ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆಶಿವಕುಮಾರ್ ನಾಡದ್ರೋಹಿ ಎಂಬ ಪದ ಬಳಕೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ನಾಡದ್ರೋಹಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಈಗ ಕೊಟ್ಟಿರುವ ಪರಿಹಾರವೇ ಸಾಕು ಎಂದು ಹೇಳಿರುವ ನೀವೊಬ್ಬ ನಾಡದ್ರೋಹಿಯೇ ಸರಿ. ಕೇಂದ್ರದಿಂದ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದ್ದೇವೆ ಎಂಬ ಪತ್ರ ಬಂದಿದೆ. ಆದರೆ ಖಾತೆಗೆ ಯಾವಾಗ ಜಮೆ ಆಗುತ್ತೋ ಗೊತ್ತಿಲ್ಲ. ಕೇಂದ್ರ ಬಿಡುಗಡೆ ಮಾಡದಿದ್ದರೂ ನಾವು ನಮ್ಮ ಕಾರ್ಯ ಮಾಡುತ್ತಿದ್ದೇವೆ. ಆದರೆ, ಈಗ ನಾವು ರಾಜ್ಯಕ್ಕೆ ಬಿಜೆಪಿಯಿಂದ ಆಗುತ್ತಿರುವ ದೊಡ್ಡ ದ್ರೋಹದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಆದರೆ, ಇವರು ಈಗ ಕೊಟ್ಟಿರೋದೇ ಸಾಕು ಅಂತಿದಾರೆ. ಅದೇನು ಇವರ ಮನೆ ಆಸ್ತಿನಾ? ದೇಶಕ್ಕಲ್ಲ, ರಾಜ್ಯಕ್ಕೆ ಇವರು ದ್ರೋಹಿಗಳು. ಕುಮಾರಸ್ವಾಮಿ ನಾಡದ್ರೋಹಿ ಎಂದು ವಾಗ್ದಾಳಿ ನಡೆಸಿದರು.