ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಈಗ ಗೋಧಿಯ ಕೊಯ್ಲು ಕಾಲ ಆರಂಭವಾಗಿದ್ದು, ಇದೇ ಮೊದಲ ಬಾರಿಗೆ ಕನಿಷ್ಠ ಬೆಂಬಲ ದರ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಿದೆ.
ಸರಕಾರಿ ಅಂಕಿ ಅಂಶಗಳ ಪ್ರಕಾರ ಹಾಗು ಕೇಂದ್ರ ಸರಕಾರದ ಧಾನ್ಯ ಸಂಗ್ರಹಣಾ ಏಜೆನ್ಸಿಗಳಿಂದ 5,385 ಕೋಟಿ ರುಪಾಯಿಗಳನ್ನು ರೈತರ ಖಾತೆಗಳಿಗೆ ಈಗಿನ ಬೆಳೆ ಕೊಯ್ಲುಕಾಲದಲ್ಲಿ ವರ್ಗಾವಣೆ ಮಾಡಲಾಗಿದೆ.
ಏಪ್ರಿಲ್ 20ರ ವರೆಗೂ ಪಂಜಾಬಿನಲ್ಲಿ ಈ ಯೋಜನೆಯಡಿ 2600 ಕೋಟಿ ರುಪಾಯಿಗಳನ್ನು ಪಾವತಿಸಲಾಗಿದ್ದರೆ, ಹರಿಯಾಣದಲ್ಲಿ 2785 ಕೋಟಿ ರುಪಾಯಿಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ.
“DBT ಯೋಜನೆಯಡಿ ಏಪ್ರಿಲ್ 20ರ ವರೆಗೂ, 2600 ಕೋಟಿಗೂ ಹೆಚ್ಚು ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ.” ಎಂದು ಪಂಜಾಬಿನ ಆಹಾರ ಮಂತ್ರಿ ಭರತ್ ಭೂಷಣ್ ಅಂಶು ಅವರು ಹೇಳಿಕೆ ನೀಡಿದ್ದಾರೆ.
54 ಲಕ್ಷ ಟನ್ ಗಳಷ್ಟು ಗೋಧಿ ಮಂಡಿಗಳಿಗೆ ತಲುಪಿದ್ದು ಅದರಲ್ಲಿ 50 ಲಕ್ಷ ಟನ್ ಗಳಷ್ಟು ಗೋಧಿಯನ್ನು ಸಂಗ್ರಹಿಸಲಾಗಿದೆ ಎಂದು ಭರತ್ ಭೈಷಣ್ ಅಂಶು ಅವರು ಹೇಳಿದ್ದಾರೆ. “ಪಂಜಾಬಿನ ರೈತರೂ ಹಾಗೂ ಮಧ್ಯವರ್ತಿಯರು ಎಲ್ಲರೂ ಈ ಬಾರಿಯ ಸಂಗ್ರಹಣಾ ಪ್ರಕ್ರಿಯೆ ಕುರಿತು ಖುಷಿಯಾಗಿದ್ದಾರೆ.”
DBT ಅಡಿ ನಡೆಯುತ್ತಿರುವ ವಹಿವಾಟಿನ ಕುರಿತು ಲೂಧಿಯಾನಾದ ಹಲವಾರು ರೈತರು ಸಂತೃಪ್ತರಾಗಿದ್ದಾರೆ. ಮಚ್ಚಿವಾರಾ ಮಾರುಕಟ್ಟೆಗೆ ಏಪ್ರಿಲ್ 12 ರಂದು ಗೋಧಿ ಮಾರಿದ ಹರಿಂದರ್ ಪಾಲ್ ಸಿಂಗ್ ಅವರ ಖಾತೆಗೆ ನೇರವಾಗಿ ₹1,95,525 ವರ್ಗಾಯಿಸಿದ್ದು ಅವರಲ್ಲಿ ಸಂತಸ ತಂದಿದೆ ಎಂದಿದ್ದಾರೆ. ಹೀಗೆಯೇ, ತೋಡಾರ್ಪುರ್ ಗ್ರಾಮದ ಸುಖ್ಜಿತ್ ಸಿಂಗ್ ಅವರ ಖಾತೆಗೆ ₹2,31,666 ನೇರವಾಗಿ ವರ್ಗಾಯಿಸಿದ್ದು ಅವರೂ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 13 ರಂದು ಚಂಡೀಗಢದ ಸೆಕ್ಟರ್ 39 ರ ಧಾನ್ಯ ಮಾರುಕಟ್ಟೆಯಲ್ಲಿ ಗೋಧಿ ಮಾರಿದ ಸಾಹಿಬ್ಜಾದಾ ಅಜಿತ್ ಸಿಂಗ್ ನಗರದ ಪ್ರಾಪ್ತೇಜ್ ಸಿಂಗ್ ಅವರಿಗೆ ಐದು ದಿನಗಳಲ್ಲಿ ಹಣ ಪಾವತಿ ತಲುಪಿದೆ. ” ಈ ಹೊಸ (DBT) ಯೋಜನೆ ಪರಿಮಾಣಕಾರಿಯಾಗಿದೆ. ನಾನು ಯಾರ ಕೈಕಾಲೂ ಹಿಡಿಯದೇ, ಸಮಯಕ್ಕೆ ಸರಿಯಾಗಿ ಹಣ ಪಾವತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.”
ಅಧಿಕೃತ ಹೇಳಿಕೆಯೊಂದರ ಪ್ರಕಾರ ಹರಿಯಾಣದ ರೈತರ ಖಾತೆಗೆ ಏಪ್ರಿಲ್ 20ರ ವರೆಗೂ 2785 ಕೋಟಿ ರುಪಾಯಿಗಳನ್ನು ವರ್ಗಾಯಿಸಲಾಗಿದೆ.
ಹರಿಯಾಣ ಸರಕಾರ ಬುಧವಾರದಂದು ಕನಿಷ್ಠ ಬೆಂಬಲ ದರಕ್ಕೆ ಅನುಗುಣವಾಗಿ 3.11 ಲಕ್ಷ ಟನ್ ಗಳಷ್ಟು ಗೋಧಿಯನ್ನು ಸಂಗ್ರಹಣೆ ಮಾಡಿದೆ.
ಸಂಗ್ರಹಣಾ ಕೇಂದ್ರಕ್ಕೆ ತಲುಪಿರುವ 64.77 ಲಕ್ಷ ಟನ್ ಗೋಧಿಯಲ್ಲಿ 55.62 ಲಕ್ಷ ಟನ್ ಗಳಷ್ಟು ಗೋಧಿಯನ್ನು ಸಂಗ್ರಣೆ ಮಾಡಲಾಗಿದೆ.
ಈ ರೀತಿಯ ಹೊಸ DBT ಯೋಜನೆಯಿಂದ ಯಾವುದೆ ದಲ್ಲಾಳಿಗಳಿಲ್ಲದೆ ರೈತರು ತಮ್ಮ ಬೆಳೆಯನ್ನು ನಿಗಧಿ ಪಡಿಸಿರುವ ಬೆಲೆಗೆ ಮಾರಿ ನೇರವಾಗಿ ತಮ್ಮ ಕನಿಷ್ಠ ಬೆಂಬಲ ಬೆಲೆಯನ್ನು ಪಡೆದುಕೊಳ್ಳಬಹುದಾಗಿದೆ. ಈತರಹದ ಯೋಜನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಕೂಡ ಅವಳಡಿಸಿಕೊಂಡರೆ ಆಗಾಗ ಕುಸಿಯುವ ತರಕಾರಿ, ಹಣ್ಣು ಮತ್ತು ದಿನನಿತ್ಯ ಬಳಕೆಯ ಅಡುಗೆ ಸಾಮಾಗ್ರಿಗಳ ದರಗಳನ್ನು ಸರಿದೂಗಿಸಬಹುದು.