ಕಳೆದ ಸೆಪ್ಟೆಂಬರ್ ನಲ್ಲಿ 20 ವರ್ಷದ ದಲಿತ ಯುವತಿಯನ್ನು ನಾಲ್ಕು ಥಾಕುರ್ ಪುರುಷರು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಗುಂಪು ಅತ್ಯಾಚಾರಕ್ಕೆ ಒಳಗಾಗಿಸಿ ಹತ್ಯೆ ಮಾಡಿದ್ದರು. ಸೆಪ್ಟೆಂಬರ್ 30ಕ್ಕೆ ಸಂಶಯಾಸ್ಪದವಾಗಿ ಯುವತಿಯ ಸಂಸ್ಕಾರ ನಡೆದು ಒಂದು ವರ್ಷವಾಗುತ್ತದೆ. ಇದು ಎರಡು ಭಾಗಗಳ ಲೇಖನದ ಮೊದಲ ಭಾಗವಾಗಿದೆ.
ಹತ್ರಾಸ್: ಹತ್ರಾಸ್ ನಲ್ಲಿ ನಡೆದ ಗುಂಪುಅತ್ಯಾಚಾರಕ್ಕೆ ಬಲಿಯಾದ 20 ವರ್ಷದ ಯುವತಿಯ ಯಾವುದೇ ಭಾವಚಿತ್ರ ಅವರ ಮನೆಯ ಗೋಡೆಯ ಮೇಲಿಲ್ಲ. ಅವರ ಶವವನ್ನು ಬಲವಂತವಾಗಿ ಸಂಸ್ಕರಿಸಿದ ದಿನದಂದು ಅವರ ತಾಯಿ ಉಟ್ಟಿದ್ದ ಸೀರೆಯು ಮನೆಯ ವರಾಂಡದ ಮಾಳಿಗೆಯಿಂದ ಇನ್ನೂ ಜೋತಾಡುತ್ತಿದೆ.
“ಅವಳ ಸಾವಿಗೆ ನ್ಯಾಯ ದೊರಕಿದ ದಿನದಂದು ದೊಡ್ಡ ಫೋಟೋವನ್ನೇ ಹಾಕುತ್ತೇವೆ” ಎಂದು ಅವರ ತಾಯಿ ತುಳಸಿ ಗಿಡದತ್ತ ಬೆರಳು ತೋರುವ ಮುನ್ನ ಹೇಳಿದರು. “ಅಲ್ಲಿಯ ವರೆಗೂ ಅವಳ ಈ ಗಿಡವನ್ನು ನಾನೇ ನೋಡಿಕೊಳ್ಳುತ್ತೇನೆ. ಅದು ನಮ್ಮಲ್ಲಿ ಅವಳ ನೆನಪನ್ನು ಉಳಿಸುತ್ತದೆ. ಜೊತೆಗೆ, ಅದು ಸುಂದರವಾಗಿ ಬೆಳೆಯುತ್ತಿದೆ.”
ಸೀರೆಯ ಕುರಿತು ತಾಯಿ ಹೀಗೆಂದರು, “ಅವಳ ಮುಖವನ್ನು ಕೊನೆಯ ಬಾರಿ ನೋಡಲು ಅವಕಾಶ ನೀಡದೇ ಇದ್ದದ್ದಕ್ಕೆ ಆ ಸೀರೆ ನೆನಪು. ಈಗ ನಾನು ಅವಳ ಬಗ್ಗೆ ಯೋಚಿಸಿದಾಗಲೆಲ್ಲಾ ತುಳಸಿ ಗಿಡವನ್ನು ಕಾಣುತ್ತೇನೆ.”
ಹಥ್ರಾಸ್: ಚಂದ್ರಶೇಖರ್ ಆಝಾದ್ ಹಾಗೂ ಸಂಗಡಿಗರ ವಿರುದ್ಧ ಪ್ರಕರಣ ದಾಖಲು
20 ವರ್ಷದ ದಲಿತ ಯುವತಿ ನಾಲ್ಕು ಮೇಲ್ಜಾತಿ ಥಾಕುರ್ ಪುರುಷರಿಂದ ಅತ್ಯಾಚಾರಕ್ಕೊಳಗಾಗಿ ಹತ್ಯೆಗೊಂಡ ಘಟನೆ ನಡೆದು ಸೆಪ್ಟೆಂಬರ್ 14ಕ್ಕೆ ಒಂದು ವರ್ಷವಾಯಿತು. ಹತ್ರಾಸ್ ಜಿಲ್ಲೆಯ ಬೂಲ್ಗರ್ಹೀ ಗ್ರಾಮದಲ್ಲಿ ಸಂದೀಪ್ (20), ಅವರ ಮಾಮ ರವಿ (35) ಮತ್ತು ಅವರ ಇಬ್ಬರು ಗೆಳೆಯರು ರಾಮು (26) ಮತ್ತು ಲವ್ ಕುಶ್ (23) ಆ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
14 ಸೆಪ್ಟೆಂಬರ್ 2020ರ ಬೆಳಗ್ಗೆ ತಮ್ಮ ಆಕಳುಗಳಿಗೆ ಮೇವು ಸಂಗ್ರಹಿಸಲು ತಮ್ಮ ತಾಯಿಯೊಡನೆ ಗದ್ದೆಗೆ ಹೋಗಿದ್ದಾಗ ಆರೋಪಿಗಳು ಯುವತಿಯನ್ನು ವಶ ಪಡಿಸಿಕೊಂಡಿದ್ದರು ಎಂದು ಆಪಾದಿಸಲಾಗಿದೆ.
CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಸೆಪ್ಟೆಂಬರ್ 29ರಂದು ಅವರು ತಮಗಾದ ಗಾಯಗಳಿಗೆ ಸೋತು ದೆಹಲಿಯ ಸಫ್ದಾರ್ ಜಂಗ್ ಆಸ್ಪತ್ರೆಯಲ್ಲಿ ಮರಣ ಹೊಂದಿದ ಬಳಿಗೆ ಶವವನ್ನು ಆ ರಾತ್ರಿ ಗ್ರಾಮಕ್ಕೆ ತರಲಾಗಿತ್ತು. ಅವರ ಶವವನ್ನು ಸೆಪ್ಟೆಂಬರ್ 30ರ ಮಧ್ಯರಾತ್ರಿ 2.25ಕ್ಕೆ ಉತ್ತರ ಪ್ರದೇಶದ ಸರಕಾರಿ ಅಧಿಕಾರಿಗಳು ಬಲವಂತವಾಗಿ ಸುಟ್ಟುಹಾಕುತ್ತಾರೆ.
ಒಂದು ವರ್ಷದ ಬಳಿಕ ಕುಟುಂಬ ಅವರನ್ನು ಕಳೆದುಕೊಂಡಿದ್ದಕ್ಕಾಗಿ ಮಾತ್ರವಲ್ಲ, ಅವರ ಅಂತಿಮಸಂಸ್ಕಾರದ ವಿಧಾನದಿಂದಲೂ ನೊಂದಿದೆ. ಗ್ರಾಮದಲ್ಲಿ ಈಗಾಗಲೇ ಇದ್ದ ಜಾತಿ ವಿಭಜನೆ ಇನ್ನೂ ತೀವ್ರವಾಗಿ ಹೋಗಿದೆ. ನಾಲ್ಕೂ ಆರೋಪಿಗಳು ಸೆರೆವಾಸದಲ್ಲಿದ್ದಾರೆ, ಆದರೆ ಕಾನೂನಾತ್ಮಕವಾಗಿ ಪ್ರಕರಣವನ್ನು ‘ಮೇಲ್ಜಾತಿಗಳು ಬೆದರಿಕೆ’ ಹಾಕುತ್ತಾ ಹಾದಿ ತಪ್ಪಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಒಂದು ಕಾಲದಲ್ಲಿ ದೊರಕಿದ್ದ ಪ್ರಾಮುಖ್ಯತೆ ಹಾಗು ರಾಜಕೀಯ ಬೆಂಬಲ ಈಗ ಇಲ್ಲದಂತಾಗಿದೆ.
ತಡರಾತ್ರಿಯ ಅಂತ್ಯಸಂಸ್ಕಾರವನ್ನು ಸಮರ್ಥಿಸಿಕೊಂಡ ಆದಿತ್ಯನಾಥ್ ಸರ್ಕಾರ!
ಕಳೆದ ಗುರುವಾರ ಬೂಲ್ಗರ್ಹೀ ಗ್ರಾಮಕ್ಕೆ ಭೇಟಿ ನೀಡಿದಾಗ ಕುಟುಂಬದ ರಕ್ಷಣೆಗೆ ನೇಮಿಸಲಾಗಿರುವ CRPF ಜವಾನರನ್ನು ಹೊರತು ಪಡಿಸಿ ಆ ಕುಟುಂಬ ತನ್ನಷ್ಟಕ್ಕೆ ತಾನು ಇದ್ದದ್ದನ್ನು ದ ಪ್ರಿಂಟ್ ಕಂಡಿದೆ. 20 ವರ್ಷದ ಯುವತಿಯ ಕೊಲೆಯು ಮರ್ಯಾದಾ ಹತ್ಯೆಯಾಗಿತ್ತು ಎಂಬ ಗುಸುಗುಸು ಮಾತುಗಳನ್ನು ಹಾಗು ಚುಚ್ಚುಮಾತುಗಳನ್ನು ಕುಟುಂಬ ಈಗಲೂ ಸಹಿಸಿಕೊಳ್ಳುತ್ತಿದೆ.
ಬೆದರಿಕೆಯ ಆರೋಪದೊಂದಿಗೆ ಹಾದಿ ತಪ್ಪುತ್ತಿರುವ ವಿಚಾರಣೆ
ಈ ಪ್ರಕರಣವನ್ನು ಸಿ.ಬಿ.ಐ. ತೆಗೆದುಕೊಂಡು ಅಕ್ಟೋಬರ್ 11ರಂದು ಪ್ರಾಥಮಿಕ ಮಾಹಿತಿ ವರದಿಯನ್ನು ದಾಖಲಿಸಿತ್ತು. ನಾಲ್ಕು ಪುರುಷರು ಗ್ಯಾಂಗ್ ರೇಪ್ ಮತ್ತು ಹತ್ಯೆ ನಡೆಸಿದ್ದಾರೆ ಎಂಬ ಆರೋಪದೊಡನೆ ಉತ್ತರ ಪ್ರದೇಶದ ಪೋಲಿಸರ ನಿರ್ಲಕ್ಷೆಯನ್ನು ಸಿ.ಬಿ.ಐ. ಡಿಸೆಂಬರ್ 18ರ ಚಾರ್ಜ್ ಶೀಟಿನಲ್ಲಿ ದಾಖಲಿಸಿತ್ತು.
ಈ ವರ್ಷದ ಜನವರಿ ತಿಂಗಳಲ್ಲಿ ವಿಶೇಷ ಎಸ್.ಸಿ/ಎಸ್.ಟಿ. ನ್ಯಾಯಾಲಯವೊಂದರಲ್ಲಿ ಪ್ರಕರಣದ ವಿಚಾರಣೆ ಆರಂಭವಾಯಿತು. ಈ ವರೆಗು ಸುಮಾರು 20 ನ್ಯಾಯವಿಚಾರಣೆಗಳು ನಡೆದಿವೆ. ಪ್ರಾಸಿಕ್ಯೂಷನ್ ತನ್ನ ಸಾಕ್ಷಿಗಳ ಹೇಳಿಕೆಗಳನ್ನು ಮತ್ತು ಪುರಾವೆಗಳನ್ನು ಸಲ್ಲಿಸುವ ಪ್ರಕ್ರಿಯೆ ಅಕ್ಟೋಬರ್ ವರೆಗೂ ನಡೆಯಬಹುದು. ಅದಾದ ನಂತರ ಡಿಫೆನ್ಸ್ ತನ್ನ ಸಾಕ್ಷಿಗಳಾದ ನಾಲ್ಕು ಆರೋಪಿಗಳನ್ನು ಕರೆತರುತ್ತದೆ. ಆಹುತಿಯ ಅಣ್ಣನೇ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ ಎಂದು ಡಿಪೆನ್ಸ್ ಆರೋಪಿಸಿದೆ,
ಮಾರ್ಚ್ ತಿಂಗಳಿನಲ್ಲಿ ನ್ಯಾಯಾಲಯದಲ್ಲಿ ಗಲಭೆ ಉಂಟಾಗಿ ಕುಟುಂಬವು ‘ಮೆಲ್ಜಾತಿ ಬೆದರಿಕೆ, ನಡೆದಿದೆ ಎಂದು ಆರೋಪಿಸಿದೆ.
ದಲಿತ ಕುಟುಂಬದ ವಕೀಲರಾದ ಸೀಮಾ ಕುಶ್ವಾಹಾ ಅವರ ಪ್ರಕಾರ ಮಾರ್ಚ್ 5ರಂದು ತರುಣ್ ಹರಿ ಶರ್ಮಾ ಎಂಬ ನ್ಯಾಯಾವಾದಿ ಕುಡಿದು ಬಂದು ಅವರನ್ನು ಹಾಗು ಪ್ರಾಸಿಕ್ಯೂಷನ್ ನ ಮೊದಲ ಸಾಕ್ಷಿಯಾದ ಆಹುತಿಯ ಅಣ್ಣನಿಗೆ ಬೆದರಿಕೆ ಹಾಕಿದ ನಂತರ ಜಿಲ್ಲಾ ನ್ಯಾಯಾಮೂರ್ತಿ ಬಿ.ಡಿ. ಭಾರತಿ ಅವರು ಅಂದಿನ ಕಾರ್ಯಾಲಾಪಗಳನ್ನು ಮುಂದೂಡಬೇಕಾಯಿತು.
CBI ತನಿಖೆ ನಡುವೆಯೇ ಹತ್ರಾಸ್ ಪ್ರಕರಣದ ದಿಕ್ಕು ತಪ್ಪಿಸಲೆತ್ನಿಸುತ್ತಿರುವ ಆದಿತ್ಯನಾಥ್, ಮತ್ತವರ ಪೊಲೀಸರು
ಜೊತೆಗೆ, ಯುವತಿಯ ಕೆಳವಸ್ತ್ರಗಳನ್ನು ಹೊರತೆಗೆದಾಗ ಡಿಫೆನ್ಸ್ ನ ಸಲಹೆಗಾರರಾದ ಮುನ್ನಾ ಸಿಂಘ್ ಪುನ್ಧೀರ್ ಅವರು ವಕೀಲರ ಒಂದು ಗ್ಯಾಂಗಿನೊಡನೆ ಕುಟುಂಬವನ್ನು ಆಡಿಕೊಳ್ಳಲು ಆರಂಭಿಸಿದರು.
“ಸೀಮಾ ದಾಟಬಾರದ ಸೀಮೆಯನ್ನು ನೆನಪಿಸುತ್ತವೆ”, “ಚೆನ್ನಾಗಿ ತೋರಿಸಿ” – ಈ ರೀತಿಯ ಹಲವು ಹೇಳಿಕೆಗಳನ್ನು ಒಳ ಉಡುಪುಗಳನ್ನು ಹಾಜರುಪಡಿಸಿದಾಗ ಕೂಗಲಾಯಿತು ಎಂದು ಕುಶ್ವಾಹಾ ಮತ್ತು ಆಹುತಿಯ ಅಣ್ಣ ಹೇಳಿದ್ದಾರೆ. ಮಾರ್ಚ್ 5ರ ಘಟನೆಯ ನಂತರ ಕ್ಯಾಮರಾ ಸಹಿತ ಕಾರ್ಯಾಲಾಪಗಳನ್ನು ನಡೆಸಲು ಆರಂಭಿಸಲಾಯಿತು.
ಅತ್ಯಾಚಾರ ಆರೋಪಿಗಳ ಬೆಂಬಲಕ್ಕೆ ನಿಂತ ʼಸವರ್ಣ ಪರಿಷದ್ʼ: ಹಾಥ್ರಸ್ ಪ್ರಕರಣದಲ್ಲಿ ಜಾತಿ ಆಯಾಮದ ಪ್ರಾಮುಖ್ಯತೆ
ಪುನ್ಧೀರ್ ಅವರು ಈ ಅರೋಪಗಳನ್ನು ನಿರಾಕರಿಸಿ ಅವುಗಳನ್ನು ‘ಕಲ್ಪಿತವಾದವು’ ಮತ್ತು ‘ಪ್ರಚಾರತಂತ್ರ’ ಎಂದು ಕರೆದಿದ್ದಾರೆ.
“ಇದು ಮಾರ್ಯಾದಾ ಹತ್ಯೆಯ ಪ್ರಕರಣವಾಗಿದೆ. ಯಾರೂ ಅವರನ್ನು ಬೆದರಿಸಿಲ್ಲ.” ಎಂದು ಹೇಳಿದರು. “ಅಣ್ಣ ತನ್ನ ತಂಗಿಯನ್ನು ಕೊಂದ ಎಂಬ ಕಾರಣಕ್ಕೆ ಆ ಕುಟುಂಬವು ಹಳ್ಳಿಯಿಂದ ಓಡಿಹೋಗಬೇಕು ಎಂದು ಹೀಗೆಲ್ಲಾ ಮಾಡುತ್ತಿದೆ.”
‘ನ್ಯಾಯಾಲಯಕ್ಕೆ ಹೋಗುವಾಗ ವಾಕರಿಕೆಯಾಗುತ್ತದೆ’
ಆ ಘಟನೆ ನಡೆದಮೇಲೆ ಕುಶ್ವಾಹಾ ಪೋಲೀಸರ ರಕ್ಷಣೆಯನ್ನು ಕೋರಿದ್ದಾರೆ.
“ಹತ್ರಾಸ್ ನ ಗಡಿ ದಾಟುವ ವರೆಗು ನನಗೆ ರಕ್ಷಣೆ ಕೊಡಿಸಲು ನಾನು ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದೇನೆ.” ಎಂದು ಹೇಳಿದ ಕುಶ್ವಾಹಾ ಅವರು ಶರ್ಮಾ ‘ಗೂಂಡ ಟೈಪ್’ ನವರು ಮತ್ತು ಈ ಹಿಂದೆ ಕೊಲೆಯ ಆರೋಪ ಹೊತ್ತಿದ್ದರು ಎಂದು ಆರೋಪಿಸಿದರು.
ಕೆಲವು ವಕೀಲರು ಪ್ರಕರಣವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕುಟುಂಬ ಆರೋಪಿದೆ. “ಇಲ್ಲಿ ವಕೀಲರ ಗ್ಯಾಂಗ್ ಒಂದಿದೆ. ಅವರು ಮೇಲ್ಜಾತಿಯ ಪುರುಷರನ್ನು ಸುಖಾಸುಮ್ಮನೆ ಆರೋಪಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.” ಆಹುತಿಯ ಅಣ್ಣ ಹೀಗೆಂದು ಹೇಳಿದರು. “ಸೀಮಾ ಕುಶ್ವಾಹಾ ಅವರು ನಮ್ಮ ಪರವಾಗಿ ವಾದ ಮಾಡುವುದು ಅವರಿಗೆ ಇಷ್ಟವಿಲ್ಲ. ಹಾಗಾಗಿ ಅವರು ಬೆದರಿಕೆಗಳನ್ನು ಹಾಕುತ್ತಿದ್ದಾರೆ.”
ಈಗೀಗ ನ್ಯಾಯಾಲಯದ ಕಾರ್ಯಾಲಾಪಗಳು ಕುಟುಂಬಕ್ಕೆ ನೊವುದಾಯಕವಾಗುತ್ತಿದೆ.
“ಕಾರ್ಯಾಲಾಪದ ದಿನಗಳಂದು ನನಗೆ ಏನನ್ನೂ ತಿನ್ನಲಾಗುವುದಿಲ್ಲ. ಕಾರ್ಯಾಲಾಪಗಳು ನನನ್ನು ಅಸ್ವಸ್ಥಗೊಳಿಸುತ್ತದೆ.” ಎಂದರು. “ನಾನು ಆರೋಪಿಗಳನ್ನು ನೋಡದೇ ಇರುವುದಕ್ಕೆ ಪ್ರಯತ್ನಿಸುತ್ತೇನೆ. ಆದರೆ ಅವರ ಇರುವಿಕೆ ನನಗೆ ತಲೆ ತಿರುಗುವಂತೆ ಮಾಡುತ್ತದೆ. ಪ್ರಶ್ನಾವಳಿಯ ಸಂದರ್ಭದಲ್ಲಿ ಗಂಟೆಗಟ್ಟಲೆ ನಿಲ್ಲುವುದು ನನಗೆ ವಾಕಾರಿಕೆ ತರಿಸುತ್ತದೆ.”
“ನನ್ನ ಮಕ್ಕಳು ನಿದ್ರಿಸುವುದಕ್ಕೂ ಒದ್ದಾಡುತ್ತಾರೆ. ಪ್ರತೀದಿನ ಅದೇ ಪ್ರಶ್ನೆಗಳನ್ನು ಕೇಳಲಾಗುತ್ತದೆ,” ಎಂದು ಅವರ ತಾಯಿ ಹೇಳುತ್ತಾರೆ. “ಹಿರಿಯವನು ನಿದ್ರೆಯಲ್ಲಿಯೇ ನ್ಯಾಯಾಲಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಕೂಗುತ್ತಿರುತ್ತಾನೆ.”
ಬಲವಂತವಾಗಿ ಅಂತ್ಯಸಂಸ್ಕಾರ ನಡೆಸಿದರ ಕುರಿತಾದ ಪ್ರಕರಣವು ಅಲ್ಲಾಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೌ ಬೆಂಚಿನ ಮುಂದೆ ನಡೆಯುತ್ತಿದೆ. ಈ ಬೆಂಚ್ ಗೆ ಕುಟುಂಬ ಮತ್ತು ಅದರ ವಕೀಲರು ತಮ್ಮ ಮೇಲೆ ಎಸಗುತ್ತಿರುವ ‘ಕಿರುಕುಳ’ದ ವಿರುದ್ಧ ಮನವಿ ಸಲ್ಲಿಸಿದ್ದಾರೆ. CRPF ಮತ್ತು ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿರುವ ವರದಿಯ ಮೇರೆಗೆ ನ್ಯಾಯಾಲಯವು ಪ್ರಕರಣವನ್ನು ಹತ್ರಾಸ್ ನಿಂದ ಆಚೆಗೆ ವರ್ಗಾಯಿಸುವುದಕ್ಕೆ ಅಥವಾ ತಡೆಯಾಜ್ಞೆ ನೀಡುವುದಕ್ಕೆ ನಿರಾಕರಿಸಿದೆ.
“ವರದಿಗಳನ್ನು ಮುದ್ರಿತ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡಲಾಗಿತ್ತು. ಅದರಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ. ಆದರೆ ನನಗೆ ದೊರಕಿರುವ ಮಾಹಿತಿಯ ಪ್ರಕಾರ ಜಿಲ್ಲಾ ನ್ಯಾಯಾಧೀಶರು ನಾವು ಬೆದರಿಕೆಗೆ ಒಳಗಾಗಿದ್ದೇವೆ ಎಂಬುದನ್ನು ನಿರಾಕರಿಸಿ ಆ ಘಟನೆ ವಕೀಲರ ನಡುವಿನ ಮೌಖಿಕ ಕಿತ್ತಾಟ ಮಾತ್ರವಾಗಿದೆ ಎಂದಿದ್ದಾರೆ” ಎಂದು ಕುಶ್ವಾಹಾ ಹೇಳಿದರು. ಆ ವಕೀಲರ ಗ್ಯಾಂಗ್ ಗೆ ಸ್ವತಃ ನ್ಯಾಯಾಧೀಶರೇ ಹೆದರಿದ್ದಾರೆ ಎಂದೂ ಹೇಳಿದರು.
ಬೆದರಿಕೆಗಳು ಇನ್ನೂ ಮುಂದುವರೆಯುತ್ತಿರುವುದರಿಂದ ಈ ಕುರಿತು ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಾಗಿ ಕುಶ್ವಾಹಾ ಹಂಚಿಕೊಂಡಿದ್ದಾರೆ.
(ಈ ಲೇಖನ ಮುಂದುವರಿಯುತ್ತದೆ.)