RCB ಅಂದ್ರೇನೆ ಹಾಗೇ, ಕೇವಲ ಇದೊಂದು ತಂಡ ಅಂತ ಅಭಿಮಾನಿಗಳಾಗಲಿ ಅಥವಾ ಆಟಗಾರರಾಗಲಿ ಎಂದಿಗೂ ಭಾವಿಸುವುದಿಲ್ಲ. ಯಾಕಂದ್ರೆ ಅಭಿಮಾನಿಗಳು ಮತ್ತು ಆಟಗಾರರು ಪರಸ್ಪರ ಭಾವನಾತ್ಮಕವಾಗಿ ಬೆಸೆದುಕೊಂಡಿರ್ತಾರೆ.
ಇದೇ ಕಾರಣಕ್ಕೆ ಈ ಬಾರಿ ಮೊಹಮ್ಮದ್ ಸಿರಾಜ್ (Mohammad Siraj) ಬೇರೆ ತಂಡದ ಪಾಲಾದ ಬೆನ್ನಲೆ RCB ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ ಪೋಸ್ಟ್ ಹಾಕಿದ್ರು. ಇದರ ಬೆನ್ನಲ್ಲೇ ಈಗ ಆರ್‌ಸಿಬಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್ (Faf duplesis) ಕೂಡ ಸೋಷಿಯಲ್ ಮೀಡಿಯಾ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ಧನ್ಯವಾದ ತಿಳಿಸಿದ್ದಾರೆ.
ಆರ್‌ಸಿಬಿ ಜೊತೆಗಿನ ನನ್ನ ಅಧ್ಯಾಯ ಮುಗಿದಿದೆ. RCB ಜೊತೆಗಿನ ನನ್ನ ಈ 3 ವರ್ಷಗಳ ಪ್ರಯಾಣ ಅದ್ಭುತವಾಗಿತ್ತು. ಬೆಂಗಳೂರು (Bangalore) ಮತ್ತು ಆರ್‌ಸಿಬಿಯ ಅಭಿಮಾನಿಗಳೆಂದರೆ ನನಗೆ ತುಂಬಾ ಅಚ್ಚುಮೆಚ್ಚು. ಬೆಂಗಳೂರು ಮತ್ತು ಬೆಂಗಳೂರಿನ ಜನರು ನನ್ನ ವ್ಯಕ್ತಿತ್ವದ ಭಾಗವಾಗಿದ್ದಾರೆ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
RCB ಜೊತೆಗಿಂದ ಒಡನಾಟ, ಅನುಭವ ಮತ್ತು ಈ ನೆನಪುಗಳನ್ನು ನಾನು ಯಾವಾಗಲೂ ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಈ ಮೂರು ವರ್ಷಗಳನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು ಅಂತ RCB ಫ್ರಾಂಚೈಸಿ ಹಾಗೂ ಫ್ಯಾನ್ಸ್‌ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.