ಪ್ರತಿ ದಿನ ನಾವು ವಿವಿಧ ರೀತಿಯ ಆಹಾರವನ್ನು ಸೇವಿಸುತ್ತ ಇರ್ತಿವಿ.ಅದರಲ್ಲೂ ಊಟ ತಿಂಡಿಯ ಸಮಯದಲ್ಲಿ ಬಗೆಬಗೆಯ ಪದಾರ್ಥಗಳನ್ನು ತಿನ್ನುತ್ತೀವಿ..ಹಾಗೂ ಕೊಬ್ಬಿನಾಂಶ,ಜಂಕ್ ಫುಡ್ ಎಣ್ಣೆಯಲ್ಲಿ ಕರಿದ ತಿಂಡಿಗಳು ಅಬ್ಬಬ್ಬ..ಇವೆಲ್ಲವು ನಮ್ಮ ಆರೋಗ್ಯದ ಮೇಲೆ ನೆಗೆಟಿವ್ ಆಗಿ ಪರಿಣಾಮವನ್ನು ಬೀರುತ್ತದೆ..ಕಲವು ಬಾರಿ ನಮ್ಮ ರಕ್ತನಾಳದೊಳಗೆ ಸೇರಿಕೊಂಡು ದೇಹದ ಪ್ರತಿ ಭಾಗಕ್ಕು ತೊಂದರೆ ನೀಡುತ್ತದೆ..

ಕರುಳಿನ ಆರೋಗ್ಯವು ಕರುಳಿನ ಸೂಕ್ಷ್ಮಜೀವಿಯ ಸಮತೋಲನ ಮತ್ತು ಕಾರ್ಯವನ್ನು ಸೂಚಿಸುತ್ತದೆ, ಮುಖ್ಯವಾಗಿ ಗಟ್ ಹೆಲ್ತ್ ಜೀರ್ಣಕ್ರಿಯೆ ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.ಪ್ರತಿರಕ್ಷಣಾ ವ್ಯವಸ್ಥೆಯ ಕೆಲಸವನ್ನು ಹೆಚ್ಚಿಸುತ್ತದೆ.ಜೀವಸತ್ವಗಳು ಮತ್ತು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.ಮಾನಸಿಕ ಆರೋಗ್ಯ ಮತ್ತು ಮನಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ.ಹಾಗಾಗಿ ಕರುಳಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತದ್ದು ತುಂಬಾನೆ ಮುಖ್ಯ.ಹಾಗೂ ಈ ಪಾರದಾರ್ಥಗಳನ್ನು ಸೇವಿಸಿ.

ಹಣ್ಣು ಮತ್ತು ತರಕಾರಿ
ಪಾಲಕ್, ಕೇಲ್, ಕೊಲಾರ್ಡ್ ಗ್ರೀನ್ಸ್ ಇವುಗಳನ್ನು ಸೇವಿಸುವುದು ಉತ್ತಮ ಹಾಗೂ ಬೆರಿಹಣ್ಣುಗಳು ರಾಸ್ಬೆರಿ, ಸ್ಟ್ರಾಬೆರಿಗಳು,ಬ್ಲಾಕ್ ಬರ್ರಿ,ಬ್ಲೂ ಬರ್ರಿ ಸೇವಿಸುವುದು ಉತ್ತಮ.ದ್ವಿದಳ ಧಾನ್ಯಗಳು ಒಳ್ಳೆಯದು

ಹೈಡ್ರೇಟೆಡ್ ಆಗಿರಿ
ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ಅಷ್ಟು ನೀರನ್ನು ಕುಡಿಯುವುದು ಕೂಡ ಒಳ್ಳೆಯದು.ಇದರಿಂದ ಕರುಳಿನ ಆರೋಗ್ಯ ಹಾಗೂ ಜೀರ್ಣಕ್ರಿಯ ಉತ್ತಮವಾಗಿರುತ್ತದೆ.ಅದರಲ್ಲೂ ಬೆಚ್ಚಗಿನ ನೀರನ್ನು ಕುಡಿಯಿರಿ.

ಎಕ್ಸರ್ಸೈಸ್
ದೇಹವನ್ನು ಆರೋಗ್ಯವಾಗಿಡಲು ವ್ಯಾಯಮ ತುಂಬಾನೆ ಮುಖ್ಯ..ಹಾಗೂ ಕರುಳಿನ ಚಲನಶೀಲತೆ ಮತ್ತು ರಕ್ತದ ಹರಿವನ್ನು ಸುಧಾರಿಸಲು ನಿಯಮಿತವಾಗಿ ವ್ಯಾಯಾಮ ಮಾಡಿ.ಅದ್ರಲ್ಲೂ ಆಳವಾದ ಉಸಿರಾಟ ಅಥವಾ ಯೋಗವನ್ನು ಮಾಡುವುದರಿಂದ ಒತ್ತಡವನ್ನು ನಿರ್ವಹಿಸಬಹುದು

ಸಕ್ಕರೆ
ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು
ಸಂಸ್ಕರಿಸಿದ ಆಹಾರ,ಎಣ್ಣೆಯಲ್ಲಿ ಕರೆದ ಪದಾರ್ಥವನ್ನು ಸೇವಿಸಬೇಡಿ ಮತ್ತು ಹೆಚ್ಚಿನ ಸಕ್ಕರೆ ಆಹಾರಗಳನ್ನು ಮಿತಿಗೊಳಿಸಿ, ಇದು ಕರುಳಿನ ಸಮತೋಲನವನ್ನು ಅಡ್ಡಿಪಡಿಸುತ್ತದೆ.