ದೇಶೀಯ ಎಲ್ ಪಿಜಿ ಗ್ಯಾಸ್ ಬೆಲೆಯಲ್ಲಿ ವ್ಯತ್ಯಯದಿಂದ ನಷ್ಟ ಅನುಭವಿಸಿದ ತೈಲ ಕಂಪನಿಗಳಿಗೆ ಕೇಂದ್ರ ಸರಕಾರ ಒಂದು ಬಾರಿಯ 22 ಸಾವಿರ ಕೋಟಿ ರೂ. ಅನುದಾನ ಘೋಷಿಸಿದೆ.
2020 ಜೂನ್ ನಿಂದ 2022 ಜೂನ್ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ ಪಿಜಿ ಬೆಲೆ ಶೇ.300ರಷ್ಟು ಏರಿಕೆಯಾಗಿದೆ.
ಆದರೆ ತೈಲ ಕಂಪನಿಗಳು ಪರಿಸ್ಥಿತಿ ಗಮನಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾದ ಪ್ರಮಾಣದಲ್ಲಿ ಎಲ್ ಪಿಜಿ ದರ ಏರಿಕೆ ಮಾಡದೇ ಗ್ರಾಹಕರ ಮೇಲೆ ಹಾಕಿರಲಿಲ್ಲ. ತೈಲ ಕಂಪನಿಗಳು ಕೇವಲ ಶೇ.72ರಷ್ಟು ಮಾತ್ರ ದರ ಏರಿಕೆ ಮಾಡಿದ್ದವು.
ಗ್ರಾಹಕರ ಹಿತದೃಷ್ಟಿಯಿಂದ ದರ ಏರಿಕೆ ಮಾಡದ ಹಿನ್ನೆಲೆಯಲ್ಲಿ ತೈಲ ಕಂಪನಿಗಳು ಅನುಭವಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಒಂದು ಬಾರಿಯ ನಷ್ಟ ಭರ್ತಿಗೆ 22 ಸಾವಿರ ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಿದೆ.