ಬೀಜಿಂಗ್ :ಏ.13: ದಕ್ಷಿಣ ಚೀನಾ ಸಮುದ್ರದಲ್ಲಿ ಉಗ್ವಿಗ್ನತೆಯ ನಡುವೆ ಸೈನಿಕರ ತರಬೇತಿ ಮತ್ತು ಯುದ್ಧದ ಸಿದ್ಧತೆಯ ಅಗತ್ಯವಿದೆ ಎಂದು ಜಿನ್ ಪಿಂಗ್ ಪುರರುಚ್ಚರಿಸಿದ್ದಾರೆ. ಇದರ ನಡುವೆ ಕೆಲ ದಿನಗಳ ಹಿಂದೆ ಚೀನಾ ಅಧ್ಯಕ್ಷ ಜಿನ್ ಪಿಂಗ್ ಸಶಸ್ತ್ರ ಪಡೆಗಳ ಸದರ್ನ್ ಥಿಯೇಟರ್ ಕಮಾಂಡ್ ನೇವಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ತೈವಾನ್ ಜಲಸಂಧಿ ಮತ್ತು ನೆರೆಯ ಕಡಲ ವಲಯದಲ್ಲಿ ಹೆಚ್ಚಿನ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಹೀಗಾಗಿ ಜಿನ್ ಪಿಂಗ್ ನೇವಿಗೆ ಭೇಟಿ ನೀಡಿದ್ದರು. ಚೀನಾ ನೌಕಾಪಡೆಯುವ ತೈವಾನ್ ಸಮೀಪ ಮೂರು ದಿನಗಳ ನಿಜವಾದ ಯುದ್ಧದ ವ್ಯಾಯಾಮವನ್ನು ಪೂರ್ಣಗೊಳಿಸಿದೆ..
ನಮ್ಮ ದೇಶದ ಪ್ರಾದೇಶಿಕ ಸಾರ್ವಭೌಮತ್ವವನ್ನು ರಕ್ಷಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ. ಎಲ್ಲಾ ರಂಗಗಳಲ್ಲಿ ತರಬೇತಿ ಹೆಚ್ಚಿಸಲು ಮತ್ತು ಯುದ್ಧದ ತಯಾರಿ ನಡುವೇ ಸಶಸ್ತ್ರ ಪಡೆಗಳ ಆಧುನೀಕರಣದ ಮಟ್ಟವನ್ನ ಹೆಚ್ಚಿಸಲು ರೂಪಾಂತರವನ್ನು ವೇಗಗೊಳಿಸುವ ಅಗತ್ಯವನ್ನು ಕೇಂದ್ರಿಯ ಮಿಲಿಟರಿ ಆಯೋಗದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಚೀನಾದ ಪ್ರಾದೇಶಿಕ ಸಾರ್ವಭೌಮತ್ವ ಮತ್ತು ಕಡಲ ಹಿತಾಸಕ್ತಿಗಳನ್ನು ಸೇನೆಯು ದೃಢವಾಗಿ ರಕ್ಷಿಸಬೇಕು ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ STC ನೇವಿಗೂ ಕ್ಸಿ ಹೇಳಿದ್ದಾರೆ.
ನಮ್ಮ ಸುತ್ತಮುತ್ತಲಿನ ಒಟ್ಟಾರೆ ಬಾಹ್ಯ ಸ್ಥಿರತೆಯನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡಬೇಕು. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಬಗ್ಗೆ ಹಂಚಿಕೊಂಡ ಕಳವಳಗಳ ನಡುವೆ ಯುಎಸ್ ಮತ್ತು ಫಿಲಿಪೈನ್ಸ್ ಪ್ರಸ್ತುತ ತಮ್ಮ ಅತಿದೊಡ್ಡ ಜಂಟಿ ಮಿಲಿಟರಿ ವ್ಯಾಯಾಮವನ್ನು ನಡೆಸುತ್ತಿವೆ.
ಯುಎಸ್- ಚೀನಾ
ಇನ್ನೊಂದು ದೇಶವನ್ನು ಗುರಿಯಾಗಿಸಿಕೊಂಡು ಇಂತಹ ಕಸರತ್ತು ಮಾಡಬಾರದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ. ಅಲ್ಲದೆ, ಜಂಟಿ ಮಿಲಿಟರಿ ವ್ಯಾಯಾಮಗಳು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಗೆ ಅನುಕೂಲಕರವಾಗಿರಬೇಕು. ಗಮನಾರ್ಹವಾಗಿ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರ ಈ ಹೇಳಿಕೆಯು ಯುಎಸ್ ಮತ್ತು ಫಿಲಿಪೈನ್ಸ್ ಜಂಟಿ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಬಂದಿದೆ.
ಎರಡೂ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಕಡಲ ಚಟುವಟಿಕೆಗಳನ್ನು ಕಾನೂನುಬಾಹಿರ ಎಂದು ಹೇಳಿದೆ. ಈ ಜಂಟಿ ಹೇಳಿಕೆಯು ಚೀನಾದ ಕಾನೂನುಬದ್ಧ ಕಡಲ ಕಾನೂನು ಜಾರಿ ಚಟುವಟಿಕೆಗಳಲ್ಲಿ ಆಕ್ರಮಣಶೀಲತೆಯನ್ನು ಸೂಚಿಸುತ್ತದೆ. ಈ ಜಂಟಿ ಹೇಳಿಕೆ ಕೂಡ ಚೀನಾವನ್ನು ದೂಷಿಸುತ್ತದೆ. ಬೀಜಿಂಗ್ ಈ ಬಗ್ಗೆ ಗಂಭೀರವಾಗಿ ಚಿಂತಿಸಿದೆ ಮತ್ತು ಅದನ್ನು ಬಲವಾಗಿ ತಿರಸ್ಕರಿಸುತ್ತದೆ ಎಂದು ಹೇಳಿದ್ದಾರೆ..