ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಸಿಡಿದೆದ್ದಿದ್ದಾರೆ. ವರುಣಾದಲ್ಲಿ ಬಿಜೆಪಿ- ಜೆಡಿಎಸ್ ಒಳಮೈತ್ರಿ ಇದೆ ಅಂತ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಳ ಮೈತ್ರಿ, ಹೊರ ಮೈತ್ರಿ ಎಂದು ಮಾತನಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಭಯ ಹುಟ್ಕೊಂಡಿದೆ. ಎಲ್ಲಾ ಅಭ್ಯರ್ಥಿಗಳೂ ತಾವೇ ಗೆಲ್ಲಬೇಕು ಅಂತ ಚುನಾವಣೆಯಲ್ಲಿ ನಿಲ್ಲುತ್ತಾರೆ. ಯಾರೇ ಸೇರಿಕೊಂಡರೂ ಸಿದ್ದರಾಮಯ್ಯನವರಿಗೆ ಸ್ವಂತ ಬಲ ಇದ್ರೆ ಗೆಲ್ಲುತ್ತಾರೆ, ಇಲ್ಲದಿದ್ರೆ ಗೆಲ್ಲಲ್ಲ.

ನನ್ನ ಕ್ಷೇತ್ರ ಶಿಗ್ಗಾಂವಿಯಲ್ಲೂ ಕಾಂಗ್ರೆಸ್- ಜೆಡಿಎಸ್ ಸೇರಿಕೊಂಡಿದ್ದಾರೆ. ಇದರಿಂದ ನನಗೇನೂ ಭಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಬದಲಾಯಿಸಿದ್ದು ನನ್ನ ಮೇಲೆ ವ್ಯತ್ಯಾಸ ಆಗುವುದಿಲ್ಲ. ಕಾಂಗ್ರೆಸ್ ನ ಒಬ್ಬರಿಗೆ ಜೆಡಿಎಸ್ ಟಿಕೆಟ್ ಕೊಟ್ಟಿದೆ. ಇದನ್ನು ನಾನು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಎನ್ನಲಾ? ನಾನು ಈ ತರಹ ಆರೋಪ ಎಲ್ಲಾ ಮಾಡುವುದಿಲ್ಲ ಎಂದರು. ಯಾರು ಯಾರ ಜೊತೆಗಾದರೂ ಸೇರಿಕೊಳ್ಳಲಿ. ನಾನು ನನ್ನ ಸ್ವಂತ ಬಲದಿಂದ ಗೆಲ್ಲುತ್ತೇನೆ ಎಂದರು. ಸಿದ್ದರಾಮಯ್ಯ ವರುಣಾದಿಂದ 6-7 ಸಲ ಗೆದ್ದು ಬಂದವರು. ಈ ಮೊದಲು ಅವರಿಗೆ ಕ್ಷೇತ್ರದ ಅನಿಶ್ಚಿತತೆ ಇತ್ತು. ಈಗ ಕ್ಷೇತ್ರದ ಒಳಗಡೆ ಅನಿಶ್ಚಿತತೆ ಇದೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.







