• Home
  • About Us
  • ಕರ್ನಾಟಕ
Friday, July 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ʼಇಸ್ವಗುರುʼವಿನ ಆಡಳಿತದಲ್ಲಿ ಈ 4 ವರ್ಷಗಳಲ್ಲಿ ಭಾರತೀಯ ನಾಗರಿಕತ್ವ ತ್ಯಜಿಸಿದವರ ಸಂಖ್ಯೆ: 6 ಲಕ್ಷಕ್ಕೂ ಹೆಚ್ಚು!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 3, 2021
in ಅಭಿಮತ, ವಿದೇಶ
0
ʼಇಸ್ವಗುರುʼವಿನ ಆಡಳಿತದಲ್ಲಿ ಈ 4 ವರ್ಷಗಳಲ್ಲಿ ಭಾರತೀಯ ನಾಗರಿಕತ್ವ ತ್ಯಜಿಸಿದವರ ಸಂಖ್ಯೆ: 6 ಲಕ್ಷಕ್ಕೂ ಹೆಚ್ಚು!
Share on WhatsAppShare on FacebookShare on Telegram

ಇಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಎಂಬ ಜೀವವಿರೋಧಿ ಕಾಯ್ದೆಗಳ ನೆರವಿನಿಂದ ಈ ದೇಶದ ನಿವಾಸಿಗಳಾದ ಮುಸ್ಲಿಮರನ್ನು ಹೊರ ಹಾಕುವ ಹುನ್ನಾರ ನಡೆದಿದೆ. ಆದರೆ ವಿಶ್ವಗುರುವಿನ ಆಡಳಿತದಲ್ಲಿ ಈ 4 ವರ್ಷಗಳಲ್ಲಿ ಈ ದೇಶದ 6 ಲಕ್ಷಕ್ಕೂ ಹೆಚ್ಚು ಭಾರತೀಯರು ಈ ದೇಶದ ನಾಗರಿಕತ್ವ ಬಿಸಾಕಿ ಬೇರೆ ದೇಶಗಳಿಗೆ ಹೋಗಿದ್ದಾರೆ! ಇದರಲ್ಲಿ ಬಹುಪಾಲು ಜನ ಬ್ರಾಹ್ಮಣರು ಮಾತ್ತು ಇತರ ಮೇಲ್ಜಾತಿಯ ಹಿಂದೂಗಳು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ಬಹುತೇಕರು ಅಮೆರಿಕ ಪಾಲಾದೆ ಎಂದು ಹಾರಿ ಹೋದವರು.

ADVERTISEMENT

ಕಳೆದ ನಾಲ್ಕು ವರ್ಷಗಳಲ್ಲಿ, (2017 ರಿಂದ ಈ ವರ್ಷದ ಸೆಪ್ಟೆಂಬರ್‌ವರೆಗೆ) 6,07,650 ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. ಮತ್ತೊಂದೆಡೆ, 2016 ಮತ್ತು 2020 ರ ನಡುವೆ ಕೇವಲ 4,177 ಜನರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಂಕಿಅಂಶಗಳು ಬಹಿರಂಗಪಡಿಸಿವೆ.

ಸರಳವಾಗಿ ಹೇಳುವುದಾದರೆ, ಕಳೆದ ನಾಲ್ಕು ವರ್ಷಗಳಲ್ಲಿ ಭಾರತೀಯ ಪೌರತ್ವವನ್ನು ಪಡೆದ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿಯಾಗಿ 145 ಜನರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ.

ಮೇಲಿನ ಅಂಕಿಅಂಶವನ್ನು ಗೃಹ ಸಚಿವಾಲಯವು ಲೋಕಸಭೆಗೆ ತಿಳಿಸಿದೆ. ಕೇರಳದ ಕಾಂಗ್ರೆಸ್ ಸಂಸದ ಹೈಬಿ ಈಡನ್ ಅವರ ಪ್ರಶ್ನೆಗೆ ಮೇಲಿನ ಲಿಖಿತ ಉತ್ತರ ನೀಡಲಾಗಿದೆ.

2016-20ರ ಅವಧಿಯಲ್ಲಿ 4,177 ಮಂದಿ ಪೌರತ್ವ ಪಡೆದಿದ್ದು, 2016ರಲ್ಲಿ 1,106 ಮಂದಿ, 2017ರಲ್ಲಿ 817 ಮಂದಿ, 2018ರಲ್ಲಿ 628 ಮಂದಿ, 2019ರಲ್ಲಿ 987 ಮಂದಿ ಹಾಗೂ 2020ರಲ್ಲಿ 639 ಮಂದಿ ಪೌರತ್ವ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

2017-21ರ ಅವಧಿಯಲ್ಲಿ ತಮ್ಮ ಪೌರತ್ವವನ್ನು ತ್ಯಜಿಸಿದ 6,07,650 ಜನರಲ್ಲಿ, 2017 ರಲ್ಲಿ 1,33,049, 2018 ರಲ್ಲಿ 1,34,561, 2019 ರಲ್ಲಿ 1,44,017, 2020ರಲ್ಲಿ 85,248, ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 1,11287 ಭಾರತೀಯರು ತಮ್ಮ ನಾಗರಿಕತ್ವ ತ್ಯಜಿಸಿದ್ದಾರೆ.

2016-20ರ ಅವಧಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿ 10 ಜನರಲ್ಲಿ ಕೇವಲ ನಾಲ್ವರು ಮಾತ್ರ ಭಾರತೀಯ ನಾಗರೀಕತ್ವ ಪಡೆದಿದ್ದಾರೆ.

ಅರ್ಜಿದಾರರ ಸಂಖ್ಯೆ 2016 ರಲ್ಲಿ 2,262, 2017 ರಲ್ಲಿ 855 ಮತ್ತು 2018 ರಲ್ಲಿ 1,758. ನಂತರ ಅದು 2019 ರಲ್ಲಿ 4,224 ಕ್ಕೆ ತೀವ್ರವಾಗಿ ಏರಿತ್ತು. ಆದರೆ 2020 ರಲ್ಲಿ 1,546 ಕ್ಕೆ ಇಳಿಯಿತು. ಒಟ್ಟಾರೆಯಾಗಿ, ಈ ಐದು ವರ್ಷಗಳ ಅವಧಿಯಲ್ಲಿ 10,645 ಜನರು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಭಾರತೀಯ ಪೌರತ್ವಕ್ಕಾಗಿ ಗರಿಷ್ಠ ಸಂಖ್ಯೆಯ ಅರ್ಜಿಗಳು ಪಾಕಿಸ್ತಾನದ ನಾಗರಿಕರಿಂದ ಬಂದಿವೆ. 2016-2020 ರ ನಡುವೆ ಆ ದೇಶದ 7,782 ನಿವಾಸಿಗಳು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. 2019 ರಲ್ಲಿ ಪಾಕಿಸ್ತಾನಿಗಳಿಂದ ಅರ್ಜಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ, ಆ ವರ್ಷ 3,095 ಪಾಕಿಸ್ತಾನಿಯರು ಅರ್ಜಿ ಸಲ್ಲಿಸಿದ್ದರು. ಮರು ವರ್ಷ ಹಿಂದಿನ ಹಂತಕ್ಕೆ ಇಳಿಯಿತು.

ಪಾಕಿಸ್ತಾನದ ನಂತರ, ಹೆಚ್ಚಿನ ಅರ್ಜಿಗಳನ್ನು ಅಮೆರಿಕ (227)ದಿಂದ ಸ್ವೀಕರಿಸಲಾಗಿದೆ, ನಂತರ ಶ್ರೀಲಂಕಾ (205), ಬಾಂಗ್ಲಾದೇಶ (184), ನೇಪಾಳ (167), ಕೀನ್ಯಾ (135), ಬ್ರಿಟನ್‌ (82), ಇರಾನ್ (54) ಮತ್ತು ಕೆನಡಾ ( 44)ಗಳಿಂದ ಅರ್ಜಿಗಳು ಬಂದಿವೆ. “ಸ್ಟೇಟ್‌ಲೆಸ್” (ಯಾವ ದೇಶಕ್ಕೂ ಸೇರದವರು) ವರ್ಗದ ಜನರು 452 ಅರ್ಜಿ ಸಲ್ಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ)ಗೆ ಸಂಬಂಧಿಸಿದಂತೆಇದುವರೆಗಿನ ಪ್ರಗತಿಯ ಕುರಿತು ಈಡನ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, ಸಿಎಎ ಅಧಿಸೂಚನೆಯನ್ನು ಡಿಸೆಂಬರ್ 12, 2019 ರಂದು ಪ್ರಕಟವಾಗಿದ್ದು,  ಜನವರಿ 10, 2020ರಂದು ಜಾರಿಗೆ ಬಂದಿತು. “ಸಿಎಎ ಅಡಿಯಲ್ಲಿ ಬರುವ ವ್ಯಕ್ತಿಗಳು ಸಿಎಎ ಅಡಿಯಲ್ಲಿ ನಿಯಮಗಳನ್ನು ಸೂಚಿಸಿದ ನಂತರ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು” ಎಂದು ಅವರು ಹೇಳಿದರು. ಎನ್‌ಆರ್‌ಸಿಗೆ ಸಂಬಂಧಿಸಿದಂತೆ, ಅದನ್ನು ರಾಷ್ಟ್ರೀಯ ಮಟ್ಟದಲ್ಲಿ  ಜಾರಿ ಮಾಡಲು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು. 1955 ರ ಕಾಯಿದೆಯ ಅಡಿಯಲ್ಲಿ ಮೇ 2021 ರಲ್ಲಿ ಪೌರತ್ವ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಎಎಗೆ ಸಂಬಂಧಿಸಿದ ಕಾಯಿದೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಜಾರಿಗೊಳಿಸಲಾಗಿದ್ದರೂ ಇನ್ನೂ ನಿಯಮಗಳನ್ನು ರೂಪಿಸಲಾಗಿಲ್ಲ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರರಿಗೆ ಪೌರತ್ವಕ್ಕೆ ತ್ವರಿತ ಮಾರ್ಗವನ್ನು ಇದು ಒದಗಿಸುತ್ತದೆ.

ಈ ವರ್ಷದ ಮೇ ತಿಂಗಳಲ್ಲಿ, ಈ ಮೂರು ದೇಶಗಳ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರು ಮತ್ತು ಭಾರತದ ನಿರ್ದಿಷ್ಟ 13 ಜಿಲ್ಲೆಗಳಲ್ಲಿ ವಾಸಿಸುವವರಿಗೆ ಆತಿಥೇಯ ದೇಶದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಕೇಂದ್ರವು ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಇನ್ನೂ ಅಂತಿಮಗೊಳಿಸದ ಕಾರಣ 1955 ರ ಪೌರತ್ವ ಕಾಯ್ದೆಯ ಅಡಿಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿರೋಧ ಪಕ್ಷದ ಬಲವಾದ ಪ್ರತಿಭಟನೆಯ ಹೊರತಾಗಿಯೂ ಡಿಸೆಂಬರ್ 2019 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ ಸಿಎಎ ಮುಸ್ಲಿಮರಿಗೆ ತಾರತಮ್ಯ ಬಗೆಯುತ್ತದೆ ಎದು ಪರಿಗಣಿಸಲಾಗಿದೆ. ಸಿಎಎ ಜಾರಿ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

ಸಿಎಎಗೆ ಮತ್ತೆ ವಿರೋಧ 

ವಿವಾದಾತ್ಮಕ ಪೌರತ್ವ ಶಾಸನವು ಉತ್ತರ ಪ್ರದೇಶ ಸೇರಿದಂತೆ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಇತರ ನಾಲ್ಕು ರಾಜ್ಯಗಳ ರಾಜಕೀಯದಲ್ಲಿ ಅನುರಣನವನ್ನು ಪಡೆಯುತ್ತಲೇ ಇದೆ.

ಇತ್ತೀಚೆಗೆ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಮತ್ತು ಹೈದರಾಬಾದ್‌ನ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ, ಸಿಎಎ ಮತ್ತು ಎನ್‌ಆರ್‌ಸಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ “ಬೀದಿಗಳನ್ನು ಶಾಹೀನ್ ಬಾಗ್” ಆಗಿ ಪರಿವರ್ತಿಸುವುದಾಗಿ ಬೆದರಿಕೆ ಹಾಕಿದ್ದರು. ಅವರು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಡಿಸೆಂಬರ್ 2019 ರಿಂದ ವಿವಾದಾಸ್ಪದ ಸಿಎಎ ಮತ್ತು ಎನ್‌ಆರ್‌ಸಿ ಕಾನೂನುಗಳ ವಿರುದ್ಧ ದೆಹಲಿಯ ಶಾಹೀನ್‌ಬಾಗ್‌ನಲ್ಲಿ  ತಿಂಗಳುಗಳ ಕಾಲ ನಡೆದ ಜನರ ಪ್ರತಿಭಟನೆಗೆ ಸಂಬಂಧಿಸಿದಂತೆ ಒವೈಸಿ ಈ ಮಾತನ್ನು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಮಿತ್ರಪಕ್ಷವಾದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೂಡ ಸಿಎಎ ರದ್ದುಗೊಳಿಸಬೇಕೆಂದು ಒತ್ತಾಯಿಸಿದೆ. ಅದರ ಸಂಸದೆ ಅಗಾಥಾ ಸಂಗ್ಮಾ, “ಎನ್‌ಡಿಎ ಪಕ್ಷಗಳ ನಾಯಕರ ಸಭೆಯಲ್ಲಿ, ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು 2019ರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ರದ್ದುಗೊಳಿಸುವಂತೆ ನಾನು ಸರ್ಕಾರವನ್ನು ಒತ್ತಾಯಿಸಿದೆ” ಎಂದು ಹೇಳಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರದ ನಂತರ ಹಲವಾರು ಅಸ್ಸಾಂ ಸಂಘಟನೆಗಳು ಸಿಎಎ ವಿರೋಧಿ ಚಳವಳಿಯನ್ನು ಪುನರಾರಂಭಿಸಲು ಯೋಜಿಸುತ್ತಿವೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಅಗಾಸ್ಥಾ ಸಂಗ್ಮಾ ಅವರ  ಬೇಡಿಕೆ ಬಂದಿದೆ.

ಮೂಲ ವಿಷಯಕ್ಕೆ ಬರೋಣ, ಈ ದೇಶದ ನಾಗರಿಕತ್ವ ಬಿಸಾಕಿ ಹೋದವರ ಜಾತಿ-ಧರ್ಮಗಳ ವಿವರಗಳನ್ನು ಗೃಹ ಇಲಾಖೆ ಒದಗಿಸಿದರೆ ಮನುವಾದದ ತಿರುಳು ಬಯಲಾಗಲಿದೆ. ಅದು ನಮಗೂ ನಿಮಗೂ ಗೊತ್ತೇ ಇದೆ ಅಲ್ಲವೇ?

Tags: Number of people who gave up Indian Citizenship during the 4 years of Iswa Guru's administration
Previous Post

ಪ್ರವಾಹದಿಂದ ತತ್ತರಿಸಿದ ರೈತರು; ಬೆಳೆ ಹಾನಿಗೆ ಪರಿಹಾರ ನೀಡದೆ ಕಣ್ಣುಮುಚ್ಚಿ ಕುಳಿತ ಸರ್ಕಾರ

Next Post

ಬಲಪಂಥೀಯರ ಕಾಮಿಡಿಯೆಡೆಗಿನ ಅಲರ್ಜಿ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂಕ ಪ್ರೇಕ್ಷಕರು

Related Posts

Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
0

ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ 080 ಲಾಂಜ್ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತಿಥ್ಯ ಕ್ಷೇತ್ರದಲ್ಲಿ ಒಟ್ಟು ಹತ್ತು ಜಾಗತಿಕ ಪ್ರಶಸ್ತಿ ದೊರೆತಿವೆ. ಸ್ಪೇನ್‌ನ...

Read moreDetails

Khushi Mukherjee: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ..!

July 2, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಪ್ರಕರಣ

July 1, 2025
Next Post
ಬಲಪಂಥೀಯರ ಕಾಮಿಡಿಯೆಡೆಗಿನ ಅಲರ್ಜಿ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂಕ ಪ್ರೇಕ್ಷಕರು

ಬಲಪಂಥೀಯರ ಕಾಮಿಡಿಯೆಡೆಗಿನ ಅಲರ್ಜಿ ಮತ್ತು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಮೂಕ ಪ್ರೇಕ್ಷಕರು

Please login to join discussion

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,
Top Story

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

by ಪ್ರತಿಧ್ವನಿ
July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R
Top Story

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

by Chetan
July 4, 2025
ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!
Top Story

ಶಾಲಿನಿ ರಜನೀಶ್ ಬಗ್ಗೆ ಎನ್.ರವಿಕುಮಾರ್ ಇದೆಂಥಾ ಹೇಳಿಕೆ..?! ಬಿಜೆಪಿ ಎಂಎಲ್ಸಿ ಸಮರ್ಥನೆ ಏನು ಗೊತ್ತಾ..?!

by Chetan
July 4, 2025
Top Story

Bangalore Airport: 10 ಜಾಗತಿಕ ಪ್ರಶಸ್ತಿ ಪಡೆದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ..!!

by ಪ್ರತಿಧ್ವನಿ
July 3, 2025
Top Story

Dr Sharana Prakash Patil: ಡಸೆಲ್ಡಾರ್ಫ್‌ನಲ್ಲಿ ಸಚಿವ ಡಾ. ಶರಣಪ್ರಕಾಶ್‌ ಪಾಟೀಲ್‌ ನಿಯೋಗ..!

by ಪ್ರತಿಧ್ವನಿ
July 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

ನಾಳೆ ಬಾ ಎಂದವನ ಮನೆ ಹಾಳು ಎಂಬ ನಾಣ್ಣುಡಿಯೂ ಇದೆ,

July 4, 2025
ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

ಮಾಜಿ ಡಿಸಿಎಂ ಈಶ್ವರಪ್ಪಗೆ ಲೋಕಾ ಶಾಕ್ ! – ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ದಾಖಲಾಯ್ತು F.I.R

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada