ಮೂರು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿದ್ದರಿಂದ ಮನೆಯಲ್ಲಿದ್ದ 3 ಮಕ್ಕಳು ಸೇರಿದಂತೆ 5 ಮಂದಿ ಸಜೀವದಹನಗೊಂಡ ಘಟನೆ ಉತ್ತರಪ್ರದೇಶದ ಮೊರ್ದಾಬಾದ್ ನಲ್ಲಿ ಸಂಭವಿಸಿದೆ.
ವಸತಿ ಸಮುಚ್ಛಯದಲ್ಲಿ ಗೋಡಾನ್ ಕೂಡ ಇದ್ದು, ಗುರುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ 5 ಮಂದಿ ಮೃತಪಟ್ಟಿದ್ದಾರೆ.
ಎಡ್ಬಾ (5), ಜುಬಿಯಾ (7), ಉಮಿಯಾ (12), ಶಮ ಪರ್ವಿನ್ (36), ಖಮರ್ ಜಹಾನ್ (75) ಮೃತಪಟ್ಟ ದುರ್ದೈವಿಗಳು.
ಗುಜರಿ ವಸ್ತುಗಳ ವ್ಯಾಪಾರ ಮಾಡುತ್ತಿದ್ದ ಇರ್ಷಾದ್ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ದುರ್ಘಟನೆ ವೇಳೆ ಇರ್ಷಾದ್ ಪುತ್ರ ಸೇರಿದಂತೆ ಅವರ ಸಂಬಂಧಿಕರು ಉಪಸ್ಥಿತರಿದ್ದರು ಎನ್ನಲಾಗಿದೆ.
ನೆಲ ಅಂತಸ್ತಿನಲ್ಲಿ ಗುಜರಿ ಅಂಗಡಿ ಇದ್ದು, ಇಲ್ಲಿ ರಾತ್ರಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಬೆಂಕಿ ಹೊತ್ತಿಕೊಂಡು ಕೂಡಲೇ ಮೇಲಿನ ಮನೆಗಳಿಗೆ ವ್ಯಾಪಿಸಿತು ಎಂದು ಹೇಳಲಾಗಿದೆ.