ಸುಟ್ಟ ಗಾಯದ ಮೇಲೆ ಟೂತ್ಪೇಸ್ಟ್ ಅನ್ನ ಹಚ್ಚಬಹುದು ಅದರಿಂದ ಒಳ್ಳೆಯದು ಎಂಬುದು ಸಾಕಷ್ಟು ಜನರ ನಂಬಿಕೆಯಾಗಿದೆ. ಟೂತ್ಪೇಸ್ಟ್ ಅಣ್ಣ ಹಚ್ಚುವುದರಿಂದ ಉರಿ ಹಾಗೂ ನೋವು ಕಡಿಮೆಯಾಗುತ್ತದೆ ಗುಳ್ಳೆ ಆಗುವುದನ್ನ ತಡೆಯುತ್ತದೆ ಎಂದು ಕೂಡ ಹೇಳುತ್ತಾರೆ. ಆದ್ರೆ ಸುಟ್ಟ ಗಾಯದ ಮೇಲೆ ಟೂತ್ಪೇಸ್ಟ್ ಅನ್ನ ಹಚ್ಚುವುದರಿಂದ ಅಡ್ಡ ಪರಿಣಾಮಗಳಾಗುವುದೇ ಜಾಸ್ತಿ.

ಇರಿಟೇಶನ್
ಸುಟ್ಟಾಗ ಟೂತ್ಪೇಸ್ಟ್ ಅನ್ನ ಹಚ್ಚುವುದರಿಂದ ಚರ್ಮಕ್ಕೆ ಕಿರಿಕಿರಿ ಉಂಟಾಗುವುದು ಖಂಡಿತ. ಇನ್ನು ಟೂತ್ ಪೇಸ್ಟ್ ನಲ್ಲಿ ಸೋಡಿಯಂ ಲಾರಿಲ್ ಸಲ್ಫೇಟ್‌ನಂತಹ ಪದಾರ್ಥಗಳು ಬಳಸಿರುತ್ತಾರೆ ..ಇವುಗಳು ಚರ್ಮವನ್ನು ಕೆರಳಿಸಬಹುದು ಮತ್ತು ಇನ್ನಷ್ಟು ಹದಗೆಡಿಸಬಹುದು.

ಗುಣವಾಗುವುದು ತಡವಾಗುತ್ತದೆ
ಸುಟ್ಟಾಗ ಟೂತ್ಪೇಸ್ಟ್ ಅಣ್ಣ ಹಚ್ಚುವುದರಿಂದ, ಪೇಸ್ಟ್ ತಡಗೋಡೆ ಅಂತಾಗುತ್ತದೆ ಹಾಗೂ ಇದರಿಂದ ಗಾಯಕ್ಕೆ ಗಾಳಿ ಸರಿಯಾಗಿ ಆಡುವುದಿಲ್ಲ..ಇದರಿಂದಾಗಿ ಗುಣವಾಗುವುದು ತಡವಾಗುತ್ತದೆ.

ಬ್ಯಾಕ್ಟೀರಿಯಗಳ ಸಮಸ್ಯೆ
ಟೂತ್ಪೇಸಿನಲ್ಲಿ ಬ್ಯಾಕ್ಟೀರಿಯಗಳು ಇರುತ್ತದೆ, ಇದನ್ನು ಸುಟ್ಟ ಗಾಯದ ಮೇಲೆ ಬ್ಯಾಕ್ಟೀರಿಯಾದಿಂದ ಗಾಯ ಇನ್ನಷ್ಟು ಹದಗೆಡಬಹುದು. ಹಾಗಾಗಿ ಟೂತ್ಪೇಸ್ಟ್ ಬಳಸುವುದು ಉತ್ತಮವಲ್ಲ.