ಹೋಟೆಲ್ ಮುಂಭಾಗ ಕಾರ್ ನಿಲ್ಲಿಸುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು ಒಬ್ಬರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದೆಹಲಿ ಹಾಗೂ ಉತ್ತರಪ್ರದೇಶದ ಗಡಿ ಭಾಗವಾದ ಘಾಜಿಯಾಬಾದ್ನಲ್ಲಿ ನಡೆದಿದೆ.
ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕ್ಷುಲಕ ಕಾರಣಕ್ಕೆ ಬಲಿಯಾದ ಯುವಕನನ್ನು ವರುಣ್(35) ಎಂದು ಗುರುತಿಸಲಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಪುತ್ರನಾಗಿರುವ ವರುಣ್ ತಮ್ಮ ಮನೆಯ ಬಳಿಯೇ ವ್ಯಾಪಾರ ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಮಂಗಳವಾರ ಸಂಜೆ ಘಾಜಿಯಾಬಾದ್ಗೆ ತೆರಳಿದ್ದ ವರುಣ್ ಹೋಟೆಲ್ ಒಂದರ ಬಳಿ ಕಾರ್ ನಿಲ್ಲಿಸಿದ್ದರು ಇದು ಪಕ್ಕದ ಕಾರಿನಲ್ಲಿದ್ದವರಿಗೆ ಡೋರ್ ತೆರೆಯಲು ಕಷ್ಟವಾಯಿತು. ಈ ವೇಳೆ ವರುಣ್ ಹಾಗೂ ಎರಡು ಕಾರಿನವರ ನಡುವೆ ಮಾತಿನ ಚಕಮಕಿ ನಡೆದಿದ್ದು ವರುಣ್ ಕೊಲೆಯಲ್ಲಿ ಅಂತ್ಯವಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಮತ್ತು ಕಾರ್ಯಾಚರಣೆಗಾಗಿ ಐದು ತಂಡಗಳನ್ನು ರಚಿಸಿರುವುದಾಗಿ ತಿಳಿಸಿದ್ದಾರೆ.