• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಸರ್ಕಾರದ ಕಡತ ಮೊದಲು ಮುಖ್ಯಮಂತ್ರಿಗೋ..? ಮಾಜಿ ಸಿಎಂ ಕುಮಾರಸ್ವಾಮಿಗೋ..?

ಕೃಷ್ಣ ಮಣಿ by ಕೃಷ್ಣ ಮಣಿ
July 4, 2023
in ಅಂಕಣ, ಅಭಿಮತ
0
ಕೇಂದ್ರ ಸಚಿವರಾಗಿ ಕುಮಾರಸ್ವಾಮಿ, ವಿಧಾನಸಭೆಗೆ ನಿಖಿಲ್​ ಎಂಟ್ರಿ..?

Former CM and JDS leader HD Kumarswamy addressing a press conference on the upcoming By Elections in Karnataka at JDS Office, in Bengaluru on Wednesday 13th November 2019 Pics: www.pics4news.com

Share on WhatsAppShare on FacebookShare on Telegram

ರಾಜ್ಯ ಸರ್ಕಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೂ ಮೊದಲು ಸರ್ಕಾರದ ಮುಖ್ಯಸ್ಥ ಎನಿಸಿಕೊಳ್ಳುವ ಮುಖ್ಯಮಂತ್ರಿ ಕಚೇರಿ ತಲುಪಬೇಕು ಎನ್ನುವುದು ಸರಿ. ಆದರೆ ಮುಖ್ಯಮಂತ್ರಿಯನ್ನು ತಲುಪುವ ಮುನ್ನವೇ ವಿಧಾನಸೌಧದಿಂದ ದೂರದಲ್ಲಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೈ ಸೇರಲಿದೆ ಎನ್ನುವುದು ಚರ್ಚಾ ವಿಚಾರವಾಗಿದೆ. ವಿಧಾನಸೌಧದಲ್ಲಿ ಕೆಲಸ ಮಾಡುವ ಬಹುತೇಕ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದ ಜೊತೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತಮ ಬಾಂಧವ್ಯ ಹೊಂದಿದ್ದು, ಕಡತಗಳು, ಸರ್ಕಾರದ ಅಜೆಂಡಾಗಳು ಮುಖ್ಯಮಂತ್ರಿಯನ್ನು ತಲುಪುವ ಮುನ್ನವೇ ಕುಮಾರಸ್ವಾಮಿ ಕಚೇರಿಗೆ ತಲುಪುತ್ತವೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಆರೋಪ ಮಾಡಿದರೆ ಅಲ್ಲಗಳೆಯುವುದು ಸಾಧ್ಯವಿಲ್ಲ ಅನ್ನೋದು ಕೂಡ ಚರ್ಚಾ ವಿಚಾರ.

ADVERTISEMENT

ಮುಖ್ಯಮಂತ್ರಿ ಕಚೇರಿಯಲ್ಲೇ ನಡೀತಿದೆ ವರ್ಗಾವಣೆ ದಂಧೆ..!

ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 50 ದಿನಗಳು ಕಳೆದಿವೆ. ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಳ್ಳುವುದು ಸರಿಯಷ್ಟೆ. ಆದರೆ ‘ಕಾಸಿಲ್ಲದೆ ವರ್ಗಾವಣೆಯಿಲ್ಲ’ ಎನ್ನುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಸಂಚಲನ ಮೂಡಿಸಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಗೆ ಹಣ ಪಡೆಯುತ್ತಿದೆ. ಹಣ ಕೊಡದ ಹೊರತು ಬೇಕಾದ ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಸಾಧ್ಯವಿಲ್ಲ ಎನ್ನುವುದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ. ಅದೂ ಅಲ್ಲದೆ ವರ್ಗಾವಣೆ ದಂಧೆ ನಡೆಯುತ್ತಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಎಂದಿದ್ದಾರೆ. ವರ್ಗಾವಣೆ ಮಾಡುವುದಕ್ಕೇ ಸಿಂಡಿಕೇಟ್​ಗಳ ರಚನೆ ಮಾಡಲಾಗಿದೆ. ಎಲ್ಲವೂ ಮುಖ್ಯಮಂತ್ರಿ ಮೂಗಿನ ನೇರದಲ್ಲಿ ನಡೆಯುತ್ತಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತೇವೆ ಎಂದು ಅಧಿಕಾರಕ್ಕೆ ಬಂದವರು ಈಗ ಮಾಡುತ್ತಿರೋದು ಏನು..? ಎನ್ನುವುದು ಕುಮಾರಸ್ವಾಮಿ ಪ್ರಶ್ನೆ.

ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು.. ಪರ-ವಿರೋಧ..!

ಮಾಜಿ ಸಿಎಂ ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡ್ತಾರೆ. ಯಾವುದೇ ಸಾಕ್ಷಿ ಪುರಾವೆಗಳು ಇಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆರೋಪಗಳನ್ನು ಮಾಡುತ್ತಾರೆ ಎನ್ನುವುದು ಕಾಂಗ್ರೆಸ್​​ ಪರ ಇರುವ ನಾಯಕರ ಮಾತು. ಆದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು. ಅವರು ಹೇಳುವ ಮಾತಿನಲ್ಲಿ ಸತ್ಯ ಇರುತ್ತದೆ. ಅಷ್ಟು ಮಾತ್ರವಲ್ಲದೆ, ಕುಮಾರಸ್ವಾಮಿ ವಿಧಾನಸೌಧದ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ತಲುಪುವ ಮುನ್ನವೇ ಕುಮಾರಸ್ವಾಮಿಯನ್ನು ತಲುಪಿರುತ್ತದೆ ಎನ್ನುವುದು ಬಿಜೆಪಿ ನಾಯಕರ ಮಾತು. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ನಾನು ಸುಖಾಸುಮ್ಮನೆ ಆರೋಪ ಮಾಡಲ್ಲ, ನನ್ನ ಬಳಿ ಕಾಂಗ್ರೆಸ್​ ಕೇಳ್ತಿರೋ ಎಲ್ಲಾ ದಾಖಲೆಗಳು ಇವೆ. ಆದರೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಕಾಂಗ್ರೆಸ್​ ಯಾವುದಾದರೂ ದಾಖಲೆ ಬಿಡುಗಡೆ ಮಾಡಿತ್ತಾ..? ಇಲ್ಲ ಎಂದಾದ ಮೇಲೆ ಈಗ ದಾಖಲೆ ಕೇಲ್ತಿರೋದು ಯಾಕೆ ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಕಟ್ಟಿ ಹಾಕಲು ಸಿದ್ದರಾಮಯ್ಯ ಟೀಂ ಸಿದ್ಧತೆ..!

ಕುಮಾರಸ್ವಾಮಿ ಮಾಡಿರುವ ಆರೋಪದಲ್ಲಿ ಹುರುಳಿದ್ಯಾ..? ಇಲ್ವಾ..? ಅನ್ನೋದು ಹೊರಗಿನ ಪ್ರಪಂಚಕ್ಕೆ ಗೊತ್ತಿಲ್ಲ. ಕಾಂಗ್ರೆಸ್​ ನಿರಾಕರಿಸಿದ್ರೆ, ಬಿಜೆಪಿ ಬೆಂಬಲಿಸಿದೆ. ಆದರೆ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಮಾಡುತ್ತಿರುವ ಆರೋಪಗಳು ಸರ್ಕಾರದ ಇಮೇಜ್​ಗೆ ಧಕ್ಕೆ ತರುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರಕ್ಕೆ ಬಂದು ಎರಡೇ ತಿಂಗಳಿಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿದರೆ ಮುಂದಿನ ಚುನಾವಣೆಯಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಕುಮಾರಸ್ವಾಮಿ ಮಾತಿಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಆಪ್ತ ಬಣದಲ್ಲಿರುವ ಸಚಿವ ಜಮೀರ್​ ಅಹ್ಮದ್​, ಎನ್​.ಚಲುವರಾಯಸ್ವಾಮಿ, ಬೈರತಿ ಸುರೇಶ್​ ಸೇರಿದಂತೆ ಪ್ರಮುಖರ ಮೂಲಕವೇ ತಿರುಗೇಟು ಕೊಡಿಸುವುದು. ಕುಮಾರಸ್ವಾಮಿ ಕಾಲದಲ್ಲಿ ನಡೆದಿರುವ ವರ್ಗಾವಣೆಗಳ ಬಗ್ಗೆ ಉಲ್ಲೇಖಿಸಿ, ಕುಮಾರಸ್ವಾಮಿ ಬಾಯಿ ಮುಚ್ಚಿಸುವ ಕೆಲಸವನ್ನು ನೀಡಲಾಗಿದೆ ಎನ್ನಲಾಗ್ತಿದೆ. ಅದೇನೇ ಇರಲಿ. ಸರ್ಕಾರದ ಮುಖ್ಯಸ್ಥನಿಗೆ ತಲುಪುವ ಮಾಹಿತಿ ಕುಮಾರಸ್ವಾಮಿಗೆ ಮೊದಲೇ ತಲುಪುತ್ತದೆ ಎನ್ನುವುದು ಮಾತ್ರ ಸರಿಯಲ್ಲ.

ಕೃಷ್ಣಮಣಿ

Tags: BJPCMSiddaramaiahHD KumaraswamyHDKJDSYathindra Siddaramaiah
Previous Post

ಮೈತ್ರಿ ತಂದ ಆಪತ್ತು; ಅಜಿತ್ ಪವಾರ್, 8 ಶಾಸಕರ ಅನರ್ಹತೆಗೆ ಅರ್ಜಿ ಸಲ್ಲಿಸಿದ ಎನ್‌ಸಿಪಿ

Next Post

ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು- ಭಾಗ 1

Related Posts

ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ
ಅಂಕಣ

ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ

by ಪ್ರತಿಧ್ವನಿ
May 1, 2026
0

ನಾ ದಿವಾಕರ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಗಳು ಹಾಗೂ ಜಾಗತಿಕ ಆರ್ಥಿಕತೆಯ ನಡುವೆ ಜಗತ್ತಿನಾದ್ಯಂತ ಶ್ರಮಜೀವಿಗಳ ಚಳುವಳಿಗಳು, ವಿಶೇಷವಾಗಿ ಕಾರ್ಮಿಕ ಸಂಘಗಳ (Trade Unions) ಹೋರಾಟಗಳು ಮನ್ವಂತರದ...

Read moreDetails
ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

April 30, 2026
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
Next Post
ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು- ಭಾಗ 1

ಏಕರೂಪ ನಾಗರಿಕ ಸಂಹಿತೆ- ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳು- ಭಾಗ 1

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada