ಸರ್ಕಾರಿ ಜಮೀನಿನ ಪರಭಾರೆ ಪ್ರಕರಣದಲ್ಲಿ ಶಿವಣ್ಣ ಹಾಗೂ F.D.A ಜ್ಞಾನಶೇಖರ್ ಹಾಗೂ ಕೆ ಎಸ್ ಗಿರಿಧರ್ ಎಂಬುವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಬಗ್ಗೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಶ್ರೀನಿವಾಸ್ ನೀಡಿದ ದೂರಿನ ಅನ್ವಯ ಪೊಲೀಸರು FIR ದಾಖಲು ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಏಸಿ ಆಗಿದ್ದಾಗ , ಉತ್ತರಹಳ್ಳಿ ಹೋಬಳಿಯ ವಡ್ಡರ ಪಾಳ್ಯದ ಸರ್ವೆ ನಂಬರ್ ಆರು ಮತ್ತು ಏಳರಲ್ಲಿ ಎಕರೆಗಟ್ಟಲೆ ಭೂಮಿ ಗೋಲ್ಮಾಲ್ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಗಿರಿಧರ್ ಎಂಬಾತನಿಗೆ ಸರ್ಕಾರಿ ಭೂಮಿಯನ್ನ ಮಾರಾಟ ಮಾಡಿದ್ದಾರೆ. ಇನ್ನು ಈ ಕುರಿತು ಪರಿಶೀಲನೆ ಮಾಡಿದಾಗ ಮೂಲ ದಾಖಲೆಗಳು ಕಚೇರಿಯಲ್ಲಿ ಇರಲಿಲ್ಲ. ಹಾಗಾಗಿ ಈ ಮೂವರ ವಿರುದ್ಧ ಕ್ರಮಕ್ಕೆ ತಹಶೀಲ್ದಾರ್ ಶ್ರೀನಿವಾಸ್ ದೂರು ನೀಡಿದ್ದರು. ದೂರು ಆಧರಿಸಿ ಎ.ಸಿ ಶಿವಣ್ಣ ಮತ್ತಿತರ ವಿರುದ್ಧ ಐಪಿಸಿ 1860 ಸೇರಿ 420 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಮಾರ್ಚ್ 2021 ರಲ್ಲಿ ಜಮೀನಿನ ದಾಖಲೆಗಳನ್ನು ನಕಲಿ ಮಾಡಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ. ‘ಪ್ರಧಾನ ಆರೋಪಿ ಶಿವಣ್ಣ ಗಿರಿಧರ್ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂ ದಾಖಲೆ ಸೃಷ್ಟಿಸಿದ್ದಾರೆ’ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ದಾಖಲೆಗಳನ್ವಯ ಸದರಿ ಆದೇಶವು ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿ ಕೊತ್ತನೂರು ಗ್ರಾಮದ ಸ.ನಂ, 5/2 ಸಂಬಂಧಿಸಿರುತ್ತೆ. ಮೇಲ್ಕಂಡ ಆಸ್ತಿಗೆ ಸಂಬಂಧಿಸಿರುವುದಿಲ್ಲ, ಆದ್ದರಿಂದ ಆರ್ ಎ (ಎಸ್)/229/2021 ರ ದಾಖಲೆಗಳು ಸೃಷ್ಟಿತ ದಾಖಲೆಗಳಾಗಿರುತ್ತವೆ, ಅಲ್ಲದೆ ಸದರಿ ಆದೇಶದ ಮೂಲ ಕಡತವು ಉಪವಿಭಾಗಾಧಿಕಾರಿಗಳ ಕಛೇರಿಯಲಿ ಲಭ್ಯವಿರುವುದಿಲ್ಲ,
ಲಭ್ಯವಿರುವ ದಾಖಲೆಗಳನ್ವಯ ಬೆಂಗಳೂರು ಉತ್ತರ ತಾಲೂಕು ವಡ್ಡರಪಾಳ್ಯ ಗ್ರಾಮಕ್ಕೆ ಸಂಬಂಧಿಸಿದ ಸರ್ವೇ ನಂ, 6 ರ ಜಮೀನುಗಳಿಗೆ ಬೆಂಗಳೂರು ದಕ್ಷಿಣ ಉಪ ವಿಭಾಗ ರವರ ಆದೇಶ ಸಂಖ್ಯೆ: ಆರ್ ಎ(ಎ)/46/2020-21 ರಂತೆ ಖಾತೆಯನ್ನು ಸರ್ಕಾರದ ಹೆಸರಿನಿಂದ ತೆಗೆದು ಕೆ.ಎಸ್.ಗಿರಿಧರ್ ರವರ ಹೆಸರಿಗೆ ಬದಲಾವಣೆ ಮಾಡಲಾಗಿರುವುದು ತಾಳೆ ಆಗಿರುತ್ತೆ, ಆದರೆ ಸದರಿ ಅದೇಶದ ಮೂಲ ಕಡತವೂ ಕಛೇರಿಯಲ್ಲಿ ಲಭ್ಯವಿರುವುದಿಲ್ಲ.

ಆದ್ದರಿಂದ ಸದರಿ ಆದೇಶ ನೀಡಿರುವ 1, ಡಾ|| ಎಂ.ಜಿ, ಶಿವಣ್ಣ, ಅಂದಿನ ಉಪ ವಿಭಾಗಾಧಿಕಾರಿಗಳು, 2, -, ಜ್ಞಾನಶೇಖರ್, ಪ್ರದಸ ಮತ್ತು ಜಮೀನನ್ನು ತಮ್ಮ ಹೆಸರಿಗೆ ಬದಲಿಸಿರುವ 3, ಕೆ.ಎಸ್, ಗಿರಿಧರ್ ರವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮಾತ್ರ ಉಪ ವಿಭಾಗಾಧಿಕಾರಿಗಳು, ಬೆಂಗಳೂರು ದಕ್ಷಿಣ ರವರ ಪತ್ರದ ಸಂ ಸಿಬ್ಬಂದಿ (ದೂರು), ಸಿಆರ್/ ಆರ್/13/2023-24 ದಿನಾಂಕ 12-09-2023 ರ ಆದೇಶ ಮತ್ತು ಘನ ಉಚ್ಛ ನ್ಯಾಯಾಲಯದ ಡಬ್ಲ್ಯೂಪಿ ನಂ. 13178/2023 ರ ನಿದೇಶನದನ್ಯವಯ ತಹಸೀಲ್ದಾರ್ ರವರು ನೀಡಿರುವ ದೂರುಗಳನ್ನ ಗಣನೆಗೆ ತೆಗೆದುಕೊಂಡು ಎಫ್, ಐ, ಆರ್ ದಾಖಲಿಸಲಾಗಿದೆ.