ಪ್ರತಿಯೊಬ್ಬರಿಗೂ ಪಡಿತರ, ಮೃತರ ಕುಟುಂಬಕ್ಕೆ ಪರಿಹಾರ- ಜನಾಗ್ರಹ ಆಂದೋಲನ ಒತ್ತಾಯ

ಕರೋನಾ ಸಂದರ್ಭದಲ್ಲಿ ಪಂಚಕ್ರಮಗಳು ಯುದ್ಧೋಪಾದಿಯಲ್ಲಿ ಜಾರಿಯಾಗಲಿ ಎಂದು ಜನಾಗ್ರಹ ಆಂದೋಲನ ಒತ್ತಾಯಿಸಿದೆ. ಸೋಂಕಿತ ಪ್ರತಿಯೊಬ್ಬ ವ್ಯಕ್ತಿಗೂ ಬೆಡ್, ಆಕ್ಸಿಜನ್, ವ್ಯಾಕ್ಸಿನ್, ಪಡಿತರ, ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿದೆ.

ಆನ್ ಲೈನ್ ಪತ್ರಿಕಾಗೋಷ್ಠಿ ನಡೆಸಿದ ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಸಾಮಾಜಿಕ ಚಿಂತಕ ಸಸಿಕಾಂತ್ ಸೆಂಥಿಲ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಹಲವು ಪ್ರಮುಖರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಸಿಕಾಂತ್ ಸೆಂಥಿಲ್ ಅವರು ಮಾತನಾಡಿ ಇದು ರಾಜಕೀಯ ಮಾಡುವ ಕಾಲ ಅಲ್ಲ. ಅನಗತ್ಯ ಕೆಲಸಗಳಿಗೆ ಹಣ ಖರ್ಚು ಮಾಡುವ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಬೆಡ್ ಸಿಗಬೇಕು. ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ಸಿಗಬೇಕು. ಆಕ್ಸಿಜನ್ ಕೊರತೆ ಆಗಬಾರದು, ಪ್ರತಿಯೊಬ್ಬರಿಗೂ ಸಮಗ್ರ ಪಡಿತರ ಕಿಟ್ ದೊರೆಯಬೇಕು. ದಿನಗೂಲಿಗಳು ಹಾಗೂ ಶ್ರಮಿಕರಿಗೆ ತಲಾ 5 ಸಾವಿರ ರೂ. ಆರ್ಥಿಕ ನೆರವನ್ನು ನೀಡಬೇಕು. ಕುಟಂಬದ ಆಧಾರ ಸ್ಥಂಭವಾಗಿದ್ದ ವ್ಯಕ್ತಿಯು ಕರೋನಾದಿಂದ ಮೖತಪಟ್ಟರೆ ಅವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಜನರನ್ನು ಭಯದಿಂದ ಮುಕ್ತಗೊಳಿಸಿ, ಸ್ಥಳೀಯ ಮಟ್ಟದಲ್ಲಿ ಅವರೊಂದಿಗೆ ಕೈಜೋಡಿಸಬೇಕು. ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಕೋಮುಗಲಭೆ ಸೖಷ್ಟಿಸುವ ಪ್ರಯತ್ನ ಮಾಡಬಾರದು ಎಂದ ಸಸಿಕಾಂತ್ ಸೆಂಥಿಲ್ ಸೆಂಟ್ರಲ್ ವಿಸ್ತ ಯೋಜನೆ ಈ ಸಂದರ್ಭದಲ್ಲಿ ಅನಗತ್ಯ. ಅದಕ್ಕಾಗಿ ವಿನಿಯೋಗಿಸುತ್ತಿರುವ 20 ಸಾವಿರ ಕೋಟಿ ಹಣವನ್ನು ಜನರಿಗಾಗಿ ಬಳಸಬೇಕು ಎಂದು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಸಾಣೇಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಅವರು ಮಾತನಾಡಿ ಮಾನವ ಅದ್ಭತ ಶಕ್ತಿ ಸಾಮರ್ಥಗಳೊಂದಿಗೆ ಅಹಂಕಾರ, ಸ್ವಾರ್ಥ ಮುಕ್ತನಾಗಬೇಕು. ಆಳುವ ನೇತಾರರು, ರಾಜರಂತೆ ವರ್ತಿಸುವ ಅಗತ್ಯವಿಲ್ಲ ಎಂದಿದ್ದಾರೆ. ನಮ್ಮ ಮಠವು ಕರೋನಾ ಪೀಡತರ ನೆರವಿಗೆ ನಿಂತಿದೆ. ಬೇರೆ ಮಠಗಳ ಬಗ್ಗೆ ಮಾತನಾಡುವುದು ಸೂಕ್ತ ಅಲ್ಲ ಎಂದಿದ್ದಾರೆ. ಕರೋನಾ ಸೋಂಕಿನಿಂದ ಅಗಲಿದ ವ್ಯಕ್ತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸೋಣ. ನಾಳೆ ಗುರುವಾರ ಸಂಜೆ 7 ಗಂಟೆಗೆ ಎಲ್ಲರೂ ತಾವಿದ್ಧ ಸ್ತಳದಲ್ಲಿ ಇದನ್ನು ನೆರವೇರಿಸೋಣ ಎಂದು ಈ ವೇಳೆ ಕೇಳಿಕೊಂಡರು.

ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿರುವ ಜನರ ಹಣವನ್ನು ಈ ಸಂದರ್ಭದಲ್ಲಾದರೂ ಜನರಿಗಾಗಿ ಬಳಸಬೇಕು ಎಂದು ಮಾಜಿ ಸಚಿವೆ ಲಲಿತಾ ನಾಯಕ್ ಅವರು ಹೇಳಿದ್ದಾರೆ. ಮಾವಳ್ಳಿ ಶಂಕರ್ ಅವರು, ಸರ್ಕಾರಗಳು ಪಂಚೇದ್ರಿಯಗಳ ಸಂವೇದನೆ ಕಳೆದುಕೊಂಡಿವೆ. ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ಸರಿ ಅಲ್ಲ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಡಿಯೋ ಸಂದೇಶದ ಮೂಲಕ ಜನಾಗ್ರಹ ಆಂದೋಲನದ ಬೇಡಿಕೆಗೆ ಬೆಂಬಲಿಸಿದ್ದಾರೆ. ಬೆಂಬಲ ವ್ಯಕ್ತಪಡಿಸಿದರು.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...