ಒಂದು ಸಲ ಬಿದ್ದ ಗಾಯವೇ ಆರಿಲ್ಲ.. ಈಗ ಮತ್ತೆ ಗಾಯದ ಮೇಲೆ ಬರೆ ಬಿದ್ದಿದೆ. ಗಾಯಕ್ಕೆ ಔಷದಿ ಹಚ್ಚಬೇಕಾದವ್ರು ಕಣ್ಣುಮುಚ್ಚಿ ಕುಳಿತಿದ್ದಾರೆ.. ಇದೆಲ್ಲ ಸಹಿಸಿಕೊಂಡು ರೈತ ಮಾತ್ರ ಹೈರಾಣಾಗಿದ್ದಾನೆ. ಕೈಗೆ ಬಂದ ತುತ್ತು ಕಳೆದುಕೊಂಡು ಸರ್ಕಾರ ಕೊಡೋ ಪರಿಹಾರಕ್ಕೆ ಕಾಯುವ ಸ್ಥಿತಿ ಬಂದಿದೆ.
ಅನ್ನದಾತರ ಬದುಕಿನಲ್ಲಿ ವರವಾಗಿ ಬರಬೇಕಿದ್ದ ಮಳೆರಾಯ ಶತ್ರುವಾಗಿ ಕಾಡುತ್ತಿದ್ದಾನೆ. ಕಳೆದ ಹಲವು ವರ್ಷಗಳಿಂದ ಅಬ್ಬರಿಸಿ ಬೊಬ್ಬೆರೆದಿದ್ದ ಮಳೆರಾಯ ಬೆಳೆಗಳನ್ನ ಹಾಳು ಮಾಡ್ತಿದ್ದಾನೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರೋ ರೈತರಿಗೆ ವರುಣ ದೇವ ಇನ್ನಷ್ಟು ಆರ್ಥಿಕ ಪೆಟ್ಟು ನೀಡುತ್ತಿದ್ದಾನೆ.
ಕಳೆದ 15-20 ದಿನಗಳಿಂದ ವರುಣರಾಯ ಇನ್ನಿಲ್ಲದಂತೆ ಕಾಡ್ತಿದ್ದಾನೆ.. ಫಸಲಿಗೆ ಬಂದಿದ್ದ ಬೆಳೆ ಮಣ್ಣು ಪಾಲಾಗ್ತಿದೆ.. ವರ್ಷವಿಡಿ ಬೆಳೆದಿದ್ದ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಮನೆಗಳು ಕುಸಿದು ಹೋಗ್ತಿವೆ.. ಜನ ಸಂಕಷ್ಟಕ್ಕೀಡಾಗಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಕೃಷ್ಣಾ ಹಾಗೂ ಭೀಮಾ ನದಿಗಳ ಆರ್ಭಟದಿಂದ ಜನ ಕಂಗಾಲಾಗಿದ್ದಾರೆ.. ಪ್ರವಾಹದಿಂದ ಹಾನಿಯಾದ ಮೊತ್ತವನ್ನ ಜನರಿಗೆ ನೀಡೋದಾಗಿ ಭರವಸೆ ನೀಡಿದ್ರು. ಆದ್ರೆ ಇದೆಲ್ಲ ಆಗಿ ಆರು ತಿಂಗಳು ಕಳೆದ್ರೂ ಇನ್ನೂ ಪರಿಹಾರ ಸಿಕ್ಕಿಲ್ಲ ಅಂತ ರೈತರು ಗೋಳಾಡ್ತಿದ್ದಾರೆ.
ಇಷ್ಟೇ ಯಾಕೆ ಸರ್ಕಾರದ ಪರಿಹಾರವನ್ನೆ ನಂಬಿ ಅನೇಕರು ಬೀದಿಯಲ್ಲಿ ಕೂತಿದ್ದಾರೆ.. ಸರ್ಕಾರ ಮಾತ್ರ ಪರಿಹಾರ ನೀಡುವ ಗೋಜಿಗೆ ಹೋಗ್ತಿಲ್ಲ. ಹೀಗಾದ್ರೆ ಬದುಕೋದಾದ್ರೂ ಹೇಗೆ ಅಂತಿದ್ದಾರೆ ರೈತರು.. ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿ ಪರಿಹಾರ ಕೊಡಿಸಿ ಅಂತ ಅಂಗಲಾಚ್ತಿದ್ದಾರೆ.
ಕಳೆದ ಬಾರಿಯೂ ಪ್ರವಾಹ ಬಂದಾಗ ಸರ್ಕಾರ ಪರಿಹಾರದ ಭರವಸೆ ನೀಡಿತ್ತು. ಪರಿಹಾರ ಬರುತ್ತೆ ಅಂತ ಕಾಯ್ದು ಕೂತಿದ್ರು.. ಆದ್ರೆ ಕೆಲವರಿಗೆ ಪರಿಹಾರ ನೀಡಿ ಉಳಿದವರಿಗೆ ಕಾಗೆ ಹಾರಿಸೋ ಪ್ರಯತ್ನ ನಡೆದಿದೆ ಅಂತ ಆರೋಪಿಸಲಾಗ್ತಿದೆ.. ಇನ್ನು ಈ ಬಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರೀಯಾ ಅವರನ್ನ ಕೇಳಿದ್ರೆ ಪರಿಹಾರ ನೀಡುತ್ತಿದ್ದೇವೆ ಅಂತಿದ್ದಾರೆ.
ಹೀಗೆ ಮಳೆ ಬಂದು, ಪ್ರವಾಹವಾಗಿ ಐದಾರು ತಿಂಗಳು ಕಳಿತಾ ಬಂದ್ರೂ ಜನರ ಪರಿಹಾರ ಮಾತ್ರ ಸಿಕ್ಕಿಲ್ಲ.. ಅಧಿಕಾರಿಗಳು ಇನ್ನು ಬೆಳೆ ನಷ್ಟದ ಡಾಟಾ ಕಳಿಸೋದ್ರಲ್ಲೇ ಬ್ಯುಸಿ ಆಗಿದ್ದಾರೆ. ಆದ್ರೆ ಇದೇ ರೀತಿ ಆದ್ರೆ ಜನರಿಗೆ ಪರಿಹಾರ ಸಿಗೋದು ಯಾವಾಗ ಅನ್ನೋದು ಪ್ರಶ್ನೆ ಎದ್ದಿದೆ.
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರ ಸಮಾಚಾರ ಕ್ರೈಸ್ತ ಧರ್ಮ ಪ್ರಚಾರಕ್ಕೆ ಸ್ವಿಟ್ಜ್ ರ್ ಲೆಂಡ್ ನಿಂದ ಭಾರತಕ್ಕೆ ಆಗಮಿಸಿದ ಮಿಶನರಿಗಳು ಬಾಸೆಲ್ ಮಿಶನ್ ಎಂಬ ಒಂದು ಸಂಸ್ಥೆಯನ್ನು...
Read moreDetails