ನವದೆಹಲಿ : ಮಾ.17: ಕೊನೆಗೂ ಕಾಂಗ್ರೆಸ್ ಪಕ್ಷ ಟಿಕೆಟ್ ಘೋಷಿಸಿದ್ದು ಚುನಾವಣಾ ಅಖಾಡಕ್ಕೆ ಬಿರುಸಿನ ಎಂಟ್ರಿ ಕೊಟ್ಟಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಗೆದ್ದಿರುವ ಕ್ಷೇತ್ರ ಹಿಡಿತದಲ್ಲಿ ಇಟ್ಟುಕೊಳ್ಳುವ ಜೊತೆಗೆ ಗೆಲ್ಲದೆ ಇರುವ ಕ್ಷೇತ್ರಕ್ಕೂ ಗಾಳ ಹಾಕುವುದೆ ಕಾಂಗ್ರೆಸ್ ನ ಮುಖ್ಯ ಗುರಿ. ಹೀಗಾಗಿ ಈ ಮೊದಲೆ ಗೆಲ್ಲೋ ಅಭ್ಯರ್ಥಿ ಹುಡುಗಾಟಕ್ಕಾಗಿ 8 ರಿಂದ 10 ರೌಂಡ್ ಸರ್ವೆ ನಡೆಸಿತ್ತು. ಇದರ ಜೊತೆಗೆ ಸ್ಕ್ರೀನಿಂಗ್ ಕಮಿಟಿ ಸರ್ವೆ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯಾರು ಯಾವ ಕ್ಷೇತ್ರದಲ್ಲಿ ನಿಂತರೆ ಕ್ಷೇತ್ರ ಖಚಿತ ಎಂಬ ಮಾಹಿತಿಯ ವರದಿ ಹೊತ್ತು ದೆಹಲಿಗೆ ತೆರಳಿದ್ದರು. ಹಿರಿಯ ನಾಯಕರೊಂದಿದೆಗೆ ಚರ್ಚಿಸಿ ಕೊನೆಗೂ ಮೊದಲ ಹಂತದ ಟಿಕೆಟ್ ಫೈನಲ್ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾರಿಗೆ ಯಾವ ಕ್ಷೇತ್ರ..?
1.ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ
2.ಜಯನಗರ – ಸೌಮ್ಯಾರೆಡ್ಡಿ
3.ಬ್ಯಾಟರಾಯನಪುರ – ಕಷ್ಣಬೈರೇಗೌಡ
4.ಗಾಂಧಿನಗರ -ದಿನೇಶ್ ಗುಂಡೂರಾವ್
- ಹೆಬ್ಬಾಳ -ಬೈರತಿ ಸುರೇಶ್
6.ಶಿವಾಜಿನಗರ -ರಿಜ್ವಾನ್ ಅರ್ಷದ್
7.ಶಾಂತಿನಗರ -ಎನ್.ಎ ಹ್ಯಾರೀಸ್
8.ಸರ್ವಜ್ಞ ನಗರ – ಕೆ.ಜೆ.ಜಾರ್ಜ್
9.ಚಾಮರಾಜಪೇಟೆ -ಜಮೀರ್ ಅಹ್ಮದ್ ಖಾನ್
10.ಪುಲಿಕೇಶಿನಗರ – ಅಖಂಡ ಶ್ರೀನಿವಾಸ್ ಮೂರ್ತಿ
- ಹೊಸಕೋಟೆ -ಶರತ್ ಬಚ್ಚೇಗೌಡ
- ಆನೇಕಲ್ – ಶಿವಣ್ಣ
- ಕನಕಪುರ -ಡಿ.ಕೆ.ಶಿವಕುಮಾರ್
- ಹುಣಸೂರು -ಹೆಚ್.ಸಿ.ಮಹದೇವಪ್ಪ
- ವರುಣ – ಯತೀಂದ್ರ ಸಿದ್ದರಾಮಯ್ಯ
- ಕೋಲಾರ – ಸಿದ್ದರಾಮಯ್ಯ
- ಚಾಮರಾಜನಗರ -ಪುಟ್ಟರಂಗ ಶೆಟ್ಟಿ
- ಹನೂರು – ಆರ.ನರೇಂದ್ರ
- ಕೊರಟಗೆರೆ – ಜಿ.ಪರಮೇಶ್ವರ್
- ಕುಣಿಗಲ್ -ಡಾ.ರಂಗನಾಥ್
- ಹರಿಹರ – ರಾಮಪ್ಪ ಎಸ್
- ಚಳ್ಳಕೆರೆ – ಟಿ.ರಘುಮೂರ್ತಿ
- ಕಂಪ್ಲಿ- ಗಣೇಶ್
- ಸಂಡೂರು – ತುಕಾರಾಂ
- ಹಗರಿಬೊಮ್ಮನಹಳ್ಳಿ – ಭೀಮಾನಾಯ್ಕ್
- ಹುಬ್ಬಳ್ಳಿ- ಧಾರವಾಡ ಪೂರ್ವ – ಪ್ರಸಾದ್ ಅಬ್ಬಯ್ಯ
- ಚಿತ್ತಾಪುರ – ಪ್ರಿಯಾಂಗ್ ಖರ್ಗೆ
- ಜೇವರ್ಗಿ -ಅಜಯ್ ಸಿಂಗ್
- ಮಸ್ಕಿ -ಬಸನಗೌಡ ತುರುವೀಹಾಳ
- ರಾಯಚೂರು ಗ್ರಾಮೀಣ – ಬಸನಗೌಡ ದದ್ದಲ್
- ಯಮಕನಮರಡಿ – ಸತೀಶ್ ಜಾರಕಿಹೊಳಿ
- ಹೆಚ್.ಡಿ.ಕೋಟೆ – ಅನಿಲ್ ಚಿಕ್ಕಮಾದು
33.ಕುಷ್ಟಗಿ – ಅಮರೇಗೌಡ ಬಯ್ಯಾಪುರ - ಕೊಪ್ಪಳ – ರಾಘವೇಂದ್ರ ಹಿಟ್ನಾಳ್
- ಇಂಡಿ -ಯಶವಂತರಾಯಗೌಡ ಪಾಟೀಲ್