• Home
  • About Us
  • ಕರ್ನಾಟಕ
Monday, November 3, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

GST ಬಾಕಿ ಉಳಿಸಿಕೊಂಡ ಕೇಂದ್ರ; ಸ್ಥಗಿತವಾದ ದಕ್ಷಿಣ ರಾಜ್ಯಗಳ ಅಭಿವೃದ್ಧಿ ಇಂಜಿನ್

by
April 13, 2020
in ದೇಶ
0
GST ಬಾಕಿ ಉಳಿಸಿಕೊಂಡ ಕೇಂದ್ರ; ಸ್ಥಗಿತವಾದ ದಕ್ಷಿಣ ರಾಜ್ಯಗಳ ಅಭಿವೃದ್ಧಿ ಇಂಜಿನ್
Share on WhatsAppShare on FacebookShare on Telegram

ವಿಶ್ವದಾದ್ಯಂತ ಸುಮಾರು 1,10,000 ಕ್ಕೂ ಅಧಿಕ ಜೀವಗಳನ್ನು ಬಲಿ ಪಡೆದಿರುವ ಕರೋನಾ ಭಾರತದಲ್ಲೂ ಸುಮಾರು ೨೦೦ಕ್ಕೂ ಹೆಚ್ಚು ಬಲಿ ಪಡೆದಿದೆ. ವಿಶ್ವದಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆಯನ್ನು ಹೊಂದಿರುವ ಅಮೆರಿಕದಿಂದಲೇ ಕರೋನಾ ಸಮಸ್ಯೆಯನ್ನು ಎದುರಿಸಲು ಸಾಧ್ಯವಾಗಿಲ್ಲ ಎಂದರೆ ನಾವು ಪರಿಸ್ಥಿತಿಯನ್ನು ಊಹಿಸಬಹುದು.

ADVERTISEMENT

ನೆನಪಿರಲಿ ಅಮೆರಿಕದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 1,783 ಕರೋನಾ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 20 ಸಾವಿರಕ್ಕೂ ಅಧಿಕವಾಗಿದೆ. ಅಮೆರಿಕದಲ್ಲೇ ಕರೋನಾ ಪ್ರಭಾವ ಸಾವಿನ ಪ್ರಮಾಣ ಹೀಗಿದ್ದರೆ, ಇನ್ನೂ ಅಷ್ಟಾಗಿ ಉತ್ತಮ ವೈದ್ಯಕೀಯ ವ್ಯವಸ್ಥೆ ಇಲ್ಲದ 130 ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಕಥೆ ಏನಾಗಬೇಡ? ಇದೇ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು.

ಅಸಲಿಗೆ ಲಾಕ್‌ಡೌನ್‌ ಘೋಷಿಸಿದರೆ ಸಾಕೆ? ಖಂಡಿತ ಸಾಲದು..! ಏಕೆಂದರೆ ಲಾಕ್‌ಡೌನ್‌ನಿಂದಾಗಿ ಎಲ್ಲಾ ರಾಜ್ಯಗಳ ತೆರಿಗೆ ರೂಪದ ಆದಾಯ ಸಂಪೂರ್ಣವಾಗಿ ಸ್ಥಗಿತವಾಗಿದೆ. ಮತ್ತೊಂದೆಡೆ ಕರೋನಾ ವಿರುದ್ಧ ಎಲ್ಲಾ ರಾಜ್ಯಗಳು ಹೋರಾಟ ನಡೆಸಲು ಅಪಾರ ಪ್ರಮಾಣದ ಹಣದ ಅವಶ್ಯಕತೆಯೂ ಇದೆ. ಆದರೆ, ಕೇಂದ್ರ ಸರಕಾರ ಈವರೆಗೆ ರಾಜ್ಯಗಳಿಗೆ ನೀಡಬೇಕಾದ ಜಿಎಸ್‌ಟಿ ಪಾಲನ್ನೂ ನೀಡದ ಪರಿಣಾಮ ದಕ್ಷಿಣ ರಾಜ್ಯಗಳ ಆರ್ಥಿಕ ಇಂಜಿನ್ ಸಂಪೂರ್ಣವಾಗಿ ಕುಸಿದಿದೆ ಎನ್ನಲಾಗುತ್ತಿದೆ.

ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಅನುಷ್ಠಾನದ ನಂತರ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳೂ ಗಂಭೀರ ಆದಾಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಈ ನಡುವೆ ಕರೋನಾ ಹಠಾತ್ ದಾಳಿ ಮತ್ತು ಏಕಾಏಕಿ ಲಾಕ್ಡೌನ್ ನಿರ್ಧಾರ ದಕ್ಷಿಣ ರಾಜ್ಯಗಳ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.

ಪರಿಣಾಮ ದಕ್ಷಿಣದ ಎಲ್ಲಾ ಐದು ರಾಜ್ಯಗಳು ಸೀಮಿತ ಸಂಪನ್ಮೂಲಗಳೊಂದಿಗೆ ಕರೋನಾ ವಿರುದ್ಧ ಹೋರಾಡುತ್ತಿವೆ. ಕೇಂದ್ರವು ಕಳೆದ ವಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (SDARF) ಅಲ್ಪ ಪ್ರಮಾಣದ ಹಣವನ್ನು ಬಿಡುಗಡೆ ಮಾಡಿದ್ದು, ಎಲ್ಲರಿಗೂ ಕರೋನಾ ಸಂಬಂಧಿತ ವೆಚ್ಚಗಳಿಗೆ ಇದನ್ನು ಬಳಸುವಂತೆ ಕೇಳಿಕೊಂಡಿದೆ. ಆದರೆ, ಆರ್ಥಿಕವಾಗಿ ಕುಸಿದಿರುವ ದಕ್ಷಿಣದ ರಾಜ್ಯಗಳು ಇಷ್ಟು ಚಿಕ್ಕ ಪ್ರಮಾಣದ ಹಣದಿಂದ ಕರೋನಾವನ್ನು ಎದುರಿಸುವುದು ಸಾಧ್ಯವಿಲ್ಲ. ಹೀಗಾಗಿ ಹಣಕ್ಕಾಗಿ ಪರದಾಡುತ್ತಿರುವ ಈ ರಾಜ್ಯಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಜಿಎಸ್ಟಿ ಪಾಲನ್ನೂ ಕೇಂದ್ರ ನೀಡದ ಕಾರಣ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎನ್ನಲಾಗುತ್ತಿದೆ.

ಮಾರಣಾಂತಿಕ ಕರೋನಾ ವೈರಸ್ ಸಾಮೂದಾಯಿಕವಾಗಿ ಇನ್ನೂ ಹರಡಿಲ್ಲದ ಪಕ್ಷದಲ್ಲಿ ಇದರ ವಿರುದ್ಧ ಹೋರಾಟ ನಡೆಸಲು ಪ್ರತಿ ರಾಜ್ಯಕ್ಕೂ ಕನಿಷ್ಠ 10,000 ಕೋಟಿ ರೂ ಹಣ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ನಡುವೆ ದಕ್ಷಿಣದ ರಾಜ್ಯಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಜಿಎಸ್‌ಟಿ ಪಾಲನ್ನೂ ಕೇಂದ್ರ ನೀಡದ ಕಾರಣ ಎಲ್ಲಾ ರಾಜ್ಯಗಳು ಸಂಕಷ್ಟದಲ್ಲೇ ಕರೋನಾ ಎಂಬ ಮಹಾಮಾರಿಯನ್ನು ಎದುರಿಸಬೇಕಿದೆ.

ಅಂದ ಹಾಗೆ ಕೇಂದ್ರ ಯಾವ ರಾಜ್ಯಕ್ಕೆ ಎಷ್ಟು ಜಿಎಸ್‌ಟಿ ಹಣ ಬಾಕಿ ಉಳಿಸಿಕೊಂಡಿದೆ ಗೊತ್ತಾ?

ಕರ್ನಾಟಕ: ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಜಿಎಸ್ಟಿ ಸಂಗ್ರಹದ ಪಾಲಾಗಿ ಕೇಂದ್ರ ಸರಕಾರ ಕರ್ನಾಟಕಕ್ಕೆ ಇನ್ನೂ 5,000 ಕೋಟಿ ರೂ. ಪಾವತಿ ಮಾಡಿಲ್ಲ. ಕಳೆದ ಅಕ್ಟೋಬರ್ -ಡಿಸೆಂಬರ್ ತ್ರೈಮಾಸಿಕದ ಪಾಲನ್ನೂ ಸಹ ಕೇಂದ್ರ ಸಂಪೂರ್ಣವಾಗಿ ಪಾವತಿಸಿಲ್ಲ. ಇನ್ನೂ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಹಲವಾರು ಅನುದಾನಗಳು, ಯೋಜನೆಗಳು ಲಭ್ಯವಾಗದ ಕಾರಣ ಇದು ರಾಜ್ಯದ ಆ‍ರ್ಥಿಕತೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಕರ್ನಾಟಕವು 2018 ಮತ್ತು 2019 ರಲ್ಲಿ ಸತತ ಎರಡು ಪ್ರವಾಹಗಳಿಗೆ ಸಾಕ್ಷಿಯಾಗಿದೆ. ಈ ಪ್ರವಾಹದಿಂದಾಗಿ 50,000 ಕೋಟಿಗಿಂತ ಹೆಚ್ಚು ಹಣ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಸಂದರ್ಭದಲ್ಲೂ ಸಹ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಗಮನಾರ್ಹ ಹಣ ಸಹಾಯ ನೀಡಿರಲಿಲ್ಲ. ಹೀಗಾಗಿ ಹದಗೆಡುತ್ತಿರುವ ರಾಜ್ಯದ ಆರ್ಥಿಕತೆಯ ಕುರಿತು ಆತಂಕ ವ್ಯಕ್ತಪಡಿಸಿರುವ ಹಾಗೂ ಸ್ವತಃ ಹಣಕಾಸು ಖಾತೆಯನ್ನು ಹೊಂದಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಹಣವನ್ನು ಹೊಂದಿಸಲು ಸರಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಸುಳಿವು ನೀಡಿದ್ದಾರೆ.

ಈ ನಡುವೆ ವಿವಿಧ ಯೋಜನೆಗಳ ಅಡಿಯಲ್ಲಿ ಕೇಂದ್ರ ಕರ್ನಾಟಕಕ್ಕೆ ರೂ. 20,000 ಕೋಟಿ ಬಾಕಿ ನೀಡಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೊಂಡಿದೆ.

ತಮಿಳುನಾಡು: ತಮಿಳುನಾಡಿನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವೇನಾಗಿಲ್ಲ. ಲಾಕ್ಡೌನ್ ಬೆನ್ನಿಗೆ ಅಲ್ಲಿನ ಸಿಎಂ ಎಡಪ್ಪಾಡಿ ಪಳನಿಸಾಮಿ ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಹತ್ತಾರು ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಿದ್ದಾರೆ. ಬಿಪಿಎಲ್‌ ಕಾರ್ಡ್ ಹೊಂದಿರುವ ಪ್ರತಿ ಕುಟುಂಬಗಳಿಗೆ ರೂ.1000, ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ಬೇಳೆಕಾಳುಗಳು, ಇತರೆ ರಾಜ್ಯಗಳಿಂದ ತಮಿಳುನಾಡಿಗೆ ಆಗಮಿಸಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಉಚಿತ ಪಡಿತರ ಸರಬರಾಜು, ತೃತೀಯ ಲಿಂಗಿಗಳಿಗೆ ಅಮ್ಮಾ ಕ್ಯಾಂಟೀನ್ ನಲ್ಲಿ ಕಡಿಮೆ ಬೆಲೆಗೆ ಆಹಾರ, ರಾಜ್ಯದಾದ್ಯಂತ ಮನೆಯಿಲ್ಲದವರಿಗೆ ಆಹಾರ ಒದಗಿಸಲು ವ್ಯವಸ್ಥೆ ಮಾಡುವುದು ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಘೋಷಿಸಿದೆ.

ಈ ನಡುವೆ ಲಾಕ್ಡೌನ್ನಿಂದಾಗಿ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಭೂಮಿಯಲ್ಲಿ ಎಲ್ಲಾ ಬೆಳೆಗಳ ಫಸಲು ಕೈಗೆ ಬಂದಿದ್ದು ಅದನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗದೇ ರೈತರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಪರಿಣಾಮ ತರಕಾರಿ ಹೂ ಮತ್ತು ಹಣ್ಣಗಳು ಮಣ್ಣು ಪಾಲಾಗುತ್ತಿವೆ. ಇದು ಸಹ ಸ್ವಾಭಾವಿಕವಾಗಿ ತಮಿಳುನಾಡಿನ ಆರ್ಥಿಕತೆಯ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ.

ಹೀಗಾಗಿ ಕರೋನಾ ಮಹಾಮಾರಿಯ ವಿರುದ್ಧ ಹೋರಾಡಲು ತಮಿಳುನಾಡು ಸರಕಾರ ಕೇಂದ್ರದಿಂದ ರೂ .10,000 ಕೋಟಿ ಸಹಾಯವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. ಜನ ಪ್ರತಿನಿಧಿಗಳು ಮತ್ತು ಸರಕಾರಿ ನೌಕರರ ವೇತನವನ್ನು ಕಡಿತಗೊಳಿಸುವ ಕುರಿತು ತಮಿಳುನಾಡು ಸರಕಾರ ಈವರೆಗೆ ಯಾವುದೇ ತೀರ್ಮಾ ತೆಗೆದುಕೊಂಡಿಲ್ಲ. ಈ ನಡುವೆ ಕೇಂದ್ರದಿಂದ ಇನ್ನೂ ತಮಿಳುನಾಡಿಗೆ ಪಾವತಿಯಾಗಬೇಕಿರುವ ಬಾಕಿ ಹಣ ಬರೋಬ್ಬರಿ 12,263 ಕೋಟಿ ರೂ. ಎನ್ನಲಾಗುತ್ತಿದೆ.

ತೆಲಂಗಾಣ: ಕರೋನಾ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಜನ ಪ್ರತಿನಿಧಿಗಳ ಮತ್ತು ಸರಕಾರಿ ನೌಕರರ ವೇತನವನ್ನು ಕಡಿತ ಮಾಡುವ ತೀರ್ಮಾನ ತೆಗೆದುಕೊಂಡವರ ಪೈಕಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮೊದಲಿಗರು. ಅಧಿಕಾರ ಹಂಚಿಕೆ ಅಡಿಯಲ್ಲಿ ಕೇಂದ್ರದಿಂದ ತೆಲಂಗಾಣಕ್ಕೆ ಪಾವತಿಯಾಗಬೇಕಾದ 3737 ಕೋಟಿ ರೂ. ಇನ್ನೂ ಬಾಕಿ ಇದೆ. ವಿವಿಧ ಗುತ್ತಿಗೆದಾರರಿಗೆ ಕೇಂದ್ರದಿಂದ ಬಾಕಿ ಇರುವ ಬಿಲ್ 20,000 ಕೋಟಿ ರೂಪಾಯಿ ಎನ್ನಲಾಗಿದೆ.

ಇದಲ್ಲದೆ, ತೆಲಂಗಾಣ ರಾಜ್ಯ ಸರಕಾರ ಈವರೆಗೆ ಕರೋನಾ ವಿರುದ್ಧ ಹೋರಾಡಲು 500 ಕೋಟಿ ರೂ. ರಷ್ಟು ಮಾಡಿದೆ. ಇದೇ ಉದ್ದೇಶಕ್ಕಾಗಿ ಕೇಂದ್ರ ಸರಕಾರ ತಾನು ನೀಡುವುದಾಗಿ ಘೋಷಿಸಿದ್ದ 500 ಕೋಟಿ ರೂ. ಹಣವನ್ನು ಈವರೆಗೆ ನೀಡಿಲ್ಲ. ಪ್ರಚಲಿತದಲ್ಲಿರುವ ಕೇಂದ್ರ ರೈತು ಬಂಧು ಯೋಜನೆಯ ಸುಮಾರು 2 ಸಾವಿರ ಕೋಟಿ ರೂ. ಹಾಗೂ ಕೃಷಿ ಸಾಲ ಮನ್ನಾ ಇನ್ನೂ ಬಾಕಿ ಇದೆ.

ಆಂಧ್ರಪ್ರದೇಶ: ದಕ್ಷಿಣದ 5 ರಾಜ್ಯಗಳ ಪೈಕಿ 2014ರ ರಾಜ್ಯ ವಿಭಜನೆಯ ನಂತರ ಅತ್ಯಂತ ಭೀಕರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ರಾಜ್ಯ ಎಂದರೆ ಆಂಧ್ರಪ್ರದೇಶ. ಅಧಿಕಾರ ಹಂಚಿಕೆ ಪ್ಯಾಕೇಜ್ ಅಡಿಯಲ್ಲಿ ಕೇಂದ್ರ ಸರಕಾರ ಆಂಧ್ರಪ್ರದೇಶಕ್ಕೆ ನೀಡಬೇಕಿರುವ 3,500 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ನಡುವೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆಂಧ್ರಪ್ರದೇಶ ಸರಕಾರ ತನ್ನ ಖಜಾನೆಯಿಂದಲೇ 408 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನೂ ವಿವಿಧ ಕಾಮಗಾರಿಗಳಿಗಾಗಿ ಕೇಂದ್ರದಿಂದ ಸಂದಾಯವಾಗಬೇಕಿದ್ದ 18,000 ಕೋಟಿ ರೂ. ಬಾಕಿ ಇದೆ.

ಕೇರಳ: ಉತ್ತರ ಕರ್ನಾಟಕದಂತೆಯೇ ಕೇರಳ ರಾಜ್ಯವೂ ಸಹ 2018-19ರಲ್ಲಿ ಎರಡು ವಿನಾಶಕಾರಿ ಪ್ರವಾಹಗಳಿಗೆ ಸಾಕ್ಷಿಯಾಗಿತ್ತು. ಇನ್ನೂ ದಕ್ಷಿಣದ ಇತರೆ ರಾಜ್ಯಗಳಿಗಿಂತ ಭಿನ್ನ ‍ಆರ್ಥಿಕತೆ ಹೊಂದಿರುವ ಕೇರಳದಲ್ಲಿ ಯಾವುದೇ ಪ್ರಮುಖ ಕೈಗಾರಿಕೆಗಳಿಲ್ಲ. ಹಣಕಾಸು ಇಲಾಖೆಯ ಉನ್ನತ ಮಟ್ಟದ ಮೂಲಗಳ ಪ್ರಕಾರ ಕೇರಳ ಸರಕಾರಕ್ಕೆ ಕೇಂದ್ರದಿಂದ 7,500 ಕೋಟಿ ರೂ ಸಂದಾಯವಾಗಬೇಕು .1) ಜಿಎಸ್ಟಿ ಪರಿಹಾರ 2) MGNREGA ಹಣ ಮತ್ತು 3)ಭತ್ತದ ಸಂಗ್ರಹಕ್ಕೆ ಸಲ್ಲಬೇಕಾದ ಹಣ ಈ ಮೂರರಿಂದ ಕೇರಳಕ್ಕೆ ಸಲ್ಲಬೇಕಾದ ಹಣದ ಪ್ರಮಾಣ 7500 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಜಿಎಸ್ಟಿ ಪರಿಹಾರವನ್ನು ಕೇಂದ್ರ ಸರಕಾರವೇ ನಿರ್ಧರಿಸುವುದರಿಂದ ಇದು ನಿಖರವಾಗಿಲ್ಲ. ಆದ್ದರಿಂದ ಇದನ್ನು ಕೇರಳ ಸರಕಾರದ ಅಂದಾಜು ಎಂದು ಹೇಳಲಾಗುತ್ತಿದೆ.

Tags: Central GovtCovid 19GSTKaranatakaLockdownಕರ್ನಾಟಕಕೇಂದ್ರ ಸರಕಾರಕೋವಿಡ್-19ಜಿಎಸ್‌ಟಿಲಾಕ್‌ಡೌನ್‌
Previous Post

ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ದೇಣಿಗೆಯನ್ನು CSR ಎಂದು ಪರಿಗಣಿಸಲು ಸಾಧ್ಯವಿಲ್ಲ!

Next Post

ಲಾಕ್ ಡೌನ್ ಹೊತ್ತಲ್ಲಿ ಜನರಿಗೆ ಆಸರೆಯಾದ ತುಮರಿ ಪಂಚಾಯ್ತಿ!

Related Posts

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ
ಕರ್ನಾಟಕ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

by ಪ್ರತಿಧ್ವನಿ
November 3, 2025
0

  ಮೈಸೂರು: ಬಿಹಾರ ವಿಧಾನಸಭೆ ಚುನಾವಣೆಗೆ ಅಧಿಕಾರ ವಿರೋಧಿ ಅಲೆ ಹಾಗೂ ಬಿಜೆಪಿಯ ಭ್ರಷ್ಟ ಹಾಗೂ ದುರಾಡಳಿತದ ಅಂಶಗಳು ಪ್ರಮುಖವಾಗಲಿದ್ದು, ಈ ಬಾರಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟ...

Read moreDetails

DK Shivakumar: ಟನಲ್ ರಸ್ತೆ, ‘ಎ’ ಖಾತೆ ಯೋಜನೆಗಳಿಗೆ ಕೇಂದ್ರ ಸಚಿವರ ಮೆಚ್ಚುಗೆ, ರಾಜ್ಯದ ಬೇಡಿಕೆಗಳ ಸಲ್ಲಿಕೆ: ಡಿ.ಕೆ. ಶಿವಕುಮಾರ್

October 30, 2025

Sharana Prakash Patil: ಕೌಶ್ಯಲ ತರಬೇತಿ ಕೇಂದ್ರ ಆರಂಭಿಸುವವರಿಗೆ ಅಗತ್ಯ ಭೂಮಿ ಮಂಜೂರು..!

October 30, 2025

KJ George: ಹೊಸಕೋಟೆಯ ಸೌರ ಘಟಕಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್‌ ಚಾಲನೆ

October 30, 2025

KJ George: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರಾಜ್ಯದ ಇಂಧನ ಭವಿಷ್ಯ: ಸಚಿವ ಕೆ.ಜೆ.ಜಾರ್ಜ್

October 30, 2025
Next Post
ಲಾಕ್ ಡೌನ್ ಹೊತ್ತಲ್ಲಿ ಜನರಿಗೆ ಆಸರೆಯಾದ ತುಮರಿ ಪಂಚಾಯ್ತಿ!

ಲಾಕ್ ಡೌನ್ ಹೊತ್ತಲ್ಲಿ ಜನರಿಗೆ ಆಸರೆಯಾದ ತುಮರಿ ಪಂಚಾಯ್ತಿ!

Please login to join discussion

Recent News

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು
Top Story

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

by ಪ್ರತಿಧ್ವನಿ
November 3, 2025
ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು
Top Story

ICC Women’s World Cup: ಇತಿಹಾಸ ನಿರ್ಮಿಸಿದ ಭಾರತೀಯ ಸಿಂಹಿಣಿಯರು

by ಪ್ರತಿಧ್ವನಿ
November 3, 2025
Top Story

by ಪ್ರತಿಧ್ವನಿ
November 3, 2025
Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..
Top Story

Darshan Case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ ಗ್ಯಾಂಗ್‌ಗೆ ಇಂದು ಬಿಗ್‌ ಡೇ..

by ಪ್ರತಿಧ್ವನಿ
November 3, 2025
ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .
Top Story

ಬಹು ನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರದ “AFRO ಟಪಾಂಗ” ಪ್ರಮೋಷನ್ ಸಾಂಗ್ ಬಿಡುಗಡೆ. .

by ಪ್ರತಿಧ್ವನಿ
November 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

ಗದಗ: ಹೋಟೆಲ್‌ನಲ್ಲಿ ಅಗ್ನಿ ದುರಂತ, ಲಕ್ಷಾಂತರ ರೂಪಾಯಿ ನಗದು ಸುಟ್ಟು ಕರಕಲು

November 3, 2025
ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ- ಮೈತ್ರಿಕೂಟ ಗೆಲ್ಲುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada