ಶುಕ್ರವಾರ ಅಂದ್ರೆ ಹೆಣ್ಣು ದೇವರ ದೇವಸ್ಥಾನದಲ್ಲಿ ಜನ ಕಿಕ್ಕಿರಿದು ಸೇರಿರುತ್ತಾರೆ. ಅದರಲ್ಲೂ ಹಾಸನದ ಹಾಸನಾಂಬ ದೇವಾಲಯ ತೆರೆದಿರುದರಿಂದ ತುಂಬಾ ಜನ ಸೇರಿಸಿದ್ದು, ಇದರ ನಡುವೆ ಕರೆಂಟ್ ಶಾಕ್ ವದಂತಿಯಿಂದ ದಿಢೀರ್ ನೂಕು ನುಗ್ಗಲು ಉಂಟಾಗಿ, ಧರ್ಮ ದರ್ಶನದ ಸರತಿ ಸಾಲಿನ ನಿಂತಿದ್ದ ಮಹಿಳೆಯರು ಭಯದಿಂದ ಓಡಿದ್ದಾರೆ. ಇದರಿಂದ ಹತ್ತಾರು ಮಂದಿಗೆ ಗಾಯಗಳಾಗಿದ್ದು ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ದೇವಾಲಯದ ಹೊರಭಾಗದ ಸರತಿ ಸಾಲಿನಲ್ಲಿ ನೂಕುನುಗ್ಗಲು ಉಂಟಾಗಿ ವಿದ್ಯುತ್ ಸ್ಪರ್ಶವಾಗಿ ಇಬ್ಬರಿಗೆ ತೀವ್ರವಾಗಿ ಗಾಯವಾಗಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಸಾಲಿನಲ್ಲಿ ನಿಂತಿದ್ದವರಲ್ಲಿ ಕೆಲವರಿಗೆ ಕರೆಂಟ್ ಶಾಕ್ ಹೊಡೆದು ಕುಸಿದು ಬಿದ್ದಿದ್ದಾರೆ. ಇದು ತಿಳಿದ ಕೆಲವರು ಗಾಬರಿಯಿಂದ ಓಡಾಡಿದ್ದರಿಂದ ನೂಕು ನುಗ್ಗಲು ಉಂಟಾಗಿದ್ದು ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಯಾವುದೇ ಪ್ರಾಣಪಾಯ ಆಗಿಲ್ಲ ಎಂದು ತಿಳಿದುಬಂದಿದೆ.










