ಕೋವಿಡ್ -19 ಉಲ್ಬಣ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣದ ಕಾರಣ ಇಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಕರೋನಾ ಬಿಕ್ಕಟ್ಟನ್ನು ನಿಭಾಯಿಸಲು ಏನೆಲ್ಲ ಮಾಡಬೇಕು ಎಂಬುದನ್ನು ಬರೆದಿರುವ ಮನಮೋಹನ್ ಸಿಂಗ್ ಅವರ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದೇಶದಲ್ಲಿ ಕರೋನಾ ವೈರಸ್ ಅಂಕಿಅಂಶಗಳು ಲೆಕ್ಕವಿಲ್ಲದಷ್ಟು ಹೆಚ್ಚುತ್ತಿವೆ. ಪ್ರತಿದಿನ ಲಕ್ಷಗಟ್ಟಲೆ ಹೊಸ ಪ್ರಕರಣಗಳು ಬರುತ್ತಿವೆ ಮತ್ತು ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಇದರ ಮದ್ಯೆ ಹಾಸಿಗೆಗಳ ಕೊರತೆ, ಆಮ್ಲಜನಕ ಮತ್ತು ಐಸಿಯು ಬೆಡ್ಗಳ ಕೊರತೆ ಎಂದು ದೇಶದ ಹಲವು ನಗರಗಳಿಂದ ದೂರುಗಳು ಬರುತ್ತಿವೆ. ಇದೆಲ್ಲವನ್ನೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೂಕ್ಷ್ಮವಾಗಿ ಗಮನಿಸಿದಂತೆ ಕಾಣುತ್ತದೆ. ಆಗಾಗಿಯೇ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಕ್ಕಟ್ಟನ್ನು ಎದುರಿಸಲು ವ್ಯಾಕ್ಸಿನೇಷನ್ ಹೆಚ್ಚಿಸಬೇಕಾಗಿದೆ ಎಂದು ಎರಡು ಪುಟಗಳ ಪತ್ರವೊಂದನ್ನು ಬರೆದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಕರೋನಾಯಿಂದಾಗಿ ಅನೇಕ ಜನರು ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ ಮತ್ತು ಲಕ್ಷಾಂತರ ಜನರನ್ನು ಬಡತನಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ. ” ಕರೋನಾ ಎರಡನೇ ಅಲೆಯಿಂದಾಗಿ, ಜನರು ತಮ್ಮ ಜೀವನ ಯಾವಾಗ ಸಾಮಾನ್ಯವಾಗಲಿದೆ ಎಂದು ಯೋಚಿಸಲು ಪ್ರಾರಂಭಿಸಿದ್ದಾರೆ” ಎಂದು ಸಿಂಗ್ ಬರೆದಿದ್ದಾರೆ.
ನಾವು ಈ ಸಾಂಕ್ರಾಮಿಕ ರೋಗಗ ವಿರುದ್ಧ ಹೋರಾಡಲು ಸುಮಾರು ಕೆಲಸಗಳು ಮಾಡಬೇಕಿದೆ ಮೊದಲು ವ್ಯಾಕ್ಸಿನೇಷನ್ ಪ್ರೊಗ್ರಾಮ್ ಅನ್ನು ಹೆಚ್ಚಿಸಬೇಕು ಎಂದು ಮಾಜಿ ಪ್ರಧಾನಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಐದು ಸಲಹೆಗಳನ್ನು ಪ್ರಧಾನಿ ಮೋದಿಯವರಿಗೆ ಪತ್ರದ ಮೂಲಕ ರವಾನಿಸಿದ್ದಾರೆ.
ಕರೋನಾ ಭೇದಿಸಲು ಐದು ಸಲಹ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್.
1. ವಿವಿಧ ಲಸಿಕೆ ಉತ್ಪಾದಕರ ಮೇಲೆ ನೀಡಲಾಗುವ ಪ್ರಮಾಣಗಳಿಗೆ ದೃಢವಾದ ಆದೇಶಗಳು ಯಾವುವು/ ಎಷ್ಟು ಮತ್ತು ಮುಂದಿನ ಆರು ತಿಂಗಳಲ್ಲಿ ವಿತರಣೆಗೆ ಅಂಗೀಕರಿಸಲಾಗಿದೆ ಎಂಬುದನ್ನು ಸರ್ಕಾರ ಸಾರ್ವಜನಿಕವಾಗಿ ಮುಂದಿಡಬೇಕು/ ಪ್ರಚಾರ ಮಾಡಬೇಕು. ಈ ಅವಧಿಯಲ್ಲಿ ನಾವು ಗುರಿ ಸಂಖ್ಯೆಗೆ ಲಸಿಕೆ ನೀಡಲು ಬಯಸಿದರೆ, ನಾವು ಸಾಕಷ್ಟು ಮುಂಚಿತವಾಗಿ ಆದೇಶಗಳನ್ನು ಹೊಂದಿರಬೇಕು.’ ಎಂದು ಸಿಂಗ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
2. ರಾಜ್ಯಗಳಲ್ಲಿ ಪಾರದರ್ಶಕ ಸೂತ್ರದ ಆಧಾರದ ಮೇಲೆ ಈ ಸರಬರಾಜುಗಳನ್ನು ಹೇಗೆ ವಿತರಿಸಲಾಗುವುದು ಎಂಬುದನ್ನು ಸರ್ಕಾರ ಸೂಚಿಸಬೇಕು. ತುರ್ತು ಅಗತ್ಯದಲ್ಲಿ ವಿತರಿಸಲು ಕೇಂದ್ರ ಸರ್ಕಾರವು ಶೇಕಡಾ 10 ರಷ್ಟು ಇರಿಸಿಕೊಳ್ಳಬಹುದು, ಆದರೆ ಇದನ್ನು ಹೊರತುಪಡಿಸಿ ರಾಜ್ಯಗಳಿಗೆ ಇದರಿಂದ ಯೋಜನೆಯನ್ನು ರೂಪಿಸಬೇಕು ಎಂದು ಸ್ಪಷ್ಟವಾಗಿ ಹೇಳಬೇಕು.
3. ಲಸಿಕೆ ನೀಡುವ ವಿಧಾನದಲ್ಲಿ ಪಾರದರ್ಶಕ ವಿಧಾನ ಅನುಸರಿಸಬೇಕು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ಲಸಿಕೆ ಹಾಕುವ ಬಗ್ಗೆ ಮುಂಚೂಣಿ ಕಾರ್ಮಿಕ ವರ್ಗಗಳನ್ನು ಗುರುತಿಸುವಂತೆ ರಾಜ್ಯಗಳಿಗೆ ತಿಳಿಸಬೇಕು. ಉದಾಹರಣೆಗೆ, ಶಾಲಾ ಶಿಕ್ಷಕರು, ಬಸ್, ತ್ರಿಚಕ್ರ ಮತ್ತು ಟ್ಯಾಕ್ಸಿ ಚಾಲಕರು, ಪುರಸಭೆ ಮತ್ತು ಪಂಚಾಯತ್ ಸಿಬ್ಬಂದಿ, ವಕೀಲರು ಮತ್ತು ನ್ಯಾಯಾಲಯಕ್ಕೆ ಹೋಗುವವರನ್ನು ಮುಂಚೂಣಿ ಕೆಲಸಗಾರರೆಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.
4. ಕಳೆದ ಕೆಲ ದಶಕಗಳಲ್ಲಿ ಭಾರತವು ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕರಾಗಿ ಹೊರಹೊಮ್ಮಿದೆ. ಈ ಸಾಮರ್ಥ್ಯ ಹೆಚ್ಚಾಗಿ ಖಾಸಗಿ ವಲಯದಲ್ಲಿದೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ, ಲಸಿಕೆ ಉತ್ಪಾದಕರಿಗೆ ಹಣ ಮತ್ತು ರಿಯಾಯಿತಿಯನ್ನು ನೀಡುವ ಮೂಲಕ ಸರ್ಕಾರವು ಉತ್ಪಾದನಾ ಸೌಲಭ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಬೇಕು. ಇದಲ್ಲದೆ, ಕಡ್ಡಾಯವಾಗಿ ಪರವಾನಗಿ ನೀಡುವ ನಿಬಂಧನೆಗಳನ್ನು ಜಾರಿಗೆ ತರಲು ಇದು ಉತ್ತಮ ಸಮಯ ಎಂದು ನಾನು ಭಾವಿಸುತ್ತೇನೆ, ಇದರಿಂದ ಕಂಪನಿಗಳು ಒಂದೇ ಪರವಾನಗಿ ಅಡಿಯಲ್ಲಿ ಲಸಿಕೆಗಳನ್ನು ತಯಾರಿಸಬಹುದು. ಹೆಚ್ಐವಿ / ಏಡ್ಸ್ ವಿರುದ್ಧ ಹೋರಾಡಲು ಈ ಪ್ರಯೋಗ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
5. ಕೇಂದ್ರ ಸರ್ಕಾರ ಚುಚ್ಚುಮದ್ದಿನ ಸಂಖ್ಯೆಗಳನ್ನು ನೋಡುವ ಬದಲು ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಗಮನಿಸಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ ಲಸಿಕೆ ಬಳಕೆಗೆ ತಕ್ಷಣದ ಅನುಮೋದನೆ ಮತ್ತು ಅನುಮತಿಯನ್ನು ನೀಡಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚಿನ ಮಾಹಿತಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದು ಆ ಪತ್ರವನ್ನು ಇಲ್ಲಿ ಲಗತ್ತಿಸಲಾಗಿದೆ.