ತಮಿಳುನಾಡಿನಲ್ಲಿ ಟೋನೀಜ್ ಫಿಟ್ನೆಸ್ ಸೆಂಟರ್ ಎಂಬ ಜಿಮ್ ನಡೆಸುತ್ತಿರುವ ಮತ್ತು ಮಿಸ್ಟರ್ ವರ್ಲ್ಡ್ ಫಿಟ್ನೆಸ್ ಪ್ರಶಸ್ತಿ ಪುರಸೃತ ಆರ್ ಮಣಿಕಂದನ್ ಅನ್ನು ಪೋಲಿಸ್ ಬಂಧಿಸಿದ್ದಾರೆ. ಸಂಡಿಯಾ ಎಂಬ ಮಹಿಳೆ ನೀಡಿರುವ ದೂರಿನ ಆಧಾರದಲ್ಲಿ ಈತನನ್ನು ಪೊಲೀಸರು ಬಂಧಿಸಿ, ಈತನಲ್ಲಿರುವ ಐಪೋನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಈತನ ಹೆಸರು ಬಹುತೇಕ ಜನರಿಗೆ ತಿಳಿದಿದೆ. ಯಾಕೆಂದರೆ, ಈತ ಎರಡು ಬಾರಿ ಮಿಸ್ಟರ್ ವರ್ಲ್ಡ್ ಫಿಟ್ನೆಸ್ ಪ್ರಶಸ್ತಿ ಮತ್ತು ನಾಲ್ಕು ಬಾರಿ ಮಿಸ್ಟರ್ ತಮಿಳುನಾಡು ಪ್ರಶಸ್ತಿ ಪಡೆದುಕೊಂಡಿದ್ದಾನೆ. ಸಾಕಷ್ಟು ಮಾಧ್ಯಮಗಳಲ್ಲಿ ಈತನ ಹೆಸರು ರಾರಾಜಿಸುವ ದಿನಗಳಿದ್ದವು.ಆದರೆ ಇದೀಗ ಈತ ಪೊಲೀಸರ ಅತಿಥಿಯಾಗಿದ್ಧಾನೆ.
ಸಂಡಿಯಾ ದೂರಿನಲ್ಲಿ ಏನೇನಿದೆ?
ಪಾಲವಕ್ಕಂನ ಸಂಡಿಯಾ ಎಂಬ 31 ವರ್ಷದ ಸಂತ್ರಸ್ತ ಮಹಿಳೆ 2019 ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ಮಣಿಕಂದನ್ ಅವರನ್ನು ಭೇಟಿಯಾಗಿದ್ದರು. ಇಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಯಾಗಿ ಬದಲಾಗಿ, ಇಬ್ಬರೂ ಪ್ರೇಮಿಸತೊಡಗಿದ್ದರು. ಅನಂತರ, ಮಣಿಕಂದನ್ ಆಕೆಯ ಇಚ್ಛೆಗೆ ವಿರುದ್ಧವಾಗಿ ತಮ್ಮ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿರುವ ವಿಚಾರ ಈಕೆಗೆ ತಿಳಿಯುತ್ತದೆ. ಈ ವೇಳೆಗಾಗಲೇ ಇಬ್ಬರ ನಡುವೆ ಸಂಬಂಧ ಹದಗೆಟ್ಟಿರುತ್ತದೆ. ಆತನ ಫೋನ್ನಲ್ಲಿ ಅವನು ಇತರ ಮಹಿಳೆಯರೊಂದಿಗಿನ ವೀಡಿಯೊಗಳು ಇದ್ದವು ಎಂದು ಸಂಡಿಯಾಳಿಗೆ ತಿಳಿದು ಬಂದಿರುತ್ತದೆ.
ಆಕೆ ಆತನನ್ನು ಪ್ರಶ್ನಿಸಿದಾಗ ಮಣಿಕಂದನ್ ಬೆದರಿಸಿ ದೈಹಿಕವಾಗಿ ಹಿಂಸೆ ನೀಡಿದ್ದಾನೆ. ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮೂಲಕ ದೂರು!
ತನಗಾಗುತ್ತಿರುವ ನೋವುಗಳ ಬಗ್ಗೆ ಇದುವರೆಗೆ ಮೌನವಾಗಿದ್ದ ಸಂಡಿಯಾ, ಕಳೆದ ಶನಿವಾರದಂದು ಮಣಿಕಂದನ್ ಬಗ್ಗೆ ಪೋಸ್ಟ್ ಒಂದನ್ನು ಬರೆದು ಪೋಸ್ಟ್ ಮಾಡಿದ್ದು, ಒಮ್ಮೆ ನನ್ನ ಮುಖದ ಮೇಲೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆಕೆ ಆನ್ಲೈನ್ನಲ್ಲಿ ನೀಡಿದ ದೂರಿನ ಆಧಾರದ ಮೇಲೆ ಪೂನಮಲ್ಲಿ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇದೀಗ ಮಣಿಕಂದನ್ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿಯೇ ಹೆಚ್ಚು ಪ್ರಕರಣಗಳು!
ಲಾಕ್ಡೌನ್ ಅವಧಿಯಲ್ಲಿ ದೇಶಸದ್ಯಾಂತ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷದ ಎಂಟು ತಿಂಗಳ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಶೇ 46 ರಷ್ಟು ಹೆಚ್ಚಾಗಿದೆ. ಇವುಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳು ಉತ್ತರ ಪ್ರದೇಶ ರಾಜ್ಯದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.
ಏರಿಕೆಯಾಗುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು!
ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುವುದರಿಂದ ಹೆಚ್ಚೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಮಹಿಳಾ ಆಯೋಗದ ಹೇಳುತ್ತದೆ.
ಕಳೆದ 2020 ರಲ್ಲಿಯೇ 13618 ದೂರುಗಳು ಬೆಳಕಿಗೆ ಬಂದಿದ್ದು, ಈ ವರ್ಷದ ಜನವರಿಯಿಂದ ಆಗಸ್ಟ್ ವರೆಗೆ 19953 ದೂರುಗಳು ದಾಖಲಾಗಿದೆ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಸಂಖ್ಯೆಯಲ್ಲಿ ಹೆಚ್ಚಿನ ಮಟ್ಟದ ಏರಿಕೆ ಕಂಡುಬಂದಿದೆ.
https://www.instagram.com/p/CWfZUfXloS1/?utm_source=ig_web_button_native_share