• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, June 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Fake Liquor:ಹೊಸ ವರ್ಷಕ್ಕೆ ಬಂದಿದೆ ನಕಲಿ ಮದ್ಯ

Any Mind by Any Mind
December 29, 2024
in Top Story, ಇತರೆ / Others, ಕರ್ನಾಟಕ
0
Fake Liquor:ಹೊಸ ವರ್ಷಕ್ಕೆ ಬಂದಿದೆ ನಕಲಿ ಮದ್ಯ
Share on WhatsAppShare on FacebookShare on Telegram

ವಿಜಯಪುರ:ಇನ್ನೇನು ಹೊಸವರ್ಷ ಬಂದೇಬಿಡ್ತು, ಎಲ್ಲರೂ ಸೇರಿ ಹೊಸ ವರ್ಷದ ಸಂಭ್ರಮ ಮಾಡಲು ಎಂದುಕೊಂಡಿರುವ ಮದ್ಯ ಪ್ರಿಯರಿಗೆ ನಕಲಿ ಮದ್ಯ ತಯಾರಕರು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಬ್ರಾಂಡೆಡ್ ಕಂಪ ನಿಗಳ ಲಕ್ಷ ಲಕ್ಷ ಮೌಲ್ಯದ ಮದ್ಯವನ್ನು ಅಸಲಿಯ ತಲೆಯ ಮೇಲೆ ಹೊಡೆದಂತೆ ತಯಾರಿಸುತ್ತಿದ್ದ ತಂಡವೊಂದನ್ನು ಅಬಕಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ನಕಲಿ ತಯಾರಿಕಾ ಅಡ್ಡೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಅಸಲಿ ಯಾವುದು, ನಕಲಿ ಯಾವುದು ಎಂದು ಕಂಡುಹಿಡಿಯಲು ಪೇಚಾಡಿದ ಘಟನೆ ನಡೆದಿದೆ.

ಸಾಕಷ್ಟು ನಿಯಮಾವಳಿಗಳನ್ನು ನಂತರ ಮದ್ಯ ತಯಾರು ಮಾಡುವ ಕಂಪನಿಗಳು ತಕ್ಕ ಮಟ್ಟಿಗೆ ಗುಣಮಟ್ಟ ಕಾಪಾಡಿಕೊಂ ಡು ನಿಗದಿಪಡಿಸಲಾದ ಪ್ರಮಾಣದಲ್ಲಿ ಕಂಟೆಂಟ್ ಗಳನ್ನು ಬೆರೆಸುತ್ತವೆ. ಜತೆಗೆ ಕರ್ನಾಟಕ ಸರ್ಕಾರ ನಿಗದಿಪಡಿಸಿದ ಲೇಬಲ್, ಸ್ಟಿಕ್ಚರ್, ಸೀಲ್ ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಈ ನಕಲಿ ಮದ್ಯ ತಯಾರಕರು ಸೇಮ್ ಟು ಸೇಮ್ ಕಂಪನಿಯ ಮದ್ಯದಂತೆ ಕಲರ್, ಸ್ಟಿಕ್ಕರ್, ಲೇಬಲ್, ಸೀಲ್ ಅಳವಡಿಸಿಕೊಂಡು ಲಕ್ಷಾಂತರ ರೂ ಮೌಲ್ಯದ ಮದ್ಯ ತಯಾರಿಕೆ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಪೊಲೀ ಸರು ಬರೋಬ್ಬರಿ ಎಂಟೂವರೆ ಲಕ್ಷ ರುಪಾಯಿ ಮೌಲ್ಯದ ನಕಲಿ ಮದ್ಯ ಜಪ್ತಿ ಮಾಡಿದ್ದಾರೆ.

ಮುಖ್ಯವಾಗಿ ನಕಲಿ ಮದ್ಯ ತಯಾರಿಕೆಗೆ ಕಳಪೆ ಮಟ್ಟದ ಸೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಬಳಸುತ್ತಿದ್ದರು.ದಾಳಿ ನಡೆಸಿದ ಅಧಿಕಾರಿಗಳಿಗೆ ನಕಲಿ ಬ್ರಾಡೆಂಡ್ ಮದ್ಯ ತಯಾರಿಕೆಗೆ ಈ ಖದೀಮರು ಉಪಯೋಗಿಸಿ ಬಿಸಾಕಿದ ಬ್ರಾಂಡೆಡ್ ಕಂಪನಿಗಳ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅದರಲ್ಲಿ ಅಸಲಿಯಂತೆ ಕಾಣುವ ನಕಲಿ ಮದ್ಯ ತುಂಬಿಸುತ್ತಿದ್ದರು.ಇಂತಹ 561 ಲೀಟರ್ ನಕಲಿ ಮದ್ಯವುಳ್ಳ 65 ಬಾಕ್ಸ್ ಹಾಗೂ 200 ಲೀಟರ್‌ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ.

ಈ ಗ್ಯಾಂಗ್ ಮಾರ್ಕೆಟ್ ನಲ್ಲಿ ಹೆಚ್ಚೆಚ್ಚು ಮಾರಾಟವಾಗುವ ಜನಪ್ರಿಯ ಬ್ರಾಂಡ್ ಗಳ ಮದ್ಯವನ್ನೇ ಡುಪ್ಲಿಕೇಟ್ ಮಾಡಿದ್ದಾರೆ.ಎಂ.ಸಿ.ಮೆಗ್ದಾಲ್‌ ನಂಬರ್ 1 ಹಾಗೂ ಇಂಪಿರಿಯಲ್ ಬ್ಲೂ ಬ್ರಾಂಡ್‌ಗಳನ್ನು ನಕಲಿ ಬಾಟಲ್ ತಯಾರಿಸಿದ್ದಾರೆ.ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕ್ಟರ್, ಸೀಲ್, ಕರ್ನಾಟಕ ಸರ್ಕಾರದ ಹಾಲೊಗ್ರಾಮ್ ಸಹಿತವಾಗಿ ನಕಲಿ ತಯಾರಿಸಿ ನಕಲಿ ಬಾಟಲ್ ರೆಡಿ ಮಾಡಿದ್ದಾರೆ.

ಜಿಲ್ಲೆಯ ಸಿಂದಗಿ ಪಟ್ಟಣದ ಹೊರವಲಯದಲ್ಲಿ ನಕಲಿ ಮದ್ಯ ತಯಾರಿಸೋ ಅಡ್ಡೆ ಹುಟ್ಟಿಕೊಂಡಿತ್ತು. ಸಿಂದಗಿಯ ಅಮೋಘಸಿದ್ದ ಹೂಗಾರ್‌ ಎಂಬುವವರ ಜಮೀನಿನಲ್ಲಿ ಹುಬ್ಬಳ್ಳಿಯ ಕಮರಿಪೇಟೆಯಿಂದ ಬಂದಿದ್ದ ಐವರು ದಂಧೆಕೋರರು ನಕಲಿ ಬ್ರಾಂಡೆಡ್ ಮದ್ಯ ತಯಾರಿಕೆಯಲ್ಲಿ ತೊಡಗಿದ್ದರು.ಈ ವೇಳೆ ಖಚಿತ ಮಾಹಿತಿ ಬಂದ ತಕ್ಷಣ ಸಿಂದಗಿ ಹಾಗೂ ವಿಜಯಪುರ ಅಬಕಾರಿ ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಈ ವೇಳೆ ಆರು ಆರೋಪಿಗಳನ್ನು ಬಂಧಿಸಿ, ನಕಲಿ ಮದ್ಯ ತುಂಬಿಸಿದ 18.50 ಲಕ್ಷ ಮೌಲ್ಯದ ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ. ಇವರೆಲ್ಲ ಹಳೆಯ ಆರೋಪಿಗಳು ಎಂಬುವುದು ಗೊತ್ತಾಗಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ತಿಳಿಸಿದ್ದಾರೆ.

Tags: adopting colorAmoghasidda Hoogar of Sindagi.eight and a half lakh rupees.Excise DC Veeranna Bagewadifake bottlesGuwahati made fake stickerslabelmanufacturing companiesseal as same to same company's liquor.sealsseized fake liquorstickerVijayapur Excise Police
Previous Post

ದಕ್ಷಿಣ ಕೊರಿಯಾದಲ್ಲಿ ಜೆಜು ಏರ್ ವಿಮಾನ ಲ್ಯಾಂಡಿಂಗ್‌ನಲ್ಲಿ ಪತನಗೊಂಡು 179 ಮಂದಿ ಸಾವು

Next Post

ಇಂದು ರಾಷ್ಟ್ರಕವಿ, ನಾಡಿನ ಹೆಮ್ಮೆಯ ಸಾಹಿತಿ ಕುವೆಂಪು ಅವರ ಜನ್ಮದಿನ,

Related Posts

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ
Top Story

ಶಬರಿಮಲೆಯಲ್ಲಿ ಎಐ ತಂತ್ರಜ್ಞಾನ ಅಳವಡಿಕೆ: ಭಕ್ತರ ದರ್ಶನಕ್ಕೆ ಮತ್ತಷ್ಟು ಸುಗಮ ವ್ಯವಸ್ಥೆ

by ಪ್ರತಿಧ್ವನಿ
June 13, 2026
0

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಶಬರಿಮಲೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿರುವಿತಾಂಕುರ್ ದೇವಸ್ವಂ ಬೋರ್ಡ್ (ಟಿಡಿಬಿ) ಮಹತ್ವದ ನಿರ್ಧಾರ ಕೈಗೊಂಡಿದೆ....

Read moreDetails
ರಾಜಕೀಯ ಚದುರಂಗದಲ್ಲಿ ಯಾವ ಕಾಯಿ ನಡೆಸ್ತಾರೆ ಅಂತಾ ಯಾರೂ ಹೇಳಲ್ಲ: ಸಿಎಂ ಡಿಕೆಶಿ

ಅಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಸಂದೇಶ: ‘ಲಂಚಕ್ಕೆ ಬ್ರೇಕ್, ಡ್ರಗ್ಸ್‌ಗೆ ಕಡಿವಾಣ, ಜನಸೇವೆಗೆ ಆದ್ಯತೆ’

June 13, 2026
ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

ಇರಾನ್ ಮಾಜಿ ಸರ್ವೋಚ್ಚ ನಾಯಕ ಅಲಿ ಖಮೇನಿ ಅಂತಿಮ ಯಾತ್ರೆಗೆ ದಿನಾಂಕ ನಿಗದಿ:ವಿಧಿವಿಧಾನ ಹೀಗಿರಲಿದೆ

June 13, 2026
‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

‘ಜೋಡಿ ನಂ.1’ನಾ ಅಥವಾ ‘ಡಿವೋರ್ಸ್ ನಂ.1’ನಾ? ರಿಯಾಲಿಟಿ ಶೋ ವಿರುದ್ಧ ವೀಕ್ಷಕರ ಆಕ್ರೋಶ

June 13, 2026
Priyanka Kharge: ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನೀತಿ 2025–32ಕ್ಕೆ ಅನುಮೋದನೆ

ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 50 ಕೃತಕ ಬುದ್ಧಿಮತ್ತೆ ಪ್ರಯೋಗಾಲಯ: ಭವಿಷ್ಯಕ್ಕಾಗಿ ಮಹತ್ವದ ಹೆಜ್ಜೆ

June 13, 2026
Next Post
ಇಂದು ರಾಷ್ಟ್ರಕವಿ, ನಾಡಿನ ಹೆಮ್ಮೆಯ ಸಾಹಿತಿ ಕುವೆಂಪು ಅವರ ಜನ್ಮದಿನ,

ಇಂದು ರಾಷ್ಟ್ರಕವಿ, ನಾಡಿನ ಹೆಮ್ಮೆಯ ಸಾಹಿತಿ ಕುವೆಂಪು ಅವರ ಜನ್ಮದಿನ,

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada