ಕರ್ನಾಟಕದ ಕಾಂಗ್ರೆಸ್ ಪಕ್ಷ ಗ್ಯಾರೆಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಎಷ್ಟೋ ರಾಜ್ಯಗಳಲ್ಲಿ ಈಗ ಹಲವು ರಾಜಕೀಯ ಪಕ್ಷಗಳು ಇದೇ ಮಾದರಿಯ ಸ್ಕೀಮ್ ಗಳ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.
ಅದರಂತೆ ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ 2025 ರ ಫೆಬ್ರವರಿಯಲ್ಲಿ ನಡೆಯಲಿದ್ದು AAP ಪಕ್ಷ ಈಗಾಗಲೇ ಮತದಾರರ ಬೇಟೆ ಶುರುಮಾಡಿದೆ. ಮತದಾರರನ್ನು ಆಪ್ ತನ್ನತ್ತ ಸೆಳೆಯಲು ಆಪ್ ಭರ್ಜರಿ ಘೋಷಣೆಗಳನ್ನು ಮಾಡಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಅರವಿಂದ್ ಕೇಜ್ರವಾಲ್ ಆಟೋ ಚಾಲಕರಿಗೆ ₹10 ಲಕ್ಷದ ಜೀವ ವಿಮೆ ಘೋಷಿಸಿದ್ದಾರೆ, ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ ಹಣ ಸೇರಿದಂತೆ ವಿವಿಧ 5 ಸ್ಕೀಮ್ ಗಳನ್ನು ಘೋಷಣೆ ಮಾಡಿದೆ.
ಈ ಹಿಂದಿನ ಚುನಾವಣೆಯಲ್ಲಿ ದೆಹಲಿಯ 70 ಸ್ಥಾನಗಳ ಪೈಕಿ ಆಪ್ 62 ರಲ್ಲಿ ಗೆದ್ದಿತ್ತು.