರು. ರಜತ್‌ ಪಾಟೀದಾರ್‌ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್‌ ಮತ್ತಿತರ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದಿಂದ ಆರ್‌ಸಿಬಿ 200 ರನ್‌ಗಳ ಗಡಿ ದಾಟುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಯಿತು.

ಆರ್‌ಸಿಬಿ ಪರ ರಜತ್‌ ಪಾಟೀದಾರ್‌ 20 ಎಸೆತಗಳಲ್ಲಿ 50 ರನ್‌ (5 ಸಿಕ್ಸರ್‌, 2 ಬೌಂಡರಿ), ವಿರಾಟ್‌ ಕೊಹ್ಲಿ 51 ರನ್‌ (43 ಎಸೆತ, 4 ಬೌಂಡರಿ, 1 ಸಿಕ್ಸರ್‌), ಡುಪ್ಲೆಸಿಸ್‌ 25 ರನ್‌, ಕ್ಯಾಮರೂನ್‌ ಗ್ರೀನ್‌ 37 ರನ್‌, ಮಹಿಪಾಲ್‌ ಲೋಮ್ರೋರ್‌ 7ರನ್‌, ದಿನೇಶ್‌ ಕಾರ್ತಿಕ್‌ 11 ರನ್‌, ಸ್ವಪ್ನಿಲ್ ಸಿಂಗ್‌ 12 ರನ್‌ ಗಳಿಸಿ ಮಿಂಚಿದರು. ಈ ಮೂಲಕ ಟೂರ್ನಿಯಲ್ಲಿ 2 ನೇ ಗೆಲುವನ್ನು ಬೆಂಗಳೂರು ತಂಡ ಗಳಿಸಿತು. ಕೊನೆಯ ಎಲ್ಲ ಪಂದ್ಯಗಳನ್ನು ಗೆದ್ದು ಏನಾದರೂ ಪವಾಡ ನಡೆದರೆ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ಏರಬಹುದು.

Tags: CricketHyderabadMatchRCBsrh
Previous Post

ಚುನಾವಣೆ ವೇಳೆ ಭರ್ಜರಿ ಬೇಟೆ; 7 ಕೆಜಿ ಚಿನ್ನ, 5 ಕೋಟಿ ನಗದು ವಶಕ್ಕೆ

Next Post

ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ; ಆರೋಪಿ ಅರೆಸ್ಟ್

Related Posts

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ
ಕ್ರೀಡೆ

ವಿಶ್ವಕಪ್‌ನಲ್ಲಿ ಭಾರತಕ್ಕೆ ‘ಮಾಡು ಇಲ್ಲವೇ ಮಡಿ’ ಪಂದ್ಯ: ಪಾಕ್ ವಿರುದ್ಧ ಕಣಕ್ಕಿಳಿಯಲಿದೆ ಟೀಂ ಇಂಡಿಯಾ

by ಪ್ರತಿಧ್ವನಿ
August 19, 2026
0

ಆಗಸ್ಟ್ 19: ಹಾಕಿ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಬುಧವಾರ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ನೆದರ್‌ಲ್ಯಾಂಡ್ಸ್‌ನ ಐತಿಹಾಸಿಕ ವೆಗ್ನರ್ ಕ್ರೀಡಾಂಗಣ ಈ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಬರೋಬ್ಬರಿ...

Read moreDetails
2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

2027ರ ಏಕದಿನ ವಿಶ್ವಕಪ್; 51 ದಿನಗಳ ಕ್ರಿಕೆಟ್ ಹಬ್ಬಕ್ಕೆ ದಿನಾಂಕ ಫಿಕ್ಸ್!

August 17, 2026
ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

ಗಂಗೂಲಿ ಕುಟುಂಬಕ್ಕೆ ಬೆದರಿಕೆ ಹಾಕಿದವರು ಯಾರು? ಪತ್ರದ ಜಾಡು ಹಿಡಿದ ಪೊಲೀಸರು

August 11, 2026
ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

ಸೆಪ್ಟೆಂಬರ್‌ನಲ್ಲಿ ಭಾರತ–ಪಾಕ್‌ ಕ್ರಿಕೆಟ್‌ ಕದನ: 2 ಬಾರಿ ಮುಖಾಮುಖಿಯಾಗುವ ಸಾಧ್ಯತೆ!

August 10, 2026
ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

ಅಪ್ಪನ ಕನಸಿಗೆ ಚಿನ್ನದ ಕಿರೀಟ..! ಕಾಮನ್‌ವೆಲ್ತ್‌ನಲ್ಲಿ ಅಸ್ಮಿತಾ ಐತಿಹಾಸಿಕ ಸಾಧನೆ

August 1, 2026
Next Post
ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ; ಆರೋಪಿ ಅರೆಸ್ಟ್

ಭಾರತೀಯ ಹೈಕಮಿಷನ್ ಕಚೇರಿ ಮೇಲೆ ದಾಳಿ; ಆರೋಪಿ ಅರೆಸ್ಟ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada