ಉತ್ತರ ದೆಹಲಿಯ ಭಾಲ್ಸ್ವಾ ಪ್ರದೇಶದಲ್ಲಿನ ತ್ಯಾಜ್ಯ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 15 ಗಂಟೆಗಳಿಂದಲೂ ಅಗ್ನಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ ಪಡುತಿದೆ.
ಮಂಗಳವಾರ ಸಂಜೆ ಸುಮಾರು 5:47ರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೂಡಲೇ ಅಗ್ನಿಶಾಮಕದಳ ಸಿಬ್ಬಂದಿಗೆ ದೂರನ್ನು ನೀಡಲಾಗಿತ್ತು. ಸ್ಥಳಕ್ಕೆ ಧಾವಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಆದರೆ ಅಗ್ನ ತಹಬದಿಗೆ ಬರುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ಒಂದೇ ತಿಂಗಳಲ್ಲಿ ಎರಡನೇ ಭಾರಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಅತಿಯಾದ ತಾಪಮಾನ ಹಾಗೂ ಈ ಪ್ರದೇಶದಲ್ಲಿ ಮಿಥೆಲ್ ಅನಿಲವನ್ನು ಹೆಚ್ಚಾಗಿ ಬಳಸುವುದರಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮೊದಲು ದೆಹಲಿಯ ಘಾಜಿಪುರದಲ್ಲಿ ಈ ರೀತಿಯ ಘಟನೆ ನಡೆದಿತ್ತು.